ಟೆಲ್ ಅವಿವ್: ಇರಾನ್ (Iran) ಡ್ರೋನ್ ದಾಳಿ ಬೆನ್ನಲ್ಲೇ ಇಸ್ರೇಲ್‌ನ (Israel) ರಕ್ಷಣಾ ಪಡೆಗಳು ಅಲರ್ಟ್ ಆಗಿವೆ. ದೇಶದ ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ಇಸ್ರೇಲ್‌ನ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ಘೋಷಿಸಲಾಗಿದೆ.
ಇಸ್ರೇಲ್ ಮೇಲೆ 200 ಕ್ಕೂ ಹೆಚ್ಚು ಡ್ರೋನ್‌ಗಳ ದಾಳಿ ನಡೆದಿದೆ ಎನ್ನಲಾಗಿದೆ. ಇಸ್ರೇಲಿ ನಾಗರಿಕರು ಜಾಗರೂಕರಾಗಿರಬೇಕು. ಎಚ್ಚರಿಕೆಯ ಸೈರನ್ ಶಬ್ದ ಕೇಳಿದ ತಕ್ಷಣ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಇರಾನ್ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್
Advertisement
Advertisement
ಇರಾನ್ ದಾಳಿಗೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಎಚ್ಚರಿಕೆ ವಹಿಸಿವೆ. ದೇಶ ರಕ್ಷಣೆಗಾಗಿ ಆಕಾಶದಲ್ಲಿ ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ. IDF ವಕ್ತಾರ ರಿಯರ್-ಅಡ್ಮಿರಲ್ ಡೇನಿಯಲ್ ಹಗರಿ ಮಾತನಾಡಿ, ನಾಳೆಯಿಂದ ಶಾಲಾ-ಕಾಲೇಜುಗಳು ಇರುವುದಿಲ್ಲ. ಕಾರ್ಯಕ್ರಮ, ಪ್ರವಾಸ ಯಾವುದೂ ಇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
1,000 ಕ್ಕಿಂತ ಹೆಚ್ಚು ಜನರು ಸೇರುವ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ಹೋಮ್ ಫ್ರಂಟ್ ಕಮಾಂಡ್ ಹೇಳಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಇದನ್ನೂ ಓದಿ: ಇರಾನ್‌ನಿಂದ ಇಸ್ರೇಲ್ ಮೇಲೆ 100 ಕ್ಕೂ ಹೆಚ್ಚು ಡ್ರೋನ್ ದಾಳಿ
Advertisement
ಹಮಾಸ್ ಮತ್ತು ಇಸ್ರೇಲ್ ಯುದ್ಧ ನಡುವೆಯೇ ಇರಾನ್ ಸೇನೆಯು ಇಸ್ರೇಲ್ ಮೇಲೆ ನೂರಾರು ಸಂಖ್ಯೆಯಲ್ಲಿ ಡ್ರೋನ್‌ಗಳ ದಾಳಿ ನಡೆಸಿದೆ. ಈ ಬೆಳವಣಿಗೆ ಮತ್ತಷ್ಟು ಭೀತಿ ಹುಟ್ಟುಹಾಕಿದೆ. ಇರಾನ್‌ನಿಂದ ಇಸ್ರೇಲ್‌ನತ್ತ 100 ಕ್ಕೂ ಹೆಚ್ಚು ಡ್ರೋನ್‌ಗಳು ಹಾರುತ್ತಾ ಧಾವಿಸಿರುವುದು ಕಂಡುಬಂದಿದೆ ಎಂದು ಇಸ್ರೇಲ್ ಮಿಲಿಟರಿ ವರದಿಯಲ್ಲಿ ತಿಳಿಸಿದೆ.
ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ಏ.1 ರಂದು ವೈಮಾನಿಕ ದಾಳಿ ನಡೆಸಿತ್ತು. ಇದರಿಂದ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್ ಜನರಲ್ ಸೇರಿದಂತೆ 7 ಮಂದಿ ಸೇನಾಧಿಕಾರಿಗಳು ಹತರಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಇರಾನ್ ದಾಳಿಗೆ ಇಳಿದಿದೆ.