CinemaKarnatakaLatestMain PostSandalwood

ಸಾಲ ತೀರಿಸಲು ಬಂದಿದ್ದಾರಾ ಜಶು – ರೂಪೇಶ್ ಮೇಲೆ ಇರೋದು ಸಿಟ್ಟೋ, ಕಿಂಡಲ್ಲೋ?

ಬಿಗ್‍ಬಾಸ್ ಓಟಿಟಿ ಮುಗಿಯುವುದಕ್ಕೆ ಕಾಲ ತುಂಬಾ ಸನಿಹವಾಗಿದೆ. ಇನ್ನೆರಡು ವಾರ ಕಳೆದರೆ ಸಂಪೂರ್ಣವಾಗಿ ಬಿಗ್‍ಬಾಸ್ ಮುಗಿದಿರುತ್ತದೆ. ಈ ಮಧ್ಯೆ ಇಂದು ನಾಮಿನೇಷನ್ ಪ್ರಕ್ರಿಯೆ ಕೂಡ ಮೊದಲಿನಂತೆಯೇ ನಡೆದಿದೆ. ಮನೆಯವರೆಲ್ಲರ ಆಯ್ಕೆಯ ಪ್ರಕಾರ, ಸೋಮಣ್ಣ, ನಂದಿನಿ, ಸೋನು, ಜಯಶ್ರೀ, ಆರ್ಯವರ್ಧನ್ ಅವರು ನಾಮಿನೇಷನ್ ಆಗಿದ್ದರು. ಇನ್ನು ರಾಕೇಶ್ ಜನರ ಆಯ್ಕೆಯಂತೆ ಬಚಾವ್ ಆಗಿದ್ದಾರೆ. ರೂಪೇಶ್ ಕ್ಯಾಪ್ಟನ್ ಆಗಿರುವ ಕಾರಣ ನಾಮಿನೇಷನ್ ಮಾಡುವಂಗಿಲ್ಲ. ಇನ್ನುಳಿದದ್ದು ಸಾನ್ಯಾ ಮತ್ತು ಜಶ್ವಂತ್ ನಾಮಿನೇಷನ್ ಆಗದೇ ಇದ್ದವರು. ಕ್ಯಾಪ್ಟನ್ ಆಗಿದ್ದ ರೂಪೇಶ್ ಅವರಿಗೆ ಬಿಗ್‍ಬಾಸ್ ಸೂಚನೆ ನೀಡಿತ್ತು. ನೇರ ನಾಮಿನೇಷನ್ ಮಾಡುವ ಅವಕಾಶ. ರೂಪೇಶ್‍ಗೆ ಸಾನ್ಯಾ ಕೂಡ ಮುಖ್ಯ ಜಶ್ವಂತ್ ಕೂಡ ಮುಖ್ಯ. ಆದರೆ ಮೊದಲ ಆದ್ಯತೆ ಕೊಟ್ಟಿದ್ದು ಸಾನ್ಯಾಗೆ. ಸೋ ಇಲ್ಲಿ ಜಶ್ವಂತ್ ನೇರ ನಾಮಿನೇಟ್ ಆಗಿದ್ದರು. ಆದರೆ ಇದಾದ ಮೇಲೆ ಒಂದು ಸ್ವಲ್ಪ ಜಶ್ವಂತ್ ಬೇಸರ ಮಾಡಿಕೊಂಡರು ಎನಿಸುತ್ತದೆ. ಫ್ರೆಂಡ್ ಅಂತ ಹೇಳಿ ನಾಮಿನೇಟ್ ಮಾಡಿಬಿಟ್ಟ ಅಂತ ಫನ್ ಆಗಿ ಅಂದು ಹೊರಟಿದ್ದಾರೆ.

ಆದರೆ ಕುಂತರೂ ನಿಂತರೂ ನಾಮಿನೇಷನ್ ದೇ ಡಿಸ್ಕಷನ್, ನಂದು ಬಳಿ ಬಂದು ಅಳಲು ತೋಡಿಕೊಳ್ಳುತ್ತಿದ್ದ, ಜಶ್ವಂತ್ ಇನ್ನು ಎಂಟರ್ಟೈನ್ ಮಾಡಬೇಕು ಅಂತಿದ್ದಾಗ, ನಂದು ರಿಪ್ಲೆ ಮಾಡಿ ಮಾಡ್ತಾ ಇದ್ದಿಯಾ ಅಲ್ವಾ ಅಂದಿದ್ದಾರೆ. ಆದರೆ ರೂಪೇಶ್ ಕೊಟ್ಟ ರೀಸನ್ ನನಗೆ ಇಷ್ಟ ಆಗಲಿಲ್ಲ. ಹೆಚ್ಚು ನಾಮಿನೇಟ್ ಆಗಿಲ್ಲವಲ್ಲ ಅದಕ್ಕೆ ಅಂತ ಹೇಳಿ ನಾಮಿನೇಟ್ ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಅಲ್ಲಿಗೆ ಮುಗಿದ ಮಾತುಕತೆ ಮತ್ತೆ ಕಸ ಗೂಡಿಸುವಾಗ ಶುರುವಾಗಿದೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

ಅತ್ತ ರೂಪೇಶ್ ಮತ್ತು ಸಾನ್ಯಾ ಕೂಡ ಈ ಬಗ್ಗೆ ಡಿಸ್ಕಷನ್ ಮಾಡಿದ್ದಾರೆ. ರೂಪೇಶ್, ನೇರ ನಾಮಿನೇಟ್ ಮಾಡಿದ್ದಕ್ಕೆ ಜಶು ಫೀಲ್ ಮಾಡಿಕೊಂಡಿದ್ದಾರೆ. ಆದರೆ ನನಗೆ ಆಪ್ಶನ್ ಇರಲಿಲ್ಲ. ನಿನ್ನ ಹೇಗೆ ನಾಮಿನೇಟ್ ಮಾಡುವುದಕ್ಕೆ ಸಾಧ್ಯ. ಅದು ನ್ಯಾಯನೂ ಅಲ್ಲ. ನಾನು ಮಾಡಿರುವುದರಲ್ಲಿ ತಪ್ಪಿಲ್ಲ. ಸರಿಯಾಗಿದೆ ನನ್ನ ನಿರ್ಧಾರ ಅಂತ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ. ಆಗ ಸಾನ್ಯ, ಜಶ್ವಂತ್ ಪರ ಮಾತನಾಡಿದ್ದು, ಅವನು ಮೆಚ್ಯುರ್ಡ್ ಇದ್ದಾನೆ. ಅರ್ಥ ಮಾಡಿಕೊಳ್ಳುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

ಜಶ್ವಂತ್ ಕಸ ಗುಡಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ರೂಪೇಶ್‍ನಿಂದ ಮತ್ತೆ ಒಂದಷ್ಟು ಫನ್ನಿ ಇನ್ಸಿಡೆಂಟ್ ನಡೆದಿದೆ. ಸ್ಲೈಲ್ ಕೊಟ್ಟು ರೂಪೇಶ್ ಹಗ್ ಮಾಡಿದ್ದಾರೆ. ಆಗ ಜಶ್ವಂತ್, ಏನು ಒಂದು ಸ್ಮೈಲ್ ಕೊಟ್ಟರೆ ಅದಕ್ಕೆ ನಾನು ಬೀಳುತ್ತೇನೆ ಅಂತಾನ. ಒಂದು ಬೆಟರ್ ರೀಸನ್ ಗೊತ್ತಿಲ್ವಾ ನಿನಗೆ ಎಂದಿದ್ದಾರೆ. ಅದಕ್ಕೆ ರೂಪೇಶ್ ಸಮಾಧಾನ ಮಾಡಿದ್ದು, ನೀವಿಬ್ಬರು ಸ್ಟ್ರಾಂಗ್ ಅಂತ ಹೇಳಿದ್ದಾರೆ. ಆದರೆ ಜಶ್ವಂತ್ ಬೇಸರ ಏನು ಅಂದರೆ ಸರಿಯಾದ ರೀಸನ್ ಕೊಟ್ಟಿಲ್ಲ ಅಂತ. ಆಗ ನಂದಿನಿ ಅಲ್ಲಿಯೇ ಪಾಸಾದಾಗ ನಾಮಿನೇಷನ್ ನಿಂಗೆ ಪಾಪ ಎನ್ನಿಸೋದಿಲ್ವಾ ಎಂದಿದ್ದಾರೆ. ಆಗ ನೀನು ಹೀರೋ ಬಿಡು ಎಂದು ನಂದಿನಿ ಹೇಳಿ ತನ್ನ ಕೆಲಸವನ್ನು ಮುಂದುವರೆಸಿದ್ದಾರೆ.

ಮತ್ತೆ ಅಡುಗೆ ಮನೆಯಲ್ಲಿ ಜಶ್ವಂತ್ ಅಂಡ್ ರೂಪೇಶ್ ಮುಖಾಮುಖಿಯಾಗಿದ್ದಾರೆ. ಆಗ ಜಶ್ವಂತ್, ರೂಪೇಶ್ ಬಳಿ ನಾನು ನನ್ನ ಫ್ಯಾಮಿಲಿಗೆ ಹೇಳಿ ಬಂದಿದ್ದೇನೆ, ಗೆದ್ದುಕೊಂಡು ಬರುತ್ತೇನೆ. ಸಾಲ ಎಲ್ಲಾ ತೀರಿಸೋಣಾ ಅಂತ ಹೇಳಿದ್ದೇನೆ. ಆದರೆ ನೀನು ನನ್ನ ನಾಮಿನೇಟ್ ಮಾಡಿದ್ದೀಯಾ ಅಂದಾಗ ರೂಪೇಶ್ ನಾನು ನಾಮಿನೇಟ್ ಮಾಡಿರುವುದು ಎಲಿಮಿನೇಟ್ ಮಾಡಿಲ್ಲ ಎಂದಿದ್ದಾರೆ. ಈ ಮಧ್ಯೆ ರೂಪೇಶ್ ನೊಣದ ಬಗ್ಗೆ ಕಾಳಜಿ ತೋರಿಸಿದಾಗ ಮತ್ತೆ ಜಶ್ವಂತ್ ಕಿಂಡಲ್ ಮಾಡಿದ್ದಾರೆ. ನೋಡು ನೊಣದ ಬಗ್ಗೆ ಕಾಳಜಿ ತೋರಿಸುತ್ತೀಯಾ ನನ್ನ ಬಗ್ಗೆ ಇಲ್ಲ ಅಂತಾನೆ. ಆಗ ಮತ್ತೆ ವಿವರಣೆ ನೀಡಿದ ರೂಪೇಶ್, ನೋಡು ಹೊರಗೆ ಬಂದಾಗ ಯಾರಾದರೂ ನಿನ್ನ ಅಟ್ಯಾಕ್ ಮಾಡಿದರೆ ನಾನು ಅಲ್ಲಿ ಇರುತ್ತೇನೆ. ಮೊದಲು ನನ್ನ ಟಚ್ ಮಾಡು ಅಂತ ಅಂದಾಗ. ಹಾ ನಂಗೆ ಯಾರಾದರೂ ಹೊಡೆಯೋದಕ್ಕೆ ಬಂದಾಗ ನಾನು ನಿನಗೆ ಫೋನ್ ಮಾಡಿದರೇ ಆ ಮಗ ಇನ್ನೊಂದು 6 ಅವರ್ಸ್‍ನಲ್ಲಿ ಬರುತ್ತೇನೆ ಅಂತ ಹೇಳುತ್ತೀಯಾ ಅಂತ ಒಂದಷ್ಟು ತಮಾಷೆ ಮಾಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button