ಸೌತ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಾಲು ಸಾಲು ಸಿನಿಮಾಗಳ ಮೂಲಕ ಸದ್ದು ಮಾಡ್ತಿರುವ ಬೆನ್ನಲ್ಲೇ ನಟಿಯ ವೈಯಕ್ತಿಕ ವಿಚಾರವೊಂದು ನೆಟ್ಟಿಗರ ತಲೆಕೆಡಿಸಿದೆ. ನಟಿ ರಶ್ಮಿಕಾ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡುತ್ತಿದೆ.
Advertisement
ಚಿತ್ರರಂಗದಲ್ಲಿ ಕೆಲ ನಟಿಯರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಂತಾ (Samantha) ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇನ್ನೂ ಮಲಯಾಳಂ ನಟಿ ಮಮತಾ ಮೋಹನ್ ದಾಸ್ (Mamatha Mohan Das) ಚರ್ಮ ಕಾಯಿಲೆ ಎದುರಿಸುತ್ತಿದ್ದಾರೆ. ಈಗ ಅದೇ ರೀತಿ ರಶ್ಮಿಕಾ ಮಂದಣ್ಣ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ.
Advertisement
Advertisement
ಕೊಡಗಿನ ಬ್ಯೂಟಿಯ ಡೈರಿ ಬರೆಯುವ ದಿನಚರಿಯಿಂದ ನಟಿಯ ಬಗ್ಗೆ ಹೊಸ ವಿಚಾರವೊಂದು ಹೊರಬಿದ್ದಿದೆ. ತಮ್ಮ ಪ್ರತಿದಿನದ ದಿನಚರಿಯನ್ನು ಕೂಡ ಕೆಲವೊಮ್ಮೆ ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ `ಡಿಯರ್ ಡೈರಿ’ ಈ ದಿನ ಬಹಳ ಅಚ್ಚರಿಯಾಗಿತ್ತು. ಬೆಳಗ್ಗೆ ಏಳುತ್ತಿದ್ದಂತೆ ಕಾರ್ಡಿಯೋ ವರ್ಕ್ಔಟ್ ಮಾಡಿದೆ. ಆ ನಂತರ ತಿಂಡಿ ಸೇವಿಸಿದೆ. ನಾಳಿನ ಶೆಡ್ಯೂಲ್ಗಾಗಿ ಬ್ಯಾಗ್ ಸಿದ್ಧಪಡಿಸಿಕೊಂಡೆ. ಆದರೆ ಎಂದಿನಂತೆ ನನ್ನ ಸುತ್ತಲಿನ ವಾತಾವರಣ, ಮಂಜು ನಾನು ಹೊರಗೆ ಹೋಗದಂತೆ ಡ್ರಾಮಾ ಮಾಡಿತು.
Advertisement
ಬ್ಯಾಗ್ ಎಲ್ಲಾ ಸಿದ್ಧಪಡಿಸಿದ ನಂತರ ಮತ್ತೆ ವರ್ಕೌಟ್ ಮಾಡಿದೆ. ನಂತರ ಡಿನ್ನರ್ ಮುಗಿಸಿದೆ. ಇನ್ನು ಡೆರ್ಮಟ್ ಅಪಾಯಿಂಟ್ಮೆಂಟ್ ತೆಗೆದುಕೊಂಡೆ. ಮುಖ್ಯವಾದ ಮೀಟಿಂಗ್ ಇದೆ. ಆದರೆ ಅದು ಕ್ಯಾನ್ಸಲ್ ಆಗಿದೆ. ಮತ್ತೆ ಮನೆಗೆ ವಾಪಸ್ ಬಂದುಬಿಟ್ಟೆ. ಇನ್ನು ಗುಡ್ನೈಟ್ ಎಂದು ಲವ್ ಸಿಂಬಲ್ ಹಾಕಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಡೆರ್ಮಟ್ ಅಂದರೆ ಡೆರ್ಮಟಾಲಜಿಸ್ಟ್ ಎನ್ನುವ ಅರ್ಥ ಬರುತ್ತದೆ. ಇದನ್ನು ನೋಡಿ ಅಭಿಮಾನಿಗಳು ರಶ್ಮಿಕಾ ಮಂದಣ್ಣಗೆ ಏನಾಯಿತು. ಡೆರ್ಮಟಾಲಜಿಸ್ಟ್ ಅಪಾಯಿಂಟ್ಮೆಂಟ್ ಯಾಕೆ? ಆಕೆಗೆ ಚರ್ಮದ ಸಮಸ್ಯೆ ಎದುರಾಗಿದ್ಯಾ? ಅದಕ್ಕೆ ವೈದ್ಯರ ಅಪಾಯಿಂಟ್ಮೆಂಟ್ ತೆಗೆದುಕೊಂಡಿರಬಹುದು ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ
ನೆಚ್ಚಿನ ನಟಿ ರಶ್ಮಿಕಾ ಆ ಒಂದು ಪೋಸ್ಟ್ನಿಂದ ಈಗ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರಾ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k