CinemaDistrictsKarnatakaLatestMain PostSandalwood

ರೂಪೇಶ್‍ಗೆ ಸಾನ್ಯಾ ಸಹವಾಸವೇ ಮೈನಸ್ ಆಯ್ತಾ?

ಬಿಗ್‍ಬಾಸ್(Bigg Boss) ಮನೆಯಲ್ಲಿ ರೂಪೇಶ್ ಅವರದ್ದು ಕೊನೆಯ ಕ್ಯಾಪ್ಟೆನ್ಸಿಯಾಗಿತ್ತು. ಆದರೆ ಈ ವಾರ ರೂಪೇಶ್ ಎಷ್ಟು ಚೆನ್ನಾಗಿ ಕ್ಯಾಪ್ಟೆನ್ಸಿ ನಿಭಾಯಿಸಿದ್ದರೋ ಅಷ್ಟೇ ಒನ್ ಸೈಡ್ ಆಗಿದ್ದ ಎಂಬ ಆರೋಪವೂ ಕೇಳಿ ಬಂತು. ಹೆಚ್ಚಿನ ಪ್ರಧಾನ್ಯತೆಯನ್ನು ಫ್ರೆಂಡ್ ಎನ್ನುವ ಕಾರಣಕ್ಕೆ ಸಾನ್ಯಾಳಿಗೆ(Sanya) ನೀಡಿದ ಎಂಬುದು ಮನೆಯ ಸದಸ್ಯರಿಗೆ ಕೊಂಚ ಬೇಸರವನ್ನು ತರಿಸಿತ್ತು. ಆ ಬಗ್ಗೆ ಇಂದು ವಾರದ ಕಥೆ ಕಿಚ್ಚ ಸದೀಪನ ಜೊತೆ ವೇದಿಕೆಯಲ್ಲೂ ಬಹಳಷ್ಟು ಚರ್ಚೆಗೆ ಕಾರಣವಾಯಿತು.

ಕಿಚ್ಚ ಸುದೀಪ್(Sudeep) ವೇದಿಕೆ ಬರುವುದಕ್ಕೂ ಮುನ್ನ ಈ ಬಗ್ಗೆ ಒಂದು ಕ್ಲೂ ಕೂಡ ಕೊಟ್ಟಿದ್ದರು. ಕೊನೆವಾರದಲ್ಲಿ ಬಿದ್ದರೆ ಏಳುವುದಕ್ಕೆ ಟೈಮ್ ಇರುವುದಿಲ್ಲ. ಸ್ನೇಹ ಹಾಗೂ ಆಟ ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂಬುದು ಗೊತ್ತಿರಬೇಕು ಎಂದಾಗ ಇಂದು ರೂಪೇಶ್ ಮಾಡಿದ ಯಡವಟ್ಟು ಅನಾವರಣವಾಗುತ್ತದೆ ಎಂಬುದು ಸ್ಪಷ್ಟವಾಯಿತು. ಅದರಂತೆ ವೇದಿಕೆ ಮೇಲೆ ರೂಪೇಶ್‍ಗೆ ಆ ಪ್ರಶ್ನೆ ಕೇಳಿದರು. ಸ್ನೇಹ ಮತ್ತು ಆಟವನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂದಾಗ ರೂಪೇಶ್(Rupesh) ಆಟ ಅಂತ ಬಂದಾಗ ಸ್ನೇಹ, ಸಂಬಂಧ, ಎಮೋಷನಲ್ ನೋಡಬಾರದು ಎಂಬ ಅರ್ಥದಲ್ಲಿಯೇ ವಿವರಣೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ನೀಡಿದ್ದರು. ವಿವರಣೆ ಕೇಳಿಸಿಕೊಂಡ ಕಿಚ್ಚ, ಒಂದು ಕ್ಷಣ ನಗೆ ಬೀರಿ, ಓಕೆ ವೆಲ್ ಡನ್ ಅಂತ ಮನೆಯ ಸದಸ್ಯರ ಬಳಿ ರಿಯಾಕ್ಷನ್ ಕೇಳಿದರು. ಇದನ್ನೂ ಓದಿ: ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ,(Somanna) ನಂಗೆ ಈ ಹಿಂದೆ ಅನುಭವವಾಗಿತ್ತು. ಅದನ್ನು ಹೇಳಿದ್ದೆ ಕೂಡ, ವೋಟ್ ಕೂಡ ಒಂದು ಸಲ ಮಾಡಿದ್ದೆ. ಯಾವುದೋ ಒಂದು ವಿಚಾರ ಬಂದಾಗ ಒಬ್ಬ ವ್ಯಕ್ತಿಯ ಪರ ಮಾತನಾಡುವುದಲ್ಲ. ಹೌದು ಕಣ್ಣೀರಿಗೆ ಒಂದು ಬೆಲೆ ಇರುತ್ತದೆ. ಭಾವನೆಗೂ ಒಂದು ಬೆಲೆ ಇರುತ್ತದೆ. ಆದರೆ ಅದೇ ವೀಕ್ನೆಸ್ ಆಗಬಾರದು. ನಾನು ತುಂಬಾ ಸಲ ಕಂಡಿದ್ದೇನೆ. ಕಣ್ಣೀರು ಹಾಕಿದ ಕೂಡಲೇ ಅದನ್ನು ಬ್ಯಾಲೆನ್ಸ್ ಮಾಡಬಹುದು. ಪಾಪ ಅನಿಸುತ್ತದೆ. ಅದು ಪಾಪ ಅಲ್ಲ. ಅದಕ್ಕೆ ಒಂದು ಉದಾಹರಣೆ ಇತ್ತೀಚೆಗೆ ನಡೆದಿದೆ. ಅವರು ಒಂದು ಟಾಸ್ಕ್‌ನಲ್ಲಿ ಸೋತಾಗ ಕಣ್ಣೀರು ಹಾಕುತ್ತಾರೆ. ಕಣ್ಣೀರು ಹಾಕಿದ ತಕ್ಷಣ ಅವಕಾಶ ಸಿಗುತ್ತದೆ. ಇಲ್ಲಿ ಕಣ್ಣೀರು ಎಕ್ಸಿಕ್ಯೂಟ್ ಮಾಡುವುದಕ್ಕೆ ಬಂದಿಲ್ಲ. ಬೇಕಾಬಿಟ್ಟಿ ಹಾಕಿದರೆ ಅದಕ್ಕೊಂದು ಅರ್ಥವೇ ಇರುವುದಿಲ್ಲ ಎಂದಿದ್ದಾರೆ.

ಸುದೀಪ್ ಅವರ ಮಾತುಕತೆ ಮುಗಿದು ಒಂದು ಬ್ರೇಕ್ ಕೊಟ್ಟಾಗ ಮನೆಯಲ್ಲಿ ಕಣ್ಣೀರಿನ ಕಥೆಯ ಮಹಾಯುದ್ಧವೇ ನಡೆದಿದೆ. ಜಯಶ್ರೀ(Jaya shree) ಹಾಗೂ ಸೋನು ಕುಳಿತಲ್ಲಿಗೆ ಬಂದ ಸಾನ್ಯಾ, ಸೋಮಣ್ಣ ಕೊಟ್ಟ ರೀಸನ್ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ನೀನು ಇವಳನ್ನು ರಾಂಗ್ ಇನ್ಫರ್ಮೇಶನ್ ಕೊಟ್ಟಿದ್ದೀಯಾ ಅದಕ್ಕೆ ಈ ರೀತಿಯೆಲ್ಲಾ ಆಗಿದೆ ಅಂತ. ಆಗ ಸಾನ್ಯಾಳಾ ಮಾತು ತಡೆದ ಜಯಶ್ರೀ, ನೀನು ರೂಪೇಶ್ ಕೂತು ಮಾತನಾಡುವಾಗ ನಾವಿಬ್ಬರು ನಿಮ್ಮ ಎದುರಿಗಿನ ಸೋಫಾದಲ್ಲಿಯೇ ಇದ್ದೇವು. ನೀನು ರೂಪೇಶ್ ಜೊತೆ ಮಾತನಾಡುವಾಗ ಇಟ್ ವಾಸ್ ನಾಟ್ ಸ್ಯಾಟಿಫೈ ಎಂಬಂತೆ ಇತ್ತು. ನೀನು ಕಣ್ಣಲ್ಲಿ ನೀರು ತುಂಬಿಕೊಂಡೆ ಮಾತನಾಡುತ್ತಿದ್ದೆ. ಅದಕ್ಕೆ ನೀನು ಅಳುತ್ತಿದ್ದಿಯಾ ಅಂತ ಅಂದುಕೊಂಡೆವು ಎಂದಾಗ, ಸಾನ್ಯಾ ಅವಳ ಪಕ್ಕದಲ್ಲಿಯೇ ನಿಂತಿದ್ದ ರೂಪೇಶ್‍ನನ್ನು ಕರೆದು ನೀನು ಕ್ಯಾಪ್ಟನ್ ಆಗಿದ್ದವನು ಹೇಳು ನಾನು ಕಣ್ಣೀರು ಹಾಕಿದ್ನಾ ಎಂದಾಗ, ರೂಪೇಶ್ ಇಲ್ಲ ಎಂದಿದ್ದಾನೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

ಮತ್ತೆ ಸೋನು(Sonu) ಮತ್ತು ಜಯಶ್ರೀ ಕಡೆಗೆ ಸಾನ್ಯಾಳ ಗಮನ ತಿರುಗಿದೆ. ಅದೇಗೆ ಹೇಳುತ್ತೀರಾ. ನೀವೂ ಹೇಳಿದ್ದಕ್ಕೆ ಸೋಮಣ್ಣ ಇವತ್ತು ಆ ರೀತಿ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದಿದ್ದಾರೆ. ಜಯಶ್ರೀ ಎಮೋಷನಲ್(Emotional) ಅಂದಿದ್ದಾಳೆ, ಸೋನು ಕಣ್ಣೀರು ಹಾಕಿದ್ದೀಯಾ ಅಂತ ಮತ್ತೆ ಮತ್ತೆ ವಾದ ಮಾಡಿದ್ದಾರೆ. ಜಗಳ ತಾರಕ್ಕೇರಿದಾಗ ಆಯಿತು ಬಿಡು ನೀನು ಕಣ್ಣೀರು ಹಾಕಿಲ್ಲ ತಾನೇ. ಜನ ನೋಡಿದ್ದಾರೆ ಅಂತ ಸೋನು ಸುಮ್ಮನೆ ಆಗಿದ್ದಾರೆ. ಈ ಮಧ್ಯೆ ಇದೇ ಕಣ್ಣೀರಿನ ವಿಚಾರ ಸೋಮಣ್ಣ ಹಾಗೂ ರೂಪೇಶ್ ನಡುವೆಯೂ ವಾದ ಪ್ರತಿವಾದ ನಡೆದಿದೆ. ಅವಳ ಕಣ್ಣೀರು ನೋಡಿ ನಾನು ಅವಕಾಶ ಹೇಗೆ ಕೊಟ್ಟಿದ್ದೇನೆ ಎಂದು ಸೋಮಣ್ಣನ ಬಳಿ ಕೇಳಿದ್ದಾರೆ. ಆದರೆ ಕೆಲವೊಂದು ವಿಚಾರಗಳು ಡ್ರ್ಯಾಗ್ ಆಗಿದೆ. ಅಷ್ಟರಲ್ಲಿ ಬಿಗ್ ಬಾಸ್ ವೇದಿಕೆ ಸಿದ್ಧವಾಯಿತು. ಸುದೀಪ್ ಪ್ರತ್ಯಕ್ಷವಾದರು. ಹೀಗಾಗಿ ಜಗಳ ಅಲ್ಲಿಗೆ ನಿಂತಿತು.

Live Tv

Leave a Reply

Your email address will not be published.

Back to top button