– ಪ್ರಧಾನಿ ಪಟ್ಟಕ್ಕೆ ಯೋಗಿ ನೇಮಿಸಿ
– ಉತ್ತರ ಪ್ರದೇಶದಲ್ಲಿ ಯೋಗಿ ಪರ ಬ್ಯಾನರ್
ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಮೂರು ಕಡೆಯಲ್ಲಿ ಸೋಲು ಕಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತೊಂದು ಸವಾಲು ಎದುರಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಸ್ಪರ್ಧಿಸುವುದು ಬೇಡ. ಅವರ ಬದಲಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕಣಕ್ಕೆ ಇಳಿಯಲಿ ಎನ್ನುವ ಬೇಡಿಕೆ ವ್ಯಕ್ತವಾಗಿದೆ.
Advertisement
Advertisement
ಯೋಗಿ ಆದಿತ್ಯನಾಥ್ ಅವರಿಂದಾಗಿ ಪ್ರಧಾನಿ ಮೋದಿ ಜನಪ್ರಿಯತೆ ಕುಸಿಯುತ್ತಿದೆ. ಸುಳ್ಳಿಗೆ ಮತ್ತೊಂದು ಹೆಸರು ಮೋದಿ. ಹಿಂದುತ್ವದ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಹೀಗಾಗಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದು ಉತ್ತರ ಪ್ರದೇಶದ ಕೆಲವು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
Advertisement
ಲಕ್ನೋದಲ್ಲಿ ಫೆಬ್ರವರಿ 10ರಂದು ಧರ್ಮ ಸಂಸತ್ತು ನಡೆಯಲಿದೆ. ಈ ಕಾರ್ಯಕ್ರಮ ಸ್ವಾಗತ ಕೋರಿ ಹಾಕಿರುವ ಪೋಸ್ಟರ್ ಗಳಲ್ಲಿ ಯೋಗಿ ಪರ ಉತ್ತರ ಪ್ರದೇಶ ನವ ನಿರ್ಮಾಣ ಸೇನಾ ಪ್ರಚಾರ ಮಾಡಿದೆ. ‘ಪ್ರಧಾನಿ ಪಟ್ಟಕ್ಕೆ ಯೋಗಿ’, ‘ಯೋಗಿಯನ್ನ ತನ್ನಿ – ದೇಶವನ್ನು ಉಳಿಸಿ’ ಎಂಬ ಘೋಷಣೆಯುಳ್ಳ ಪೋಸ್ಟರ್ ಗಳನ್ನು ಬೀದಿಯ ಬದಿಯಲ್ಲಿ ಹಾಕಲಾಗಿದೆ.
Advertisement
ಯೋಗಿಯೇ ಯಾಕೆಬೇಕು?:
ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಮತ್ತೆ ಚುನಾವಣೆ ಬಂದರೂ ಯಾವುದೇ ಬೆಳವಣಿಗೆ ಕಾಣಲಿಲ್ಲ. ಯೋಗಿ ಆದಿತ್ಯನಾಥ್ ಅವರು ರಾಮಮಂದಿರ ನಿರ್ಮಾಣದಲ್ಲಿ ಬದ್ಧರಾಗಿದ್ದಾರೆ. ಅವರು ತಮ್ಮ ಭಾಷಣದ ಮೂಲಕ ಹಿಂದೂ ಹೃದಯ ಸಾಮ್ರಾಟ್ ಅಂತ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಿಂದಿ ಭಾಷೆಯನ್ನು ಚೆನ್ನಾಗಿ ಅರಗಿಸಿಕೊಂಡಿರುವ ಯೋಗಿ ಧಾರ್ಮಿಕ ಮಾರ್ಗದ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಈ ಕಾರಣಕ್ಕೆ ಯೋಗಿ ಪರ ನವ ನಿರ್ಮಾಣ ಸೇನಾ ಬ್ಯಾನರ್ ಹಾಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv