ವಾಷಿಂಗ್ಟನ್: ಇಸ್ರೇಲ್ (Israel) ಮೇಲೆ ಇರಾನ್ (Iran) ದಾಳಿ ಮಾಡುವ ಸಾಧ್ಯತೆ ಇರುವ ಕಾರಣ ಅಮೆರಿಕ ಈಗ ತನ್ನ ಯುದ್ಧ ನೌಕೆಯನ್ನು (War Ship) ಇಸ್ರೇಲ್‌ಗೆ ಕಳುಹಿಸಿದೆ.
ಸಂಭವನೀಯ ಇರಾನ್ ದಾಳಿಯನ್ನು ಎದುರಿಸಲು ಅಮೆರಿಕ (USA) ಸನ್ನದ್ಧವಾಗಿದೆ. ಇಸ್ರೇಲ್ ಹಾಗೂ ಅಮೆರಿಕದ ಪಡೆಗಳ ರಕ್ಷಣೆಗಾಗಿ ಯುದ್ಧ ನೌಕೆಗಳು ಧಾವಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಮತ್ತು ಅಮೆರಿಕನ್ ಪಡೆಗಳನ್ನು ರಕ್ಷಿಸಲು ಯುಎಸ್ ಹೆಚ್ಚುವರಿ ಮಿಲಿಟರಿ ಸೇನೆಯ ಜೊತೆ ಎರಡು ಯುದ್ಧ ನೌಕೆಗಳನ್ನು ಪೂರ್ವ ಮೆಡಿಟರೇನಿಯನ್ ಸಮುದ್ರಕ್ಕೆ ಕಳುಹಿಸಿದೆ.
- Advertisement
- Advertisement
ಕ್ಷಿಪಣಿ (Missile) ಮತ್ತು ಡ್ರೋನ್ (Drone) ಮೂಲಕ ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಇರಾನ್ ಬಳಿ ಬ್ಯಾಲಿಸ್ಟಿಕ್ (Ballistic) ಮತ್ತು ಕ್ರೂಸ್ (Cruise Missiles) ಕ್ಷಿಪಣಿಗಳಿವೆ. ಇವು 2 ಸಾವಿರ ಕಿ.ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ – ಸೋಮವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್
ಶುಕ್ರವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅತೀ ಶೀಘ್ರದಲ್ಲಿ ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಿದ್ದರು.
ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನೂ ಓದಿ: 6 ವರ್ಷಗಳ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ
ಏಪ್ರಿಲ್ 1 ರಂದು ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಬಾಂಬ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕಮಾಂಡರ್ ಸೇರಿದಂತೆ 7 ಮಂದಿ ಇರಾನ್ ಮಿಲಿಟರಿ ಸಲಹೆಗಾರರು ಮೃತಪಟ್ಟಿದ್ದರು. ಈ ಏರ್ ಸ್ಟ್ರೈಕ್ ಅನ್ನು ಇಸ್ರೇಲ್ ಮಾಡಿದೆ ಎಂದು ಇರಾನ್ ದೂರಿದರೆ ಇಸ್ರೇಲ್ ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.