ಬೆಂಗಳೂರು: ರಾಜ್ಯ ರಾಜಧಾನಿ ಹೈಟೆಕ್ ಗಾರ್ಡನ್ ಸಿಟಿ ದಿನದಿಂದ ದಿನಕ್ಕೆ ಅಭಿವೃದ್ಧಿಯ ಮಹಾಶಿಖರವನ್ನು ಏರುತ್ತಿದೆ. ಐಟಿಬಿಟಿ ಸಿಟಿಯಾಗಿರೋ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ (BMTC) ಬಳಿಕ ಅತ್ಯಂತ ಜನಪ್ರಿಯತೆ ಹೊಂದಿರುವುದು ನಮ್ಮ ಮೆಟ್ರೋ (Namma Metro). ಸದ್ಯ ಇರೋ 42.5 ಕಿ.ಮೀ ಮೆಟ್ರೋ ಮಾರ್ಗದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಿದ್ದಾರೆ. ಈ ಮೆಟ್ರೋ ಕಾರಿಡಾರ್ ಅನ್ನು ನಗರದ ನಾನಾ ಭಾಗಗಳಿಗೆ ವಿಸ್ತರಣೆ ಮಾಡುವ ಕೆಲಸವೂ ಶರವೇಗದಲ್ಲಿ ನಡೆಯುತ್ತಿದೆ. ಆದರೆ ಅದರಿಂದ ಆಗುತ್ತಿರುವ ಅವಘಡಗಳಿಗೆ ಮಾತ್ರ ಜನರು ಬಲಿಪಶುಗಳಾಗುತ್ತಿದ್ದಾರೆ.
Advertisement
ಹೌದು, 2023 ಯಾಕೋ ಮೆಟ್ರೋ ಕಾಮಗಾರಿಗಳಿಗೆ ಬ್ಯಾಡ್ ಇಯರ್ ಆಗ್ತಿದೆ. ಈ ವರ್ಷದ ಮೊದಲ ತಿಂಗಳ 3 ವಾರದಲ್ಲೇ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ 3ನೇ ದುರಂತ ಭಾನುವಾರ ನಡೆದಿದೆ. ಜನವರಿ 10 ರಂದು ನಾಗವಾರದ ಬಳಿ ಮೆಟ್ರೋ ಪಿಲ್ಲರ್ (Metro Pillar) ಬಿದ್ದು ತಾಯಿ-ಮಗು ಸ್ಥಳದಲ್ಲೇ ಮೃತರಾಗಿದ್ದರು. ಜನವರಿ 12 ರಂದು ಬ್ರಿಗೇಡ್ ರೋಡ್‌ನಲ್ಲಿ ಮೆಟ್ರೋ ಅಂಡರ್ ಗ್ರೌಂಡ್ ಕಾಮಗಾರಿಯ ಫಲವಾಗಿ ರಸ್ತೆ ಕುಸಿತವಾಗಿತ್ತು. ಇದರಿಂದ ಇಬ್ಬರು ಬೈಕ್ ಸವಾರರಿಗೆ ಗಾಯಗಳಾಗಿದ್ದವು.
Advertisement
ಭಾನುವಾರ ಸಂಜೆ ವೈಟ್ ಫೀಲ್ಡ್ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದ ಕಾರಿನಲ್ಲಿ ಹೋಗುತ್ತಿದ್ದವರು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ. ಹೌದು ದೊಡ್ಡನಕುಂದಿ ಜಂಕ್ಷನ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಬ್ಯಾರಿಕೇಡ್ ಬಿದ್ದು ಕಾರು ಜಖಂ ಆಗಿದೆ. ಹುಂಡೈ ಐ10 ಕಾರಿನ ಮೇಲೆ ಬ್ಯಾರಿಕೇಡ್ ಬಿದ್ದಿದ್ದು ಕಾರಿನಲ್ಲಿದ್ದವರು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.
Advertisement
Advertisement
ಒಂದರ ಬಳಿಕ ಒಂದು ಅವಘಡಗಳು ಆಗುತ್ತಿದ್ದರೂ ಬಿಎಂಆರ್‌ಸಿಎಲ್ ಮಾತ್ರ ಇದಕ್ಕೂ ನಮಗೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ಪರಿಹಾರ ಕೊಡ್ತೀವಿ, ಸರಿ ಮಾಡ್ತೀವಿ ಎನ್ನುತ್ತಿದ್ದಾರೆ. ಆದರೆ ಕಾಮಗಾರಿ ಮಾಡುವಾಗ ಏಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ. ಟೆಂಡರ್ ಪಡೆದವರು, ಕಾಮಗಾರಿಯ ಸೈಟ್ ಎಂಜಿನಿಯರುಗಳು ಏನು ಮಾಡುತ್ತಿದ್ದಾರೆ? ಇವರು ಕೆಲಸ ಮಾಡಿಸುವಾಗ ಯಾವ ರೀತಿ ಸೇಫ್ಟಿ ಮೆಜರ್ಮೆಂಟ್ ತೆಗೆದುಕೊಳ್ಳಬೇಕು ಎನ್ನುವುದೇ ಗೊತ್ತಿಲ್ವಾ? ಈ ಎಲ್ಲಾ ಪ್ರಶ್ನೆಗಳಿಗೂ ಬಿಎಂಆರ್‌ಸಿಎಲ್ ಉತ್ತರಿಸಬೇಕಿದೆ. ಇದನ್ನೂ ಓದಿ: ಪೊಲೀಸರಿಗೂ ಕ್ಯಾರೆ ಅನ್ನದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಬೈಕ್ ರೈಡ್
ನಾಗವಾರದ ದುರಂತವಾಗುತ್ತಿದ್ದಂತೆ ಸಿಎಂ ಕೂಡಾ ಬಿಎಂಆರ್‌ಸಿಎಲ್ ಎಂಡಿ, ಅಜುಂ ಪರ್ವೇಜ್ ಮತ್ತು ಹಿರಿಯ ಅಧಿಕಾರಿಗಳನ್ನು ಕರೆಸಿ ವಾರ್ನಿಂಗ್ ಕೂಡಾ ಕೊಟ್ಟಿದ್ದರು. ಸಿಎಂ ವಾರ್ನಿಂಗ್ ಕೊಟ್ಟಿದ್ದರೂ ಪದೇ ಪದೇ ಹೀಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನೂ ಈ ಕಿಲ್ಲರ್ ಮೆಟ್ರೋಗೆ ಅದೆಷ್ಟು ಬಲಿ ಬೇಕೋ ಗೊತ್ತಿಲ್ಲ. ಇದನ್ನೂ ಓದಿ: ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k