ಇಸ್ಲಾಮಾಬಾದ್: ಇತ್ತೀಚೆಗೆ ಹೈದರಾಬಾದ್ ನಲ್ಲಿ ಮರ್ಯಾದಾ ಹತ್ಯೆ ನಡೆದಿದ್ದು, ಈಗ ತಂದೆಯೇ ತನ್ನ ಮಗಳು ಮತ್ತು ಆಕೆಯ ಪ್ರೇಮಿಯ ತಲೆಯನ್ನು ಶಿರಚ್ಛೇದನ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಈ ಘಟನೆ ಭಾನುವಾರ ಪಾಕಿಸ್ತಾನದ ಅಟ್ಟೋಕ್ ಜಿಲ್ಲೆಯ ಚಿಕ್ಕ ಗ್ರಾಮವೊಂದರಲ್ಲಿ ನಡೆದಿದ್ದು, 18 ವರ್ಷ ವಯಸ್ಸಿನ ಹುಡುಗಿ ಮತ್ತು ಆಕೆಯ 21 ವರ್ಷದ ಪ್ರೇಮಿಯನ್ನು, ಕುಟುಂಬದ ಗೌರವ ಕಾಪಾಡುವ ಸಲುವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಪ್ರೇಮಿ ತನ್ನ ಹುಡುಗಿಯನ್ನು ಆಕೆಯ ಮನೆಯಲ್ಲಿಯೇ ಭೇಟಿಯಾಗಿ ಮಾತನಾಡುತ್ತಿದ್ದನು. ಈ ವೇಳೆ ಹುಡುಗಿಯ ತಂದೆ ಇದನ್ನು ನೋಡಿ ಕೋಪಗೊಂಡಿದ್ದು, ಮಗಳನ್ನು ಮತ್ತು ಪ್ರೇಮಿಯನ್ನು ಹಿಡಿದಿದ್ದಾನೆ. ಬಳಿಕ ಹುಡುಗಿಯ ಚಿಕ್ಕಪ್ಪ ಇಬ್ಬರನ್ನು ಹಗ್ಗದಿಂದ ಕಟ್ಟಿ ತಕ್ಷಣವೇ ಕ್ರೂರವಾಗಿ ಇಬ್ಬರ ಶಿರಚ್ಛೇದನ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿದಂತೆ ಇಬ್ಬರು ಸಂಶಯಾಸ್ಪದರನ್ನು ಬಂಧಿಸಲಾಗಿದ್ದು, ಕೊಲೆ ಮಾಡಲು ಬಳಸಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸದ್ದಾರ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಸಿಫ್ ಖಾನ್ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಕುಟುಂಬದ ಪ್ರತಿಷ್ಠೆ, ಗೌರವಕ್ಕೆ ಬೆದರಿ ಮರ್ಯಾದಾ ಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. 2016 ಅಕ್ಟೋಬರ್ ನಿಂದ 2017 ಜೂನ್ ವೇಳೆಗೆ 280 ಮರ್ಯಾದಾ ಪ್ರಕರಣವನ್ನು ಮಾನವ ಹಕ್ಕುಗಳ ರಕ್ಷಣಾ ಆಯೋಗ ದಾಖಲಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv