Connect with us

ಪೌರಕಾರ್ಮಿಕರಿಗೆ ಇಸ್ಕಾನ್ ನೀಡಿದ ಅನ್ನ ತಿನ್ನಲು ಯೋಗ್ಯವಲ್ಲ- ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್ ವರದಿ

ಪೌರಕಾರ್ಮಿಕರಿಗೆ ಇಸ್ಕಾನ್ ನೀಡಿದ ಅನ್ನ ತಿನ್ನಲು ಯೋಗ್ಯವಲ್ಲ- ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್ ವರದಿ

ಬೆಂಗಳೂರು: ಇಸ್ಕಾನ್ ಸಂಸ್ಥೆಯವರು ಪೌರ ಕಾರ್ಮಿಕರಿಗೆ ಹಳಸಿದ ಅನ್ನ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಹೆಲ್ತ್ ಇನ್ಸ್ ಟಿಟ್ಯೂಟ್‍ನಿಂದ ವರದಿ ಬಂದಿದ್ದು, ಈ ಅನ್ನ ತಿನ್ನಲು ಯೋಗ್ಯವಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನಲ್ಲಿ ಮಾರ್ಚ್ 27ರಂದು ಪೌರಕಾರ್ಮಿಕರಿಗೆ ವಿತರಿಸಿದ ಅನ್ನ ತಿನ್ನಲು ಯೋಗ್ಯವಲ್ಲ ಎಂದು ಮೈಕ್ರೊ ಬಯಾಲಜಿಸ್ಟ್ ಹೇಳಿದ್ದಾರೆ. ಮಾರ್ಚ್ 27 ರಂದು ಇಸ್ಕಾನ್ ನಿಂದ ಪೌರಕಾರ್ಮಿಕರಿಗೆ ಹಳಸಿದ ಅನ್ನ ನೀಡಲಾಗಿತ್ತು. ಹಳಸಿದ ಅನ್ನವನ್ನು ಮಾಜಿ ಕಾರ್ಪೋ ರೇಟರ್ ಧನರಾಜ್ ಬಿಬಿಎಂಪಿಗೆ ತೆಗೆದುಕೊಂಡು ಬಂದಿದ್ರು.

ಧರ್ಮರಾಯ ಗುಡಿ ವಾರ್ಡ್ ನ ಕಾರ್ಪೋ ರೇಟರ್ ಪ್ರತಿಭಾ ಪತಿಯಾದ ಧನರಾಜ್, ಈ ಹಿಂದೆಯೂ ಸಹ ಹಳಸಿದ ಅನ್ನ ಕೊಟ್ಟಿದ್ದಾಗಿ ಆರೋಪ ಮಾಡಿದ್ರು. ವಾಸನೆ ಬರ್ತಿರೋ ಅನ್ನವನ್ನು ಬಿಬಿಎಂಪಿ ಸಭೆಯಲ್ಲಿ ತೋರಿಸಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಗಲಾಟೆ ಮಾಡಿದ್ರು. ಆ ಸಂಧರ್ಭದಲ್ಲಿ ಮೇಯರ್ ಪದ್ಮಾವತಿ ಇಸ್ಕಾನ್ ಅನ್ನವನ್ನು ಲ್ಯಾಬ್‍ನಲ್ಲಿ ಟೆಸ್ಟ್ ಮಾಡಿಸೋಕೆ ಹೇಳಿದ್ರು.

ಇದೀಗ ಈ ಊಟ ತಿನ್ನಲು ಯೋಗ್ಯವಲ್ಲ ಅನ್ನೋದಾಗಿ ರಿಪೋರ್ಟ್  ಬಂದಿದೆ.

Advertisement
Advertisement