ಸೋಲರಿಯದ ಲೇಡಿ ಸೂಪರ್ ಸ್ಟಾರ್, ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಅಕ್ಷರಶಃ ಬಿಟೌನ್ ಮಂದಿಯ ಬಾಯಿಗೆ ಸಿಕ್ಕಿದ್ದಾರೆ. ಯಾವಾಗಲೂ ಬಾಲಿವುಡ್ ಕಲಾವಿದರನ್ನು ಕಾಲೆಳೆಯುತ್ತಿದ್ದ ಈ ನಟಿಯ ಧಾಕಡಾ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿದೆ. ಹೀಗಾಗಿ ಈ ಸಿನಿಮಾದ ಲಾಭ ನಷ್ಟದ ಲೆಕ್ಕಾಚಾರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿದೆ. ಧಾಕಡ್ ಸಿನಿಮಾದಿಂದ ನಿರ್ಮಾಪಕ ಭಾರೀ ನಷ್ಟ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್
Advertisement
ಧಾಕಡ್ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿತ್ತು. ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಿ ಪ್ರಚಾರವನ್ನೂ ಮಾಡಲಾಯಿತು. ಏನೇ ಪ್ರಚಾರ ಮಾಡಿದರೂ, ಬಾಕ್ಸ್ ಆಫೀಸಿನಲ್ಲಿ ಗೆಲ್ಲಲು ಮಾತ್ರ ಸಿನಿಮಾ ತಿಣುಕಾಡಬೇಕಾಯಿತು. ರಿಲೀಸ್ ಆದ ಮೊದಲ ದಿನದಿಂದಲೂ ಜನರು ಆ ಸಿನಿಮಾವನ್ನು ಸ್ವೀಕರಿಸಲೇ ಇಲ್ಲ. ಹೀಗಾಗಿ ಒಟ್ಟು ನಾಲ್ಕೈದು ಕೋಟಿ ಸಂಪಾದನೆ ಮಾಡಲು ಅದು ಹರಸಾಹಸ ಪಡಬೇಕಾಯಿತು.
Advertisement
Advertisement
ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಈ ಚಿತ್ರಕ್ಕೆ ಬರೋಬ್ಬರಿ 95 ಕೋಟಿ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ. ಈವರೆಗೂ ಈ ಸಿನಿಮಾದ ಗಳಿಕೆ ಮೂರು ಕೋಟಿಗೂ ದಾಟಿಲ್ಲ ಎನ್ನುತ್ತಾರೆ ಬಾಲಿವುಡ್ ಸಿನಿಪಂಡಿತರು. ಡಿಜಿಟಲ್ ರೈಟ್ಸ್ ಕೂಡ ಕೇಳುವವರೇ ಇಲ್ಲ ಎನ್ನಲಾಗುತ್ತಿದೆ. ಒಂದು ವೇಳೆ ಡಿಜಿಟಲ್, ಸ್ಯಾಟ್ಲೈಟ್ ಹಕ್ಕು ಹಾಗೂ ಆಡಿಯೋ ಹಕ್ಕುಗಳಿಂದ ಬಂದ ಹಣವನ್ನು ಕಳೆದರೂ, ಅಂದಾಜು 70 ಕೋಟಿಗೂ ಅಧಿಕ ನಷ್ಟವನ್ನು ನಿರ್ಮಾಪಕರಿಗೆ ಈ ಸಿನಿಮಾ ಮಾಡಲಿದೆ. ಇದನ್ನೂ ಓದಿ: ಅಮ್ಮ ಅಂತಾ ಎಷ್ಟೇ ಹೇಳಿಕೊಟ್ಟರೂ ಕೊನೆಗೆ ಅಪ್ಪ ಎಂದು ಕರೆದ ರಾಯನ್
Advertisement
ಅಷ್ಟೊಂದು ನಷ್ಟ ಮಾಡಿಕೊಂಡ ನಿರ್ಮಾಪಕನ ಬಗ್ಗೆ ಸ್ವತಃ ಕಂಗನಾ ಅವರಿಗೂ ನೋವಿದೆಯಂತೆ. ಹಾಗಾಗಿ ಮುಂದಿನ ದಿನಗಳಲ್ಲೂ ಅವರು ನಿರ್ಮಾಪಕರ ಜೊತೆ ನಿಂತುಕೊಳ್ಳುವ ಮಾತುಗಳನ್ನು ಆಡಿದ್ದಾರಂತೆ. ಮತ್ತೊಂದು ಕಾಲ್ ಶೀಟ್ ಕೊಡುವ ಕುರಿತು ಮಾತುಕತೆ ಕೂಡ ನಡೆದಿದೆ ಎನ್ನಲಾಗುತ್ತಿದೆ.