ನವದೆಹಲಿ: ಭಾರತದಲ್ಲಿ ಭಯೋತ್ಪಾದಕ ಸಂಚು ಹೆಚ್ಚುತ್ತಿರುವಂತೆ ಕಾಣುತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ವೇಳೆ ಹಲವು ದಾಳಿಗೆ ಪ್ರಯತ್ನಗಳು ನಡೆದಿದ್ದಿದ್ದವು. ಇವು ವಿಫಲವಾದ ಬೆನ್ನಲ್ಲೇ ಭಾರತದಲ್ಲಿ ನಡೆಸಲು ಸಂಚು ರೂಪಿಸಿದ್ದ ಬಹುದೊಡ್ಡ ಆತ್ಮಾಹುತಿ ದಾಳಿಯ ಸ್ಕೆಚ್ ಬಯಲಾಗಿದೆ.
ಭಾರತದ ರಾಜಕೀಯ ನಾಯಕರೊಬ್ಬರ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದ ಆತ್ಮಾಹುತಿ ದಾಳಿಕೋರನನ್ನು ರಷ್ಯಾದಲ್ಲಿ ಬಂಧಿಸಲಾಗಿದೆ. ರಷ್ಯಾದ ಫೆಡರಲ್ ಭದ್ರತಾ ಸೇವಾ ಅಧಿಕಾರಿಗಳು ಈ ಉಗ್ರಗಾಮಿಯನ್ನು ಬಂಧಿಸಿದ್ದು, ಆತ ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿದವನು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಂಡಿತ್ ಕುಟುಂಬದ ಭೇಟಿ ತಡೆಯಲು ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ: ಮುಫ್ತಿ
Advertisement
Advertisement
ಮಧ್ಯ ಏಷ್ಯಾ ಪ್ರಾಂತ್ಯದಲ್ಲಿ ಸಕ್ರಿಯವಾಗಿರುವ ಐಸಿಸ್ ಸಂಘಟನೆಗೆ ರಷ್ಯಾದಲ್ಲಿ ನಿಷೇಧ ಹೇರಲಾಗಿದೆ. ಈ ಸಂಘಟನೆಯ ಸದಸ್ಯನನ್ನು ಮಾಸ್ಕೋನಲ್ಲಿ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ ಘಟಕವು ಸೆರೆ ಹಿಡಿದಿದೆ. ಬಂಧಿತ ವ್ಯಕ್ತಿ ಯಾವ ದೇಶದ ಪ್ರಜೆ ಎಂದು ತಿಳಿದು ಬಂದಿಲ್ಲ. ಆದರೆ, ಆತನನ್ನು ಆತ್ಮಹುತಿ ದಾಳಿ ನಡೆಸುವ ಸಲುವಾಗಿಯೇ ಟರ್ಕಿ ದೇಶದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.
Advertisement
ಬಿಜೆಪಿ ಪ್ರಮುಖರೇ ಟಾರ್ಗೆಟ್: ವಿಚಾರಣೆ ವೇಳೆ ಶಂಕಿತ ಉಗ್ರ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸ್ಕೆಚ್ ಹಾಕಿದ್ದು ಬಿಜೆಪಿ ನಾಯಕರು ನಮ್ಮ ಟಾರ್ಗೆಟ್ ಎಂದು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣಕ್ಕೆ- ಮದುವೆಯ ಫೋಟೋನಾ ಬಿಜೆಪಿಯವ್ರು ಎಡಿಟ್ ಮಾಡಿದ್ದಾರೆ: ಜೀವಿಜಯ
Advertisement
ಇನ್ನು ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲೆಂದು ಈ ಶಂಕಿತ ಉಗ್ರನನ್ನು ಐಸಿಸ್ ನೇಮಕ ಮಾಡಿಕೊಂಡಿದೆ. ಈ ಉಗ್ರ ಭಾರತ ಪ್ರವೇಶ ಮಾಡುವ ಬಗ್ಗೆ ತಯಾರಿ ಆರಂಭಿಸಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಉಗ್ರನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಮಧ್ಯ ಏಷ್ಯಾ, ಭಾರತ ಮತ್ತು ರಷ್ಯಾಕ್ಕಿರುವ ಸಂಬಂಧಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಇನ್ನಷ್ಟು ಮಾಹಿತಿಗಳು ತನಿಖೆಯ ಬಳಿಕವೇ ಗೊತ್ತಾಗಲಿದೆ ಎಂಬುದಾಗಿ ತಿಳಿದುಬಂದಿದೆ.