ಟೆಲ್ ಅವೀವ್: ಪಶ್ಚಿಮ ಏಷ್ಯಾದಲ್ಲಿ ಇರಾನ್ (Iran) ವಿರುದ್ಧ ನಡೆಯುತ್ತಿರುವ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಇಸ್ರೇಲ್ (Israel) ಸರ್ಕಾರ ಮಿಲಿಟರಿ ಖರೀದಿಗಳಿಗೆ 827 ಮಿಲಿಯನ್ ಡಾಲರ್ ಅಂದರೆ ಸುಮಾರು 7,656 ಕೋಟಿ ರೂ. ಮೊತ್ತದ ತುರ್ತು ಬಜೆಟ್ (Emergency Military Budget) ಹಂಚಿಕೆಗೆ ಅನುಮೋದನೆ ನೀಡಿದೆ.
ಕ್ಯಾಬಿನೆಟ್ ಮಂತ್ರಿಗಳ ಸಭೆಯಲ್ಲಿ ಸುಮಾರು 2.6 ಶತಕೋಟಿ ಶೇಕೆಲ್ ಮೌಲ್ಯದ ಈ ಪ್ಯಾಕೇಜ್‌ಗೆ ಒಪ್ಪಿಗೆ ನೀಡಲಾಗಿದೆ ಎಂದು ವರದಿಯಾಗಿದೆ. ಈ ನಿಧಿಯನ್ನು ಭದ್ರತಾ ಖರೀದಿಗಳು ಹಾಗೂ ತುರ್ತು ಅಗತ್ಯಗಳು ಪೂರೈಸಲು ಬಳಸಲಾಗುವುದು ಎಂದು ವಿವರಿಸಲಾಗಿದೆ. ಈ ಹೆಚ್ಚುವರಿ ಬಜೆಟ್ ನೊಂದಿಗೆ ಅಖಾಡಕ್ಕೆ ಇಳಿದಿರುವ ಇಸ್ರೇಲ್ ಇರಾನ್‌ನಲ್ಲಿ ಕನಿಷ್ಟ ಮೂರು ವಾರಗಳ ಕಾರ್ಯಾಚರಣೆಗೆ ಯೋಜನೆಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ – ಕೈಗಾರಿಕೆಗಳಿಗೆ ಭಾರೀ ಹೊಡೆತ!
ಐಡಿಎಫ್ ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್ ನೀಡಿರುವ ಹೇಳಿಕೆ ಪ್ರಕಾರ, ಈ ಅವಧಿಯಲ್ಲಿ ಸಾವಿರಾರು ಗುರಿಗಳನ್ನು ಹೊಡೆಯಬಹುದು, ಅಮೆರಿಕದ ಮಿತ್ರರಾಷ್ಟ್ರಗಳೊಂದಿಗೆ ಸಮನ್ವಯದಿಂದ ಕಾರ್ಯಾಚರಣೆಯನ್ನು ಮುಂದುವರಿಸಲು ಇಸ್ರೇಲ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಸ್ತಿಗಾಗಿ ಸ್ನೇಹಿತನಿಂದಲೇ ಕಬ್ಬಿನ ತೋಟದಲ್ಲಿ ಮಹಿಳೆಯ ಕೊಲೆ
ಇನ್ನು ಇರಾನ್‌ನ ಪ್ರತೀಕಾರದ ದಾಳಿಯ ನಡುವೆ ಪಶ್ಚಿಮ ಇರಾನ್‌ನಲ್ಲಿ ಬೃಹತ್ ವೈಮಾನಿಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಸೇನೆಯ ಪ್ರಕಾರ, ಇಸ್ರೇಲ್ ಪಡೆಗಳು ಇರಾನ್ ಆಡಳಿತದ ಮಿಲಿಟರಿ ಮತ್ತು ಮೂಲಸೌಕರ್ಯ ತಾಣಗಳನ್ನು ಗುರಿಯಾಗಿಸಿಕೊಂಡು ಬೃಹತ್ ದಾಳಿ ನಡೆಸಿದೆ. ಇಸ್ರೇಲ್ ಸೇನೆಯು ಇರಾನ್‌ನ ಪಶ್ಚಿಮ ಭಾಗದಲ್ಲಿರುವ ಸೌಕರ್ಯಗಳ ಮೇಲೆ ಈ ದಾಳಿಗಳನ್ನು ನಡೆಸಲಾಗುತ್ತಿದೆ. ದಾಳಿಯಿಂದ ಉಂಟಾದ ಹಾನಿ ಅಥವಾ ಸಾವುನೋವುಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ʻನಾನು ಸತ್ತಿದ್ದೇನೆʼ – ಕಾಫಿ ಕುಡಿಯುತ್ತಾ ವಿರೋಧಿಗಳನ್ನು ಟ್ರೋಲ್ ಮಾಡಿದ ನೆತನ್ಯಾಹು
ಇಸ್ರೇಲ್ ಯುದ್ಧೋನ್ಮಾದಲ್ಲಿದ್ದರೆ ಅಮೆರಿಕ ಮಾತ್ರ ಯುದ್ಧ ಮುಗಿಸುವ ಲೆಕ್ಕಚಾರದಲ್ಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿಕ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಯುದ್ಧವು ವಾರಗಳಲ್ಲಿ ಕೊನೆಗೊಳ್ಳಬಹುದು ಎಂದು ಹೇಳಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ಇರಾನ್ ಜೊತೆಗಿನ ಯುದ್ಧ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 9/11 ರೀತಿ ದಾಳಿ ನಡೆಸಿ ನಮ್ಮ ಮೇಲೆ ಆರೋಪ ಹೊರಿಸಲು ಎಪ್ಸ್ಟೀನ್ ಜಾಲ ಪ್ಲ್ಯಾನ್: ಇರಾನ್ ಆರೋಪ
ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು, ಸಂಘರ್ಷ ಮುಂದಿನ ಕೆಲವು ವಾರಗಳಲ್ಲಿ ಖಂಡಿತವಾಗಿಯೂ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಬಹುಶಃ ಅದಕ್ಕಿಂತ ಬೇಗ ಆಗಬಹುದು. ನಾವು ಇಂಧನ ಪೂರೈಕೆಯಲ್ಲಿ ಚೇತರಿಕೆ ಮತ್ತು ಅದರ ನಂತರ ಬೆಲೆಗಳಲ್ಲಿ ಇಳಿಕೆಯನ್ನು ನೋಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎನ್‌ಡಿಎ ಗೆದ್ದರೆ ವಿಜಯ್‌ಗೆ ಡಿಸಿಎಂ ಹುದ್ದೆ- ಟಿವಿಕೆಗೆ ಬಿಜೆಪಿ ಆಫರ್
ಒಟ್ಟಿನಲ್ಲಿ ಅಮೆರಿಕ ಯುದ್ಧ ಮುಗಿಸುವ ಲೆಕ್ಕಚಾರದಲ್ಲಿದ್ದರೂ ಇಸ್ರೇಲ್ ಮತ್ತು ಇರಾನ್ ಮಾತ್ರ ತಮ್ಮ ದಾಳಿಯ ತೀವ್ರತೆ ಕಡಿಮೆ ಮಾಡುತ್ತಿಲ್ಲ. ಇದರಿಂದ ಸಂಘರ್ಷ ಇನ್ನಷ್ಟು ದಿನ ತೀವ್ರ ಸ್ವರೂಪದಲ್ಲೇ ಇರುವ ಸಾಧ್ಯತೆಗಳು ದಟ್ಟವಾಗಿದೆ. ಇದನ್ನೂ ಓದಿ: ದೈವಾರಾಧನೆಯ ಕಟ್ಟುಪಾಡು ಮುರಿದು ನೇಮೋತ್ಸವ – ಕ್ರೈಸ್ತ ಸಮುದಾಯದ ವ್ಯಕ್ತಿಯಿಂದ ದೈವ ನರ್ತನ!

