ಹಮಾಸ್-ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ

Public TV
1 Min Read
Israel Air Strike

ಟೆಲ್ ಅವಿವ್: ಕಳೆದ ಆರು ವಾರಗಳಿಂದ ನಡೀತಿರೋ ಹಮಾಸ್-ಇಸ್ರೇಲ್ (Israel- Hamas) ಭೀಕರ ಯುದ್ಧದದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಒತ್ತೆಯಾಳುಗಳ ಬಿಡುಗಡೆಗಾಗಿ ಕದನವಿರಾಮಕ್ಕೆ ಅಂತಾರಾಷ್ಟ್ರೀಯ ಸಮುದಾಯ ನಡೆಸ್ತಿದ್ದ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ.

50 ಒತ್ತೆಯಾಳುಗಳ ಬಿಡುಗಡೆ ಸಂಬಂಧ ಇಸ್ರೇಲ್-ಹಮಾಸ್ ನಡ್ವೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದಕ್ಕೆ ಇಸ್ರೇಲ್ ಸಂಪುಟ ಒಪ್ಪಿಗೆ ನೀಡಿದೆ. ಈ ಒಪ್ಪಂದದ ಭಾಗವಾಗಿ ಇಸ್ರೇಲ್ 4 ದಿನ ಪ್ಯಾಲಿಸ್ತೇನ್ ಮೇಲೆ ಯಾವುದೇ ರೀತಿಯ ದಾಳಿಯನ್ನು ಮಾಡಲ್ಲ. ಈ ಸಂದರ್ಭದಲ್ಲಿ 240 ಒತ್ತೆಯಾಳುಗಳ ಪೈಕಿ ಮಕ್ಕಳು, ಮಹಿಳೆಯರು ಸೇರಿ ಕನಿಷ್ಠ 50 ಮಂದಿಯನ್ನು ಹಮಾಸ್ ಬಿಡುಗಡೆ ಮಾಡಬೇಕಾಗುತ್ತದೆ.

ಅತ್ತ ಇಸ್ರೇಲ್ ಕೂಡ ತಮ್ಮ ಜೈಲುಗಳಲ್ಲಿರೋ ಪ್ಯಾಲಿಸ್ತೇನ್ (Palestine) ಮಹಿಳೆಯರು, ಮಕ್ಕಳನ್ನು ಬಿಡುಗಡೆ ಮಾಡಲಿದೆ. ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆತರಬೇಕೆಂಬ ಕಾರಣಕ್ಕೆ ಕಠಿಣವಾದರೂ ಸರಿಯಾದ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ದಿನಕ್ಕೆ ಕನಿಷ್ಠ 10 ಒತ್ತೆಯಾಳುಗಳನ್ನು ರಿಲೀಸ್ ಮಾಡ್ತಿದ್ರೆ ಕದನ ವಿರಾಮ ವಿಸ್ತರಣೆಗೊಳ್ಳುತ್ತದೆ ಎಂದು ಇಸ್ರೇಲ್ ತಿಳಿಸಿದೆ. ಇದನ್ನೂ ಓದಿ: ಆಸ್ಟ್ರೇಲಿಯಾಗೆ ಬಂದಿಳಿದ ಚಾಂಪಿಯನ್ ಪ್ಯಾಟ್ ಕಮ್ಮಿನ್ಸ್- ಸ್ವಾಗತಿಸಲು ಜನವೇ ಇಲ್ಲ

ಕದನ ವಿರಾಮ ಯಾವಾಗಿನಿಂದ ಜಾರಿ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. ಕದನ ವಿರಾಮ ಒಪ್ಪಂದವನ್ನು ಅಮೆರಿಕ (America) ಸೇರಿ ವಿವಿಧ ದೇಶಗಳು ಸ್ವಾಗತಿಸಿವೆ. ಈ ಮಧ್ಯೆ ಒಪ್ಪಂದ ಏರ್ಪಟ್ಟ ಕೆಲವೇ ಕ್ಷಣಗಳಲ್ಲಿ ಓರ್ವ ಒತ್ತೆಯಾಳು ಮಹಿಳೆ ಸಾವನ್ನಪ್ಪಿದ್ದಾರೆ.

Share This Article