ನವದೆಹಲಿ: ಅಂತಾರಾಷ್ಟ್ರೀಯ ಸ್ನೇಹ ದಿನವಾದ ಇದು ಇಸ್ರೇಲ್ ಭಾರತಕ್ಕೆ ವಿನೂತನ ರೀತಿಯಲ್ಲಿ ವಿಶ್ ಮಾಡಿದ್ದು, ಪ್ರಧಾನಿ ಮೋದಿ ಮತ್ತು ಅ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಫೋಟೋ ಇರುವ ವಿಡಿಯೋ ಟ್ವೀಟ್ ಮಾಡಿದೆ.
ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಅವರು ಪರಸ್ಪರ ಕೈಕುಲುಕುತ್ತಿರುವ ಫೋಟೋಗಳನ್ನು ಜೋಡಿಸಿ ವಿಡಿಯೋ ಮಾಡಿ, ಅ ವಿಡಿಯೋಗೆ ಬಾಲಿವುಡ್‍ನ ಪ್ರಸಿದ್ಧ ಗೀತೆ ಅಮಿತಾಭ್ ಬಚ್ಚನ್ ಅಭಿನಯದ ಶೋಲೆ ಚಿತ್ರದ,”ಹೇ ದೋಸ್ತಿ ಹಮ್ ನಹೀ ತೋಡೆಂಗೆ” ಹಾಡನ್ನು ಹಿನ್ನೆಲೆಗೆ ಬಳಸಿಕೊಂಡಿದೆ.
Advertisement
Happy #FriendshipDay2019 India!
May our ever strengthening friendship & #growingpartnership touch greater heights.
???????????? ये दोस्ती हम नहीं तोड़ेंगे….. ????????❤???????? pic.twitter.com/BQDv8QnFVj
— Israel in India (@IsraelinIndia) August 4, 2019
Advertisement
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಇಸ್ರೇಲ್ ರಾಯಭಾರ ಕಚೇರಿ ಹ್ಯಾಪಿ ಫ್ರೆಂಡ್‍ಶಿಪ್ ಡೇ-2019 ಇಂಡಿಯಾ. ನಮ್ಮದು ಸದಾ ತುಂಬ ಬಲಿಷ್ಠವಾದ ಸ್ನೇಹ ಮತ್ತು ನಮ್ಮ ಸ್ನೇಹ ತುಂಬ ಎತ್ತರಕ್ಕೆ ಬೆಳೆಯಲಿ ಎಂದು ಬರೆದು ಟ್ವೀಟ್ ಮಾಡಿದೆ. ಭಾರತ ಮತ್ತು ಇಸ್ರೇಲ್ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕತೆ ಮತ್ತು ಮಿಲಿಟರಿ ಹಾಗೂ ಕಾರ್ಯತಂತ್ರದಂತಹ ವಿಚಾರಗಳಲ್ಲಿ ತುಂಬ ಒಳ್ಳೆಯ ಸಂಬಂಧ ಹೊಂದಿದೆ.
Advertisement
תודה לך
מאחל יום חברות שמח לאזרחי ישראל הנהדרים ולידידי הטוב @netanyahu
הודו וישראל הוכיחו את ידידותם לאורך הזמן. הקשר שלנו הוא חזק ונצחי. מאחל שהידידות בין המדינות שלנו תצמח ותפרח אף יותר בעתיד https://t.co/PsZTgMoXMU
— Narendra Modi (@narendramodi) August 4, 2019
Advertisement
ಇದಕ್ಕೆ ಇಸ್ರೇಲ್ ಭಾಷೆಯಲ್ಲೇ ರೀಟ್ವೀಟ್ ಮಾಡಿರುವ ಮೋದಿ ಅವರು ನಮಗೆ ವಿಶ್ ಮಾಡಿದ ಇಸ್ರೇಲ್ ದೇಶದ ನಾಗರಿಕರಿಗೂ ಹಾಗೂ ನನ್ನ ಉತ್ತಮ ಸ್ನೇಹಿತ ಬೆಂಜಮಿನ್ ನೆತನ್ಯಾಹು ಅವರಿಗೆ ಧನ್ಯವಾದಗಳು. ಭಾರತ ಮತ್ತು ಇಸ್ರೇಲ್ ತಮ್ಮ ಸ್ನೇಹವನ್ನು ಸಾಬೀತುಪಡಿಸಿವೆ. ನಮ್ಮ ಸಂಬಂಧ ಬಲವಾದ ಮತ್ತು ಶಾಶ್ವತವಾಗಿದೆ. ನಮ್ಮ ದೇಶಗಳ ನಡುವಿನ ಸ್ನೇಹವು ಭವಿಷ್ಯದಲ್ಲಿ ಇನ್ನಷ್ಟು ಬೆಳೆಯುತ್ತದೆ ಮತ್ತು ಅರಳುತ್ತದೆ ಎಂದು ಹಾರೈಸುತ್ತೇನೆ ಎಂದು ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಸ್ರೇಲ್‍ನ ಚುನಾವಣಾ ಜಾಹೀರಾತುಗಳ ಬ್ಯಾನರ್‍ನಲ್ಲಿ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಅವರ ಫೋಟೋಗಳು ಕೂಡ ಕಂಡುಬಂದಿತ್ತು. ನನ್ನ ಅವಧಿಯಲ್ಲಿ ವಿದೇಶಗಳ ಜೊತೆ ಇಸ್ರೇಲ್ ಸಂಬಂಧ ಹೇಗೆ ಬದಲಾಗಿದೆ ಎನ್ನುವುದನ್ನು ಅಲ್ಲಿನ ಜನತೆಗೆ ತಿಳಿಸಲು ಮೋದಿ ಅವರ ಕಟೌಟ್ ಹಾಕಲಾಗಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಮೋದಿ ಭಾರತದ ಪ್ರಧಾನಿಯದಾಗ ನೆತನ್ಯಾಹು ಅವರು ವಿಶ್ವ ನಾಯಕನಾಗಿ ಮೊದಲು ಮೋದಿ ಅವರಿಗೆ ಅಭಿನಂದನೆ ಹೇಳಿದ್ದರು. ಸತತ ಐದು ಬಾರಿ ಇಸ್ರೇಲಿನ ಪ್ರಧಾನ ಮಂತ್ರಿಯಾಗಿರುವ ಬೆಂಜಮಿನ್ ನೆತನ್ಯಾಹು ಅವರು ಮತ್ತು ಮೋದಿ ಅವರು ಆತ್ಮೀಯ ಗೆಳೆಯರಾಗಿದ್ದಾರೆ.