ಏಕಾಂತ ಬಯಸಿ ಒಬ್ಬಳೇ ಬಾ ಎಂದ ಹೀರೋ : ಕಹಿ ಘಟನೆ ನೆನಪಿಸಿಕೊಂಡ ಇಶಾ ಕೊಪ್ಪಿಕರ್

Public TV
2 Min Read
Isha Koppikar 2

ಮೊನ್ನೆ ಮೊನ್ನೆಯಷ್ಟೇ ದಕ್ಷಿಣದ ಹೆಸರಾಂತ ನಟಿ ಅನುಷ್ಕಾ ಶೆಟ್ಟಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ, ಸಂಚಲನ ಮೂಡಿಸಿದ್ದರು. ಟಾಲಿವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂದು ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು. ಟಾಪ್ ನಟಿ ಅನುಷ್ಕಾ ಆಡಿದ ಆ ಮಾತು ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2

Isha Koppikar 1

ಇದೀಗ ಇಶಾ ಕೊಪ್ಪಿಕರ್ ಕೂಡ ಅಂಥದ್ದೇ ಮಾತುಗಳನ್ನು ಆಡಿದ್ದಾರೆ. ಕಾಸ್ಟಿಂಗ್ ಕೌಚ್ ಭಾರತೀಯ ಸಿನಿಮಾ ರಂಗದಲ್ಲಿ ಇಂದಷ್ಟೇ ಅಲ್ಲ ಎಂದೆಂದಿಗೂ ಇದೆ ಎಂದು ಹೇಳಿ ಸದ್ದು ಮಾಡಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

Isha Koppikar 5

ಇಶಾ ಕೊಪ್ಪಿಕರ್ ಅಂದಾಕ್ಷಣ ಕನ್ನಡ ಸಿನಿ ಪ್ರೇಕ್ಷಕರಿಗೆ ಥಟ್ಟನೆ ನೆನಪಾಗುವ ಸಿನಿಮಾ ವಿಷ್ಣುವರ್ಧನ್ ನಟನೆಯ ಸೂರ್ಯವಂಶ. ಆನಂತರ ಅವರು ರವಿಚಂದ್ರನ್ ನಟನೆಯ “ಓ ನನ್ನ ನಲ್ಲೆ” ಸಿನಿಮಾದಲ್ಲೂ ನಟಿಸಿದ್ದರು. 90ರ ದಶಕದಲ್ಲಿ ಭಾರೀ ಬೇಡಿಕೆಯ ನಟಿಯರಲ್ಲಿ ಇವರೂ ಒಬ್ಬರು. ಮದುವೆಯಾದ ನಂತರ ಇಶಾ ಸಿನಿಮಾ ರಂಗದಿಂದ ದೂರ ಉಳಿದರು. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

 

FotoJet 9

ಇಶಾ ಕೊಪ್ಪಿಕರ್ ಸಿನಿಮಾ ರಂಗಕ್ಕೆ ಬಂದಿದ್ದು ಮಾಡೆಲಿಂಗ್ ಕ್ಷೇತ್ರದಿಂದ. ‘ಎಕ್ ಥ ದಿಲ್ ಥ ಧಡ್ಕನ್’ ಹೆಸರಿನ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿ ಇಶಾ ಕೊಪ್ಪಿಕರ್ ಆನಂತರ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದರು. ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ, ದಕ್ಷಿಣದ ಹಲವು ಭಾಷೆಗಳ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಸಿನಿಮಾ ರಂಗಕ್ಕೆ ಬರುವಾಗ ಅವರಿಗಾದ ಕಹಿ ನೋವನ್ನು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

Isha Koppikar 4

“ನಾನು ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಬಂದವಳು. ವಿದ್ಯಾಭ್ಯಾಸದ ಖರ್ಚಿಗೆ ಹಣ ಬೇಕಿತ್ತು. ಹಾಗಾಗಿ ಮಾಡೆಲಿಂಗ್ ಮಾಡಿದೆ. ಆನಂತರ ಸಿನಿಮಾ ರಂಗಕ್ಕೆ ಕರೆ ಬಂತು. ಈ ಸಮಯದಲ್ಲಿ ನಿರ್ಮಾಪಕರೊಬ್ಬರು ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿದರು. ನಾನೂ ಒಪ್ಪಿಕೊಂಡೆ. ನೀವು ನನ್ನ ಸಿನಿಮಾದ ನಾಯಕನನ್ನು ಕಾಣಬೇಕಂತೆ ಅಂದರು. ಆ ನಾಯಕ ನನಗೆ ಕರೆಮಾಡಿ, ಜತೆಗೆ ಯಾರನ್ನೂ ಕರೆದುಕೊಂಡು ಬರಬೇಡ. ಒಬ್ಬಳೇ ಬಾ. ಇಬ್ಬರೇ ಏಕಾಂತದಲ್ಲಿ ಇರಬೇಕು ಎಂದು ಕೇಳಿದರು. ಅವರು ಯಾಕೆ ನನ್ನನ್ನು ಕರೆಯುತ್ತಿದ್ದಾರೆ ಅಂತ ಗೊತ್ತಾಯಿತು. ನಿರ್ಮಾಪಕರಿಗೆ ಆ ವಿಷಯ ತಿಳಿಸಿ, ನನ್ನ ಪ್ರತಿಭೆಯ ಮೇಲೆ ನಂಬಿಕೆ ಇದ್ದರೆ ಪಾತ್ರ ಕೊಡಿ. ಇಲ್ಲದಿದ್ದರೆ ನನಗೆ ಅದರ ಅಗತ್ಯವಿಲ್ಲ ಎಂದೆ. ನಂತರ ನನಗೆ ಆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲಿಲ್ಲ” ಎಂದು ಇಶಾ ತಮಗಾದ ಕಹಿ ನೋವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

Isha Koppikar 3

ಕನ್ನಡದಲ್ಲೂ ಕೆಲ ಕಲಾವಿದೆಯರು ತಮಗಾದ ಕೆಟ್ಟ ಅನುಭವಗಳನ್ನು ಧೈರ್ಯದಿಂದಲೇ ಹೇಳಿಕೊಂಡಿದ್ದಾರೆ. ಅದರಲ್ಲೂ ಮೀಟೂ ಸಂದರ್ಭದಲ್ಲಿ ಅತೀ ಹೆಚ್ಚು ಸುದ್ದಿಯಾಗಿದ್ದು ಸ್ಯಾಂಡಲ್ ವುಡ್‍ ಎನ್ನುವುದು ಬೇಸರದ ಸಂಗತಿ.

Share This Article
Leave a Comment

Leave a Reply

Your email address will not be published. Required fields are marked *