ಮಡಿಕೇರಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿ ಸಂಪತ್ ಸಹೋದರರನ ಮದುವೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಜೀವಿಜಯ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮಾಜಿ ಸಚಿವ ಜೀವಿಜಯ ಪ್ರತಿಕ್ರಿಯೆ ನೀಡಿ, ಸಂಪತ್ ತಮ್ಮನ ಮದುವೆಯ ಫೋಟೋ ಬಿಜೆಪಿ ಅವರು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಸೋಮವಾರಪೇಟೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಸಾಮಾನ್ಯವಾಗಿ ಊರಿನವರು ಮದುವೆಗೆ ಕರೆದರೆ ಹೋಗುತ್ತೇನೆ. ಹಾಗೆ ಸಂಪತ್ ತಮ್ಮನ ಮದುವೆಗೆ ಹೋಗಿರಬಹುದು ಅಥವಾ ಹೋಗದೇ ಇರುವುದು ಈ ಬಗ್ಗೆ ನನಗೆ ನೆನಪಿಲ್ಲ ಎಂದರು.
Advertisement
Advertisement
ಬಿಜೆಪಿ ಅವರು ಕುತಂತ್ರ ಮಾಡಿದ್ದಾರೆ. ಸಂಪತ್ ಇದುವರೆಗೂ ನನಗೆ ಪರಿಚಯ ಇಲ್ಲ. ಫೋಟೋದಲ್ಲಿ ಈಗಿನ ತಂತ್ರಜ್ಞಾನ ಬಳಿಸಿ ನನ್ನ ಫೋಟೋ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮದುವೆ ಫೋಟೋ
Advertisement
ಇತ್ತೀಚೆಗಷ್ಟೇ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿ ಸಂಪತ್ ಮಾತನಾಡಿ, ಮಾಜಿ ಸಚಿವ ಕೈ ನಾಯಕ ಜೀವಿಜಯ ಫಾಲೋವರ್ ಎಂದು ಹೇಳಿಕೊಂಡಿದ್ದ. ಈತನ ಹೇಳಿಕೆಗೆ ಮಾಜಿ ಸಚಿವ ಜೀವಿಜಯ ಪ್ರತಿಕ್ರಿಯಿಸಿದ್ದ, ಸಂಪತ್ ಯಾರೆಂದು ನನಗೆ ಗೊತ್ತಿಲ್ಲ. ಸಂಪತ್ ಜೊತೆ ಇರುವ ಫೋಟೋ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದರು. ಅದಾದ ಬಳಿಕ ಸಂಪತ್ ಸಹೋದರನ ಮದುವೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಜೀವಿಜಯ ಫೋಟೋ ರಿಲೀಸ್ ಆಗಿ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಇದನ್ನೂ ಓದಿ:
Advertisement
ಸಂಪತ್ ಯಾರು ಎನ್ನವುದರ ಬಗ್ಗೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಗಳ ನಡೆಯುತ್ತಿದೆ. ಕಾಂಗ್ರೆಸ್‍ನವರು ಆತ ಬಿಜೆಪಿ ಕಾರ್ಯಕರ್ತ ಎಂದಿದ್ದರೆ ಬಿಜೆಪಿಯವರು ಆತ ಕಾಂಗ್ರೆಸ್ ಕಾರ್ಯಕರ್ತ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ಮೊಟ್ಟೆ ಎಸೆದದ್ದು ಕಾಂಗ್ರೆಸ್ ಕಾರ್ಯಕರ್ತ. ಹೀಗಾಗಿ ಕಾಂಗ್ರೆಸ್ ವಿರುದ್ಧವೇ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇದನ್ನೂ ಓದಿ: ಮೊಟ್ಟೆ ಕೇಸ್ – ಸಿದ್ದರಾಮಯ್ಯಗೆ ಈಗ ಝಡ್ ಶ್ರೇಣಿಯ ಭದ್ರತೆ