ಬಾಲಿವುಡ್ ನಟಿ ಕತ್ರಿನಾ ಕೈಫ್- ವಿಕ್ಕಿ ಕೌಶಲ್(Vicky Kaushal) ಮದುವೆಯಾಗಿ 2 ವರ್ಷಗಳು ಕಳೆದಿದೆ. ಮದುವೆಯಾಯ್ತು, ಮಗುವಿನ (Baby) ಬಗ್ಗೆ ಅದ್ಯಾವಾಗ ಗುಡ್ ನ್ಯೂಸ್ ಕೊಡುತ್ತೀರಾ ಎಂದು ಕೇಳುವವರಿಗೆ ವಿಕ್ಕಿ ಕೌಶಲ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಕ್ಕಿ- ಕತ್ರಿನಾ(Katrina Kaif) ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ 2021ರಲ್ಲಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಇದೀಗ ಕತ್ರಿನಾ ದಂಪತಿಗೂ ಮಗು ಮಾಡಿಕೊಳ್ಳುವ ಬಗ್ಗೆ ಪ್ರೆಷರ್ ಇದ್ಯಾ? ಎಂಬ ಪ್ರಶ್ನೆ ಸಂದರ್ಶನವೊಂದರಲ್ಲಿ ವಿಕ್ಕಿ ಕೌಶಲ್‌ಗೆ ಎದುರಾಗಿದೆ. ಅದಕ್ಕೆ ನಟ ಉತ್ತರಿಸಿದ್ದಾರೆ. ನಾವಿಬ್ಬರೂ ಸದ್ಯ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡುತ್ತಿಲ್ಲ. ಇಬ್ಬರು ಸಿನಿಮಾ ಕೆರಿಯರ್ ಕಡೆ ಗಮನ ಕೊಡುತ್ತಿದ್ದೇವೆ ಎಂದು ಮಾತನಾಡಿದ್ದಾರೆ.
ಜೊತೆಗೆ ನಮ್ಮ ಕುಟುಂಬ ಕೂಡ ಮಗುವಿನ ಪ್ಲ್ಯಾನಿಂಗ್ ಬಗ್ಗೆ ಕೇಳೋದಿಲ್ಲ. ನಮ್ಮಿಬ್ಬರ ಕುಟುಂಬದ ಕಡೆಯಿಂದ ಬೆಂಬಲವಿದೆ ಎಂದು ನಟ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಭಗೀರಥ’ ಚಿತ್ರಕ್ಕೆ ಚಾಲನೆ: ಮಠಾಧಿಪತಿ ಪಾತ್ರದಲ್ಲಿ ನಿರ್ದೇಶಕ ಸಾಯಿ ಪ್ರಕಾಶ್
ನಟಿ ಕತ್ರಿನಾ ಕೈಫ್ ಸದ್ಯ ‘ಟೈಗರ್ 3’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಸಲ್ಮಾನ್ ಖಾನ್‌ಗೆ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ವಿಕ್ಕಿ ಕೌಶಲ್ ಕೂಡ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]