ನವದೆಹಲಿ: ಫೆಬ್ರವರಿ 14ರಂದು ಜೈಷ್-ಎ-ಮೊಹಮ್ಮದ್ ಸಂಘಟನೆ ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ ಭಾರತದ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಪ್ರತಿಕಾರವಾಗಿ ಫೆಬ್ರವರಿ 26ರ ಬೆಳಗಿನ ಜಾವ ಭಾರತದ ವಾಯುಪಡೆ ಉಗ್ರರ ಶಿಬಿರಗಳಾದ ಬಾಲಕೋಟ್, ಮುಝಾಫರ್ ಬಾದ್ ಮತ್ತು ಚಿಕೋಟಿಯ ನೆಲೆಗಳನ್ನು ಧ್ವಂಸಗೊಳಿಸಿತ್ತು. ದಾಳಿಗೊಳಗಾದ ಬಾಲಕೋಟ್ ನಲ್ಲಿಯೇ ಮಸೂದ್ ಅಜರ್ ಇದ್ದನು ಎಂದು ಹೇಳಲಾಗುತ್ತಿದೆ.
ದಾಳಿಯ ಬಳಿಕ ಪಾಕ್ ಸರ್ಕಾರ ಅಲ್ಲಿಯ ಮೃತದೇಹಗಳ ಜೊತೆ ಮಸೂದ್ ನನ್ನು ರಾವಲ್ಫಿಂಡಿಯ ಸೇನಾಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೆರೆಡು ದಿನಗಳಿಂದ ಮಸೂದ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂಬ ವದಂತಿ ಹಬ್ಬಿತ್ತು. ಪಾಕ್ ಸರ್ಕಾರ ಸತ್ಯ ಮರೆಮಾಡಿ, ಭಾರತದ ನಡೆಸಿದ ದಾಳಿಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಭಾರತ ಪರಿಸರ ಭಯೋತ್ಪಾದನೆ ನಡೆಸುತ್ತಿದೆ ಎಂದು ಆರೋಪಿಸಿತ್ತು.
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್, ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕನಾಗಿದ್ದ ಮಸೂದ್ ಅಜರ್ ಸಾವಿನ ವಿಚಾರ ಖಚಿತವಾಗಬೇಕಿದೆ. ಎರಡು ದಿನಗಳ ಹಿಂದೆ ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಷಿ, ಒಂದು ವೇಳೆ ಭಾರತ ಖಚಿತ ಸಾಕ್ಷಿಗಳನ್ನು ನೀಡಿದ್ರೆ ಆತನನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.
ಫೆಬ್ರವರಿ 26ರಂದು ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಮಸೂದ್ ಅಜರ್ ನನ್ನು ಪಾಕಿಸ್ತಾನ ರಹಸ್ಯವಾಗಿ ಆತನನ್ನು ಸೇನಾಸ್ಪತ್ರೆಗೆ ದಾಖಲಿಸಿತ್ತು. ಆದ್ರೆ ಸ್ಥಳೀಯರಿಗೆ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ರಹಸ್ಯವನ್ನು ಪಾಕ್ ಸರ್ಕಾರ ಮರೆಮಾಡಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಫೆಬ್ರವರಿ 28ರಂದು ಭಾರತದ ಸೇನಾನೆಲೆಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಭಾರತದ ವಾಯುಪಡೆ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಈ ವೇಳೆ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್ ವಶಕ್ಕೆ ಒಳಪಟ್ಟಿದ್ದರು. ಇದಾದ ಬಳಿಕ ಮಾರ್ಚ್ 1ರಂದು ಪಾಕಿಸ್ತಾನ ಅಭಿನಂದನ್ ಅವರನ್ನು ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv