ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಪುತ್ರ ರಾಮ್‌ಚರಣ್ (Ramcharan) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಚೊಚ್ಚಲ ಮಗುವನ್ನ ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ ರಾಮ್ ಚರಣ್ ದಂಪತಿ. ಈ ಬೆನ್ನಲ್ಲೇ ಈ ಜೋಡಿ ಬಾಡಿಗೆ ತಾಯಿಯ(Surrogacy) ಮೂಲಕ ಮಗುವನ್ನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಸದ್ದು ಮಾಡ್ತಿದೆ.
Advertisement
ಇತ್ತೀಚೆಗಷ್ಟೇ ರಾಮ್ ಚರಣ್ ದಂಪತಿ ತಾವೂ ಪೋಷಕರಾಗುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಮದುವೆಯಾಗಿ 10 ವರ್ಷಗಳ ನಂತರ ಚರಣ್- ಉಪಾಸನಾ(Upasana) ತಂದೆ ತಾಯಿ ಆಗುತ್ತಿರುವ ವಿಚಾರ ಮೆಗಾ ಫ್ಯಾಮಿಲಿಯಲ್ಲಿ ಖುಷಿ ಕೊಟ್ಟಿದೆ. ಆದರೆ ಇದೆಲ್ಲದರ ನಡುವೆ ಚರಣ್- ಉಪಾಸನಾ ಬಾಡಿಗೆ ತಾಯಿಯ ಮೂಲಕ ಮಗು ಪಡೆಯುತ್ತಾರಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಮ್ಮದೇ ಕೆಲ ಊಹಾಪೋಹದ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ. ನಟಿ ನಯನತಾರಾ(Nayanatara) ಹಾದಿಯಲ್ಲೇ ಈ ಜೋಡಿ ಕೂಡ ಸಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ‘ಕೋಟಿಗೊಬ್ಬ’ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್
Advertisement
Advertisement
ಇನ್ನು ಮೆಗಾ ಫ್ಯಾಮಿಲಿಗೆ ಹೊಸ ಅತಿಥಿಯ ಆಗಮನದ ಬಗ್ಗೆ ಇಷ್ಟೆಲ್ಲಾ ಚರ್ಚೆ ಆಗುತ್ತಿರುವಾಗ ಉಪಾಸನಾ ತವರು ಮನೆಗೆ ಹೋಗಿದ್ದಾರೆ. ಇನ್ನೂ ಇತ್ತೀಚೆಗೆ ಉಪಾಸನಾ ಅವರು ಮಾಡಿರುವ ಇನ್ಸ್ಟಾಗ್ರಾಂ ಪೋಸ್ಟ್ ಸದ್ದು ಮಾಡಿದೆ. ತನ್ನ ತಾಯಿ, ಅಜ್ಜಿ ಸೇರಿದಂತೆ ಕುಟುಂಬದ ಮಹಿಳಾ ಸದಸ್ಯರ ಆಶೀರ್ವಾದ ಪಡೆದಿದ್ದಾರೆ. ಮಾತೃತ್ವ ಅನುಭವಿಸಲು ಮುಂದಾಗಿರುವುದಾಗಿ ಹೇಳಿದ್ದಾರೆ. ತನ್ನ ಅತ್ತೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಬಾಡಿಗೆ ತಾಯಿಯ ಮೂಲಕ ಅವರು ಮಗು ಪಡೆಯುತ್ತಾರೆ ಎನ್ನುವುದೆಲ್ಲಾ ಸುಳ್ಳು, ಉಪಾಸನಾ ಅವರ ಈ ಪೋಸ್ಟ್‌ನಲ್ಲಿ ಅದು ಅರ್ಥವಾಗುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
Advertisement
View this post on Instagram
ಸರೋಗೆಸಿ ಸುದ್ದಿಯಾಗಲು ಕಾರಣ ಇತ್ತೀಚೆಗೆ ರಾಮ್‌ಚರಣ್ ದಂಪತಿ ಸಾಕಷ್ಟು ಕಡೆಗೆ ವೆಕೇಷನ್‌ಗೆ ತೆರಳಿದ್ದರು. ಈ ಪರಿಣಾಮ, ಉಪಾಸನಾ ನಿಜಕ್ಕೂ ಪ್ರೆಗ್ನೆಂಟ್ ಆಗಿದ್ದಾರಾ ಎಂಬ ಅನುಮಾನ ಶುರುವಾಗಿತ್ತು. ಪ್ರೆಗ್ನೆಂಟ್ ಆದವರು ಹೀಗೆ ಹೊರಗಡೆ ಸುತ್ತಾಡುತ್ತಾರಾ ಎಂಬ ವಿಷ್ಯ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟಕ್ಕೂ ಈ ಸುದ್ದಿ ನಿಜಾನಾ ಕೇವಲ ಗಾಸಿಪ್‌ಗಷ್ಟೇ ಸೀಮಿತನಾ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.