ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಅವಧಿ ವಿಸ್ತರಣೆ ಘೋಷಣೆ ಆಯ್ತು. ರಾಜ್ಯ ಬಿಜೆಪಿ ಅಧ್ಯಕ್ಷರ ಅವಧಿ ಏನಾಗುತ್ತೆ ಎಂಬ ಕುತೂಹಲ ಗರಿಗೆದರಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಜನವರಿ 19ರ ರಾಜ್ಯ ಪ್ರವಾಸದ ಬಳಿಕ ಸಂಘಟನೆಯಲ್ಲಿ ಕೆಲ ಬದಲಾವಣೆ ತರಲು ಹೈಕಮಾಂಡ್ ಮುಂದಾಗುವ ಸಾಧ್ಯತೆ ಚರ್ಚೆಗಳು ನಡೆಯುತ್ತಿವೆ.
Advertisement
ಕಟೀಲ್ ಟೀಂ ಮುಂದುವರಿಕೆ ವಿಚಾರದಲ್ಲಿ ಕ್ಲಾರಿಟಿ ಸಿಕ್ಕಿಲ್ಲ. ಎಲೆಕ್ಷನ್ (Election) ಹೊತ್ತಿನಲ್ಲಿ ಬಿಜೆಪಿ (BJP) ತಂತ್ರದ ಬಗ್ಗೆ ಎಲ್ಲರ ಚಿತ್ತ ಇದೆ. ಮಂಗಳವಾರ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪದ ದಿನ ನಡ್ಡಾ ಫೇವರೇಟ್. 2024ರ ಚುನಾವಣೆಗೆ ಜೆ.ಪಿ ನಡ್ಡಾ (JP Nadda) ಅವರೇ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಮುಂದುವರಿಕೆ ಬಗ್ಗೆ ಹೈಕಮಾಂಡ್ ಯಾವುದೇ ಘೋಷಣೆ ಮಾಡಿಲ್ಲ.
Advertisement
Advertisement
ನಳೀನ್ ಕುಮಾರ್ ಕಟೀಲ್ (Nalin Kumar Kateel) ಅವರು ಸಾರಥಿಯಾಗಿಯೇ ಬಿಜೆಪಿ ಸಂಘಟನೆ ಚುನಾವಣೆ ಎದುರಿಸುವ ಬಗ್ಗೆಯೂ ಮಾತಿಲ್ಲ. ಇದರಿಂದಾಗಿ ಬಿಜೆಪಿ ಮೂರನೇ ಸಾಲಿನ ನಾಯಕರು, ಕಾರ್ಯಕರ್ತರಿಗೆ ಸಂಘಟನೆ ಬದಲಾವಣೆ ಬಗ್ಗೆ ಗೊಂದಲ ಮೂಡಿದೆ. ಮೋದಿ ಕಲಬುರಗಿ ಪ್ರವಾಸದ ಬಳಿಕ ಬಿಜೆಪಿ ಹೈಕಮಾಂಡ್ (BJP HighCommand) ಸ್ಪಷ್ಟವಾದ ನಿಲುವು ತಾಳುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಕೆಲ ಬದಲಾವಣೆ ತಂದು ಜನವರಿ ಅಂತ್ಯದೊಳಗೆ ಸರ್ಜರಿ ಮುಗಿಸುವ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿ ಹೈಕಮಾಂಡ್ ಅಂಗಳದಲ್ಲಿ ಯಾರಿಗೆಲ್ಲ ಆಗುತ್ತೆ ಸರ್ಜರಿ..? ಯಾರೆಲ್ಲ ಸೇಫ್ ಎಂಬ ಬಗ್ಗೆ ಕುತೂಹಲ ಗರಿಗೆದರಿದೆ. ಇದನ್ನೂ ಓದಿ: ನನ್ನ ನಂಬಿ ಕೂರಬೇಡಿ: ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ವಾರ್ನ್ ಶಾಕ್
ಹೊಸ ಟೀಂ ಬಂದ್ರೆ ಆಡ್ಜಸ್ಟ್ ಆಗುವುದು ಕಷ್ಟ ಎಂಬ ಬಗ್ಗೆ ಪಕ್ಷದ ಒಂದು ವರ್ಗದ ವಾದ ಇದ್ದರೆ, ಹಾಲಿ ಇರುವ ಟೀಂನ ಕೆಲ ಸದಸ್ಯರು ವಾರ್ ಫೀಲ್ಡ್ ಗೆ ಸರಿ ಹೊಂದುತ್ತಿಲ್ಲ ಎಂಬ ಬಗ್ಗೆ ಪಕ್ಷದ ಇನ್ನೊಂದು ವರ್ಗದ ವಾದ. ಹಾಗಾಗಿ ಬಿಜೆಪಿ ಹೈಕಮಾಂಡ್ ತಲುಪಿರುವ ಆ ವರದಿಯೇ ಎಲ್ಲ ಬದಲಾವಣೆಗಳಿಗೆ ಕಾರಣವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k