ಕಠ್ಮಂಡು: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ)ನ ಏಜೆಂಟ್ (ISI Agent) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ನೇಪಾಳದ (Nepal) ಕಠ್ಮಂಡುವಿನಲ್ಲಿದ್ದ (Kathmandu) ಆತನ ಅಡಗುತಾಣದ ಹೊರಗೆ ಗುಂಡಿಕ್ಕಿ ಸೋಮವಾರ ಕೊಲ್ಲಲಾಗಿದೆ. ಈತ ಭಾರತದಲ್ಲಿ ನಕಲಿ ನೋಟುಗಳನ್ನು ಅತಿ ಹೆಚ್ಚು ಪೂರೈಕೆ ಮಾಡುತ್ತಿದ್ದ ವಿತರಕ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಮೃತ ಐಎಸ್‍ಐ ಏಜೆಂಟ್ ಅನ್ನು ಲಾಲ್ ಮೊಹಮ್ಮದ್ (Laal Mohammad) (55) ಅಲಿಯಾಸ್ ಮೊಹಮ್ಮದ್ ದರ್ಜಿ (Alias Mohammad Darji) ಎಂದು ಗುರುತಿಸಲಾಗಿದೆ. ಐಎಸ್‍ಐ ಸೂಚನೆ ಮೇರೆಗೆ ಲಾಲ್ ಮೊಹಮ್ಮದ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುದ್ರಣವಾಗುತ್ತಿದ್ದ ಭಾರತದ ನಕಲಿ ಕರೆನ್ಸಿಗಳನ್ನು ನೇಪಾಳಕ್ಕೆ ಸಾಗಿಸಿ ನಂತರ ಭಾರತದಲ್ಲಿ ತನ್ನ ಏಜೆಂಟರಿಗೆ ನೀಡುತ್ತಿದ್ದ. ಇದನ್ನೂ ಓದಿ: ಕೈಯಲ್ಲಿ ಮಚ್ಚು ಹಿಡಿದು ಫುಟ್‍ಬೋರ್ಡ್ ಮೇಲೆ ವಿದ್ಯಾರ್ಥಿ ಪುಂಡಾಟ
Advertisement
Advertisement
ಲಾಲ್ ಮೊಹಮ್ಮದ್ ಐಎಸ್‍ಐಗೆ ಲಾಜಿಸ್ಟಿಕ್ಸ್ ಬೆಂಬಲದೊಂದಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಗ್ಯಾಂಗ್‍ನೊಂದಿಗೆ (Dawood Ibrahim’s D-Gang) ಸಂಪರ್ಕ ಹೊಂದಿದ್ದಲ್ಲದೇ ಸಹಾಯ ಕೂಡ ಮಾಡುತ್ತಿದ್ದನು. ಇದರ ಜೊತೆಗೆ ಐಎಸ್‍ಐ ಏಜೆಂಟ್‍ಗಳಿಗೂ ಆಶ್ರಯ ನೀಡಿದ್ದನು. ಇದನ್ನೂ ಓದಿ: 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್ ರೂಂ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್ ನ್ಯೂಸ್
Advertisement
ಇದೀಗ ಲಾಲ್ ಮೊಹಮ್ಮದ್ ಗುಂಡಿಕ್ಕಿ ಹತ್ಯೆಗೈದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಕಠ್ಮಂಡುವಿನ ಗೊತಾಟರ್ ಪ್ರದೇಶದಲ್ಲಿರುವ ತನ್ನ ಮನೆಯ ಮುಂದೆ ಐಷಾರಾಮಿ ಕಾರಿನಲ್ಲಿ ಬಂದ ಲಾಲ್ ಮೊಹಮ್ಮದ್ ಕೆಳಗಿಳಿಯುತ್ತಿದ್ದಂತೆ ಇಬ್ಬರು ಹಂತಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನ ಹಿಂದೆ ಬಚ್ಚಿಟ್ಟಿಕೊಳ್ಳಲು ಲಾಲ್ ಮೊಹಮ್ಮದ್ ಪ್ರಯತ್ನಿಸಿದರೂ ದುಷ್ಕರ್ಮಿಗಳು ಬಿಟ್ಟುಬಿಡದೇ ಗುಂಡಿನ ದಾಳಿ ನಡೆಸಿದ್ದಾರೆ.
Advertisement
ಇದೇ ವೇಳೆ ಮೊಹಮ್ಮದ್ ಅವರ ಮಗಳು ತಮ್ಮ ತಂದೆಯನ್ನು ರಕ್ಷಿಸಲು ಮನೆಯ ಮೊದಲನೇ ಮಹಡಿಯಿಂದ ಜಿಗಿಯುತ್ತಾರೆ. ಆದರೆ ಅಷ್ಟರಲ್ಲಿ ಆರೋಪಿಗಳು ಮೊಹಮ್ಮದ್‍ನನ್ನು ಕೊಂದು ಎಸ್ಕೇಪ್ ಆಗಿದ್ದಾರೆ.