ಕ್ಯಾನ್ಬೆರಾ: ಆಸ್ಟ್ರೇಲಿಯಾದ (Australia) ಮೇಲ್ಬೊರ್ನ್ ಪಾರ್ಕ್‌ನಲ್ಲಿರುವ (Melbourne Park) ಇಸ್ಕಾನ್ ದೇವಾಲಯದ (Iskcon Temple) ಗೋಡೆಗಳ ಮೇಲೆ ಖಲಿಸ್ತಾನ್ ಪರ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಬರೆದು ದೇವಾಲಯ ವಿರೂಪಗೊಳಿಸಿರುವ ಘಟನೆ ನಡೆದಿದೆ.
ಈ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ (Hindhu Temple) ಮೇಲೆ ನಡೆದಿರುವ 3ನೇ ಘಟನೆ ಇದಾಗಿದೆ. ಪ್ರಸಿದ್ಧ ಶ್ರದ್ಧಾ ಭಕ್ತಿ ಕೇಂದ್ರವಾದ ಇಸ್ಕಾನ್ ದೇವಾಲಯದ ಗೋಡೆಯ ಮೇಲೆ ಕಿಡಿಗೇಡಿಗಳು `ಖಲಿಸ್ತಾನ್ ಜಿಂದಾಬಾದ್’ (Khalistan Graffiti) ಘೋಷಣೆ ಬರೆದು ವಿರೂಪಗೊಳಿಸಿದ್ದಾರೆ. ಇದರಿಂದ ಭಕ್ತರು ಆಕ್ರೋಶಗೊಂಡಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪುನರಾವರ್ತಿತ ವಿಧ್ವಂಸಕ ಘಟನೆಗಳ ಕುರಿತು ವಿಕ್ಟೋರಿಯನ್ ಬಹುಸಾಂಸ್ಕೃತಿಕ ಆಯೋಗದೊಂದಿಗೆ ಧಾರ್ಮಿಕ ನಾಯಕರು ತುರ್ತು ಸಭೆ ನಡೆಸಿದ ಎರಡು ದಿನಗಳ ನಂತರ ಈ ದಾಳಿ ನಡೆದಿದೆ. ಇದನ್ನೂ ಓದಿ: ರೋಹಿತ್ ಶರ್ಮಾ ಈ ತಪ್ಪನ್ನು ಮಾಡ್ತಾರೆ: ಇರ್ಫಾನ್ ಪಠಾಣ್
ಇದೇ ತಿಂಗಳ ಜನವರಿ 12 ರಂದು, ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನೂ ಭಾರತ ವಿರೋಧಿ ಗೀಚು ಬರಹಗಳಿಂದ ವಿರೂಪಗೊಳಿಸಲಾಗಿತ್ತು. ಇದಾದ 5 ದಿನಗಳ ನಂತರ ಕ್ಯಾರಂ ಡೌನ್ಸ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯವನ್ನು ವಿರೂಪಗೊಳಿಸಿರುವುದು ಕಂಡುಬಂದಿತ್ತು. ಇದನ್ನೂ ಓದಿ: ಸರಣಿ ಅವಘಡಗಳು ಆಗ್ತಿದ್ರೂ ನಿದ್ರೆಯಲ್ಲಿರೋ ನಮ್ಮ ಮೆಟ್ರೋ!
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k