ಟೆಲ್ ಅವಿವ್: ಇಸ್ರೇಲ್-ಪ್ಯಾಲೆಸ್ತೀನ್ (Israel-Palestine) ನಡುವಿನ ಯುದ್ಧದಲ್ಲಿ 60 ಕ್ಕೂ ಹೆಚ್ಚು ಪ್ರಜೆಗಳು ಸಾವನ್ನಪ್ಪಿದ್ದಾರೆ. ಯಾವ ದೇಶದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಮತ್ತು ಕಾಣೆಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಯುದ್ಧದಲ್ಲಿ ಈವರೆಗೆ ಅಮೇರಿಕಾದ 9 ಮಂದಿ ಸಾವಿಗೀಡಾಗಿದ್ದಾರೆ. ಕೆನಡಾ – 1 (ಇಬ್ಬರು ಕಾಣೆ), ಗ್ರೇಟ್ ಬ್ರಿಟನ್ – 10 ಕ್ಕೂ ಹೆಚ್ಚು ಮಂದಿ ಸಾವು ಅಥವಾ ಕಾಣೆಯಾಗಿದ್ದಾರೆ. ಫ್ರಾನ್ಸ್ – 1 ಸಾವು (ಹಲವಾರು ಕಾಣೆ), ಥೈಲ್ಯಾಂಡ್ – 12 ಸಾವು (11 ಕಾಣೆ), ನೇಪಾಳ – 10 ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಂಡನ್‌ನಲ್ಲಿ ಇಸ್ರೇಲ್, ಪ್ಯಾಲಿಸ್ತೀನ್ ಪರ ಪ್ರತಿಭಟನಾಕಾರರ ನಡುವೆ ಘರ್ಷಣೆ
Advertisement
Advertisement
ಜರ್ಮನಿ – ದೃಢೀಕರಿಸದ/ಕಾಣೆಯಾದ ಸಾವಿನ ಸಂಖ್ಯೆ, ರಷ್ಯಾ – 1, ಕಾಂಬೋಡಿಯಾ – 1, ಚೀನಾ – ಸಾವು/ಹಾನಿಗಳ ಸಂಖ್ಯೆಯನ್ನು ದೃಢೀಕರಿಸಲಾಗಿಲ್ಲ. ಬ್ರೆಜಿಲ್ – 3 ಮಂದಿ ಗಾಯಗೊಂಡಿದ್ದಾರೆ. ಪರಾಗ್ವೆ – 2 ಸಾವು ಅಥವಾ ಕಾಣೆ, ಉಕ್ರೇನ್ – ಇಬ್ಬರು ಮೃತಪಟ್ಟಿದ್ದಾರೆ.
Advertisement
ಮೆಕ್ಸಿಕೋದ ಇಬ್ಬರು ಕೈದಿಗಳು, ಐರ್ಲೆಂಡ್‌ನ ಒಬ್ಬರು ಗಾಯಗೊಂಡಿದ್ದಾರೆ. ತಾಂಜಾನಿಯಾದ ಇಬ್ಬರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗಾಜಾ ಸೀಜ್‌ಗೆ ಇಸ್ರೇಲ್ ಆದೇಶದ ಬೆನ್ನಲ್ಲೇ ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಮಾಸ್
Advertisement
ಅಕ್ಟೋಬರ್ 7 ರಂದು ಹಮಾಸ್ (Hamas) ಬಂಡುಕೋರರು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿದರು. ದೇಶದ ದಕ್ಷಿಣ ಮತ್ತು ಮಧ್ಯ ಭಾಗಗಳಿಗೆ ರಾಕೆಟ್‌ಗಳ ಸುರಿಮಳೆ ಸುರಿಸಿ 700 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಯಿತು.
Web Stories