ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಶ್ಚಾತ್ತಾಪದ ಮಾತಿಗೂ ಬಿ.ಎಸ್ ಯಡಿಯೂರಪ್ಪ ರೀ ಎಂಟ್ರಿಗೂ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆಯೊಂದು ಮೂಡಿದೆ.
ಯಡಿಯೂರಪ್ಪ ಇಲ್ಲದ ಬಿಜೆಪಿ ನಮಗೆ ಸುಲಭದ ತುತ್ತು ಅಂದುಕೊಂಡಿದ್ದ ಕಾಂಗ್ರೆಸ್ಸಿಗೆ ಈಗ ಮತ್ತೆ ಯಡಿಯೂರಪ್ಪ ಫೀವರ್ ಶುರುವಾದಂತಿದೆ. ಇದೇ ಸಂದರ್ಭದಲ್ಲಿ ಪಶ್ಚಾತ್ತಾಪದ ಮಾತನಾಡಿ ಪೊಲಿಟಿಕಲ್ ಬ್ಯಾಲೆನ್ಸ್ ಗೆ ಸಿದ್ದರಾಮಯ್ಯ ಪ್ರಯತ್ನ ಮಾಡಿದಂತಿದೆ. ಇಂತದೊಂದು ಅನುಮಾನದ ಮಾತು ರಾಜ್ಯ ರಾಜಕಾರಣದಲ್ಲಿ ಕೇಳಿ ಬರತೊಡಗಿದೆ. ಇದು ಪಶ್ಚಾತ್ತಾಪದ ಮಾತಷ್ಟೆ ಅಲ್ಲಾ ಯಡಿಯೂರಪ್ಪ ರೀ ಎಂಟ್ರಿಯ ಡ್ಯಾಮೇಜ್ ಕಂಟ್ರೋಲ್ ಟೆಕ್ನಿಕ್ ಇದ್ದರೂ ಇರಬಹುದು ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಮಾತು ಹಾಗೂ ನಡೆ ಇಂತಹ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ತಾವೇ ಸ್ವತಃ ಆಸಕ್ತಿ ತೋರಿದ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಈ ಬಾರಿಯ ಚುನಾವಣೆ ಹೊಸ್ತಿಲಲ್ಲಿ ನಿಂತು ಪಶ್ಚಾತ್ತಾಪದ ಮಾತನಾಡಿರುವುದು ಒಂದು ಕಡೆ. ಅದೂ ಯಡಿಯೂರಪ್ಪ ರೀ ಎಂಟ್ರಿ ಸಂದರ್ಭದಲ್ಲಿ ಸಿದ್ದರಾಮಯ್ಯ ಬಾಯಲ್ಲಿ ಈ ಮಾತು ಬಂದಿರುವುದು ಸಾಕಷ್ಟು ಊಹಪೋಹಗಳಿಗೆ ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಸಿದ್ದರಾಮೋತ್ಸವ ಬಳಿಕ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಪ್ಲಾನ್- ಆಗಸ್ಟ್ 26ರಂದು ನಡೆಯುತ್ತಾ ಹೈಡ್ರಾಮಾ..?