ಗಾಂಧಿನಗರ: ಮಹಿಳೆ ಸೇರಿ ನಾಲ್ವರು ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು (Islamic State) ಭಯೋತ್ಪಾದನಾ ನಿಗ್ರಹ ದಳ (ATS) ಗುಜರಾತ್‍ನ (Gujarat) ಪೋರಬಂದರ್‌ನಲ್ಲಿ (Porbandar) ಬಂಧಿಸಿದೆ.
ಬಂಧಿತ ನಾಲ್ವರು ಆರೋಪಿಗಳು ಐಎಸ್ ಉಗ್ರಗಾಮಿ ಘಟಕದ ಭಾಗವಾಗಿದ್ದಾರೆ. ಕಳೆದ ಒಂದು ವರ್ಷದಿಂದ ಪರಸ್ಪರ ಸಂಪರ್ಕದಲ್ಲಿದ್ದಾರೆ. ಅಲ್ಲದೇ ದೇಶ ತೊರೆದು ಐಎಸ್ ಸೇರಲು ಯೋಜನೆ ರೂಪಿಸಿದ್ದರು. ಅವರ ಚಲನವಲನವನ್ನು ಎಟಿಎಸ್ (Anti-Terrorist Squad) ಗಮನಿಸಿತ್ತು. ಖಚಿತ ಮಾಹಿತಿ ಮೇರೆಗೆ ಡಿಐಜಿ ದೀಪನ್ ಭದ್ರನ್ ಮತ್ತು ಎಸ್ಪಿ ಸುನೀಲ್ ಜೋಶಿ ನೇತೃತ್ವದಲ್ಲಿ ದಾಳಿ ನಡೆಸಿ ಸುಮೇರಾ ಎಂಬ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ – ಸೇನೆಯಿಂದ ಶೋಧ ಕಾರ್ಯ
Advertisement
Advertisement
ದಾಳಿ ವೇಳೆ ಸ್ಫೋಟಕ ವಸ್ತುಗಳು ಹಾಗೂ ಐಎಸ್ ಉಗ್ರರ ಬರಹಗಳು ಸಿಕ್ಕಿವೆ. ಆರೋಪಿಗಳು ಪಾಕಿಸ್ತಾನದ (Pakistan) ಗಡಿಯುದ್ದಕ್ಕೂ ಯುವಕರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸಜ್ಜುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟರ್ಕಿ ಹಡಗು ಹೈಜಾಕ್- ಕಾರ್ಯಾಚರಣೆಗಿಳಿದ ಇಟಲಿ ಸೇನಾ ಪಡೆ
Advertisement