ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಆಲ್‍ರೌಂಡರ್ ರವಿಂದ್ರ ಜಡೇಜಾ ಹಾಗೂ ವೇಗಿ ಇಶಾಂತ್ ಶರ್ಮಾ ಪರಸ್ಪರ ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾಗೆ ಅಂತಿಮ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ನಾಲ್ಕನೇಯ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾಗ ಜಡೇಜಾ ಮತ್ತು ಇಶಾಂತ್ ಶರ್ಮಾ ಮೈದಾನದಲ್ಲಿಯೇ ಜಗಳವಾಡಿಕೊಂಡಿದ್ದಾರೆ. ಅನುಭವಿ ಹಾಗೂ ಹಿರಿಯ ಆಟಗಾರರು ಮೈದಾನದಲ್ಲಿಯೇ ಕಿತ್ತಾಡಿಕೊಂಡಿದ್ದು ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.
Advertisement
Advertisement
ವಿಡಿಯೋದಲ್ಲಿ ಏನಿದೆ?:
ಎರಡನೇ ಇನ್ನಿಂಗ್ಸ್ ಫೀಲ್ಡಿಂಗ್ ವೇಳೆ ಅಂಪೈರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವರು ಚರ್ಚೆಯಲ್ಲಿ ನಿರತರಾಗಿದ್ದರು. ಆದರೆ ಕ್ಷೇತ್ರ ರಕ್ಷಣೆ ವಿಚಾರವಾಗಿ ಇಶಾಂತ್ ಶರ್ಮಾ ಮತ್ತು ಜಡೇಜಾ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ಮುಗಿಸಿ ಮುಂದೆ ಹೋಗಿದ್ದ ಇಶಾಂತ್ ಮತ್ತೆ ಜಡೇಜಾ ಕಡೆ ಮರಳಿ ಬೆರಳು ಮಾಡಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಕೂಡಲೇ ಮೊಹಮ್ಮದ್ ಶಮಿ ಹಾಗೂ ಕುಲದೀಪ್ ನೋಡಿ ತಕ್ಷಣವೇ ಅಲ್ಲಿಗೆ ಆಗಮಿಸಿ ಇಬ್ಬರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 146 ರನ್ ಗಳಿಂದ ಗೆದ್ದುಕೊಂಡಿದೆ. 287 ರನ್ ಗುರಿ ಪಡೆದ ಟೀಂ ಇಂಡಿಯಾ 56 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಗಿತ್ತು. 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದ್ದ ಭಾರತ ನಿನ್ನೆಯ ತನ್ನ ಖಾತೆಗೆ 38 ರನ್ ಮಾತ್ರ ಸೇರಿಸಿತು. ಹನುಮ ವಿಹಾರಿ 28 ರನ್, ರಿಷಬ್ ಪಂತ್ 30, ಉಮೇಶ್ ಯಾದವ್ 2 ರನ್ ಗಳಿಸಿ ಔಟಾದರು. ಇಶಾಂತ್ ಶರ್ಮಾ ಮತ್ತು ಬುಮ್ರಾ 0 ಸುತ್ತಿದರು. ಕೊನೆಯ ನಾಲ್ಕು ವಿಕೆಟ್ 3 ರನ್‍ಗಳ ಅಂತರದಲ್ಲಿ ಕಳೆದುಕೊಂಡ ಪರಿಣಾಮ ಭಾರತ ಹೀನಾಯವಾಗಿ ಸೋಲು ಕಂಡಿದೆ.
Advertisement
https://twitter.com/abhishek2526/status/1074922189990707200
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv