Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವರ್ಷಾನುಗಟ್ಟಲೆ ಟ್ರಾಫಿಕ್‌ ಕ್ಯಾಮೆರಾ‌ ಹ್ಯಾಕ್‌, ಮೊಬೈಲ್‌ ನೆಟ್‌ವರ್ಕ್‌ ಟ್ರ್ಯಾಕ್‌ – ಖಮೇನಿ ಹತ್ಯೆಗೆ ಇಸ್ರೇಲ್‌ ರಣತಂತ್ರ ಹೇಗಿತ್ತು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವರ್ಷಾನುಗಟ್ಟಲೆ ಟ್ರಾಫಿಕ್‌ ಕ್ಯಾಮೆರಾ‌ ಹ್ಯಾಕ್‌, ಮೊಬೈಲ್‌ ನೆಟ್‌ವರ್ಕ್‌ ಟ್ರ್ಯಾಕ್‌ – ಖಮೇನಿ ಹತ್ಯೆಗೆ ಇಸ್ರೇಲ್‌ ರಣತಂತ್ರ ಹೇಗಿತ್ತು?

Latest

ವರ್ಷಾನುಗಟ್ಟಲೆ ಟ್ರಾಫಿಕ್‌ ಕ್ಯಾಮೆರಾ‌ ಹ್ಯಾಕ್‌, ಮೊಬೈಲ್‌ ನೆಟ್‌ವರ್ಕ್‌ ಟ್ರ್ಯಾಕ್‌ – ಖಮೇನಿ ಹತ್ಯೆಗೆ ಇಸ್ರೇಲ್‌ ರಣತಂತ್ರ ಹೇಗಿತ್ತು?

Public TV
Last updated: March 3, 2026 11:35 am
Public TV
Share
2 Min Read
Khaemnei Location
SHARE

– ಟ್ರಾಫಿಕ್‌ ಕ್ಯಾಮೆರಾ ವಿಡಿಯೋಗಳನ್ನ ಅಮೆರಿಕಕ್ಕೆ ರವಾನಿಸಿದ್ದ ಮೊಸಾದ್‌

ಟೆಹ್ರಾನ್‌: ಇಸ್ರೇಲ್-ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಆಯತೋಲ್ಲಾ ಅಲಿ ಖಮೇನಿ (Ayatollah Khamenei) ಹತ್ಯೆಯಾಗಿದ್ದಾರೆ. ಖಮೇನಿ ಹತ್ಯೆ ಬಳಿಕವೂ ಇರಾನ್‌ ತನ್ನ ಪ್ರತೀಕಾರದ ದಾಳಿ ಮುಂದುವರಿಸಿದೆ. ಈ ಮಧ್ಯೆ ಖಮೇನಿ ಹತ್ಯೆಗೆ ಇಸ್ರೇಲ್‌ ರೂಪಿಸಿದ್ದ ದೀರ್ಘ ಕಾಲದ ರಣತಂತ್ರಗಳು ಬಹಿರಂಗವಾಗಿದೆ.

ಖಮೇನಿ ಹತ್ಯೆಗೆ ಪ್ಲ್ಯಾನ್‌ ರೂಪಿಸಲು ಇಸ್ರೇಲ್‌ನ ಗುಪ್ತಚರ ಸಂಸ್ಥೆ ವರ್ಷಾನುಗಟ್ಟಲೆ ಖಮೇನಿಯ ಪ್ರತಿ ಹೆಜ್ಜೆಯನ್ನೂ ಹಿಂಬಾಲಿಸುತ್ತಿತ್ತು. ಟೆಹ್ರಾನ್‌ನ ಎಲ್ಲಾ ಟ್ರಾಫಿಕ್‌ ಕ್ಯಾಮೆರಾಗಳನ್ನ ಹ್ಯಾಕ್‌ (Iran Traffic Cameras Hack) ಮಾಡಿದ್ದ ಇಸ್ರೇಲ್‌, ಆ ದೃಶ್ಯಗಳನ್ನ ಎನ್‌ಕ್ರಿಪ್ಟ್‌ ಮಾಡಿ ಸರ್ವರ್‌ಗಳಿಗೆ ರವಾನಿಸುತ್ತಿತ್ತು. ಈ ಮೂಲಕ ಅಮೆರಿಕನ್‌ ಪಡೆಗಳಿಗೆ ಖಮೇನಿ ಇರುವ ನಿಖರ ಸ್ಥಳಗಳನ್ನ ಗುರುತಿಸಲು ಅವಕಾಶ ಮಾಡಿಕೊಟ್ಟಿತು. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ – ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ

America iran Israel

ಅಷ್ಟೇ ಅಲ್ಲ ಖಮೇನಿ ಮತ್ತು ಅವರ ಭದ್ರತಾ ವಿವರಗಳನ್ನ ಮೇಲ್ವಿಚಾರಣೆ ಮಾಡಲು ಮೊಬೈಲ್‌ ನೆಟ್‌ವರ್ಕ್‌ (Mobile Network) ಪ್ರವೇಶಿಸಿ, ನಿರಂತರವಾಗಿ ಟ್ರ್ಯಾಕ್‌ ಮಾಡುತ್ತಿತ್ತು. ಈ ಮೂಲಕ ಮೊಸಾದ್‌ (ಇಸ್ರೇಲ್‌ನ ಗುಪ್ತಚರ ಸಂಸ್ಥೆ) ಖಮೇನಿಯ ಪ್ರತಿದಿನದ ಕಾರ್ಯ ಚಟುವಟಿಕೆಗಳನ್ನು ಚೆನ್ನಾಗಿ ತಿಳಿದುಕೊಂಡಿತ್ತು. ಈ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡುತ್ತಿದ್ದದ್ದು, ನಿಖರ ದಾಳಿಯಲ್ಲಿ ಖಮೇನಿ ಹತ್ಯೆಗೈಯಲು ಕಾರಣವಾಯಿತು.

ರಾತ್ರಿ ನಡೆಸಬೇಕಿದ್ದ ದಾಳಿ ಬೆಳಗ್ಗೆ ಮಾಡಿದ್ದೇಕೆ ಇಸ್ರೇಲ್-ಅಮೆರಿಕ?
ಹಲವು ತಿಂಗಳಿಂದ ಸಿಐಎ (ಕೇಂದ್ರೀಯ ಗುಪ್ತಚರ ಸಂಸ್ಥೆ – ಇದು ವಿದೇಶಿ ಗುಪ್ತಚರ ಸಂಸ್ಥೆ) ಖಮೇನಿಯನ್ನ‌ ಟ್ರ್ಯಾಕ್‌ ಮಾಡಿತ್ತು. ಶನಿವಾರ (ಫೆ.28) ಬೆಳಗ್ಗೆ ಖಮೇನಿ ಪ್ರಮುಖರೊಂದಿಗೆ ಸಭೆ ಸೇರುತ್ತಾರೆ ಎಂಬುದನ್ನ ತಿಳಿದಿದ್ದ ಸಿಐಎ, ಇಸ್ರೇಲ್‌ಗೆ ಮಾಹಿತಿ ರವಾನೆ ಮಾಡಿತ್ತು. ಇದನ್ನೂ ಓದಿ: 30 ಬಾಂಬ್‌ಗಳಿಂದ ದಾಳಿ – ತನ್ನ ಮನೆಯಲ್ಲೇ ಖಮೇನಿ ಹತ್ಯೆಗೆ ಅಮೆರಿಕ-ಇಸ್ರೇಲ್‌ ರೂಪಿಸಿದ್ದ ರಣತಂತ್ರ ಹೇಗಿತ್ತು?

ಈ ಬೆನ್ನಲ್ಲೇ ಅಲರ್ಟ್‌ ಆದ ಇಸ್ರೇಲ್‌, ಅಮೆರಿಕ ಸಮಯ ನಿಗದಿಪಡಿಸಿ ಇರಾನ್‌ ಮೇಲೆ ಜಂಟಿಯಾಗಿ ವಾಯುದಾಳಿ ನಡೆಸಿದವು. ಇಸ್ರೇಲ್‌ನ ಜೆಟ್‌ ವಿಮಾನವು ಖಮೇನಿ ಮನೆಯ ಕಾಂಪೌಂಡ್‌ ಮೇಲೆ 30 ಬಾಂಬ್‌ಗಳ ಪ್ರಬಲ ದಾಳಿ ನಡೆಸಿತು. ಯುದ್ಧ ವಿಮಾನವು ಭಾರತೀಯ ಕಾಲಮಾನ ಬೆಳಗ್ಗೆ 9:30 ಕ್ಕೆ ಹೊರಟಿತ್ತು. ಅದು ಇಸ್ರೇಲ್‌ನಿಂದ ಹೊರಟ 2 ಗಂಟೆ 20 ನಿಮಿಷಕ್ಕೆ (ಮಧ್ಯಾಹ್ನ 12:10 ಗಂಟೆಗೆ) ಖಮೇನಿ ಕಾಂಪೌಂಡ್‌ ಅನ್ನು ಉಡೀಸ್ ಮಾಡಿತು. ಈ ವೇಳೆ ಸಭೆಯಲ್ಲಿದ್ದ ಇರಾನ್‌ ಪ್ರಮುಖ ನಾಯಕರು ಜಂಟಿ ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾರೆ.

iran israel war

ದಾಳಿ ಸಮರ್ಥಿಸಿಕೊಂಡ ಇಸ್ರೇಲ್‌ ಪ್ರಧಾನಿ?
ಈ ನಡುವೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ಮೇಲಿನ ದಾಳಿಗಳನ್ನ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: Iran Israel War | ಇರಾನ್‌ ನಲ್ಲಿ 176 ಮಕ್ಕಳು ಸೇರಿ 700 ಕ್ಕೂ ಹೆಚ್ಚು ಜನ ಸಾವು – ಅಮೆರಿಕ

ಇರಾನ್ 47 ವರ್ಷಗಳಿಂದ ಅಮೆರಿಕಕ್ಕೆ ಸಾವಿನ ಘೋಷಣೆ ಕೂಗುತ್ತಿದೆ. 2 ಬಾರಿ ಟ್ರಂಪ್‌ ಹತ್ಯೆಗೆ ಪ್ರಯತ್ನಿಸಿದ್ದರು. ಅಲ್ಲದೇ ನಮ್ಮ ರಾಯಭಾರ ಕಚೇರಿಗಳ ಮೇಲೂ ಬಾಂಬ್‌ ದಾಳಿ ನಡೆಸಿದ್ದರು. ಅನೇಕ ನಾಗರಿಕರನ್ನು ಕೊಂದಿದ್ದು, ಮಾತ್ರವಲ್ಲದೇ ವಿಶ್ವಾದ್ಯಂತ ಭಯೋತ್ಪಾದನೆಯ ಜಾಲವನ್ನ ಹರಡಿದರು. ಹಾಗಾಗಿ ಇರಾನ್‌ ನಾಶಮಾಡಲು ಅಮೆರಿಕ ಮತ್ತು ಇಸ್ರೇಲ್‌ ಬದ್ಧವಾಗಿವೆ ಎಂದು ನುಡಿದಿದ್ದಾರೆ.

TAGGED:Ayatollah khameneiIran Israel WarIran Traffic CamerasIsraelKhaemnei LocationUSAಅಮೆರಿಕಇರಾನ್ಇಸ್ರೇಲ್ಖಮೇನಿ ಲೊಕೆಷನ್‌ಯುಎಸ್‍ಎ
Share This Article
Facebook Whatsapp Whatsapp Telegram

Cinema news

Ranveer Singh Rishab Shetty Kantara
ತುಳುನಾಡಿನ ದೈವಕ್ಕೆ ಅಪಮಾನ – ಕೇಸ್ ರದ್ದಿಗೆ ರಣವೀರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾ.9ಕ್ಕೆ ಮುಂದೂಡಿಕೆ
Cinema Latest Top Stories
Rashmika Mandanna Vijay Deverakonda
ತೆಲಂಗಾಣದ ಹೊಸ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ ವಿಜಯ್‌-ರಶ್ಮಿಕಾ
Cinema Latest South cinema Top Stories
Rashmika Mandanna Vijay Devarakonda 1
ದೇಶಾದ್ಯಂತ ಅನ್ನದಾನ ಮಾಡಲು ಮುಂದಾದ ರಶ್ಮಿಕಾ-ವಿಜಯ್
Cinema Latest South cinema Top Stories
Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood

You Might Also Like

Oil Price
Latest

Iran Israel War | ಬ್ಯಾರಲ್‌ಗೆ 100 ಡಾಲರ್‌ ಸಮೀಪಿಸಿದ ತೈಲ ಬೆಲೆ

Public TV
By Public TV
4 minutes ago
Savitha Shan
Crime

ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿ – ಭಾರತೀಯ ಮೂಲದ ವಿದ್ಯಾರ್ಥಿನಿ ದುರ್ಮರಣ

Public TV
By Public TV
33 minutes ago
Iran
Latest

Iran Israel War | ಇರಾನ್‌ ನಲ್ಲಿ 176 ಮಕ್ಕಳು ಸೇರಿ 700 ಕ್ಕೂ ಹೆಚ್ಚು ಜನ ಸಾವು – ಅಮೆರಿಕ

Public TV
By Public TV
1 hour ago
a young man was brutally killed after being hit by a car in holenarasipura hassan
Crime

ಹಾಸನ | ನಿಧಾನ ಕಾರ್ ಓಡಿಸು ಎಂದಿದ್ದಕ್ಕೆ ‌ಡಿಕ್ಕಿ ಹೊಡೆಸಿ ಯುವಕನ ಬರ್ಬರ ಹತ್ಯೆ, ಮೂವರಿಗೆ ಗಂಭೀರ ಗಾಯ

Public TV
By Public TV
1 hour ago
BANASHANKARI TEMPLE
Bengaluru City

ಗ್ರಹಣ ಆರಂಭಕ್ಕೂ ಮುನ್ನ ಬೆಂಗಳೂರಿನ ದೇವಾಲಯಗಳು ಬಂದ್‌ – ಯಾವ ದೇವಸ್ಥಾನದಲ್ಲಿ ಏನೇನು ಕಾರ್ಯಕ್ರಮ?

Public TV
By Public TV
2 hours ago
Contarctor House Fire Bengaluru Subramanyanagar
Bengaluru City

ಬೆಂಗಳೂರಿನ ಕಂಟ್ರಾಕ್ಟರ್ ಮನೆಯಲ್ಲಿ ಬೆಂಕಿ ಅವಘಡ – ಮಹಿಳೆ ಸಾವು, ಮೂವರ ರಕ್ಷಣೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?