ಮುಸ್ಲಿಮರಿಗೆ ಮೀಸಲಾತಿ ಮೋದಿ ಕೊಟ್ರೆ ಸರಿ, ನಾವು ಕೊಟ್ರೆ ತಪ್ಪಾ? – ಯತೀಂದ್ರ

Public TV
1 Min Read
Yathindra siddaramaiah 2

– ನಮ್ಮ ತಂದೆ ಸಿಎಂ ಆಗಿರೋವರೆಗೂ ಸಚಿವ ಸ್ಥಾನ ಕೇಳಲ್ಲ ಎಂದ ಎಂಎಲ್‌ಸಿ

ಮೈಸೂರು: ಮುಸ್ಲಿಂ ಸಮುದಾಯದ 70 ಜಾತಿಗೆ ಮೀಸಲಾತಿ ಕೊಟ್ಟಿದ್ದೇವೆ ಎಂದು ಪ್ರಧಾನಿ ಮೋದಿಯವರು ಹೆಮ್ಮೆಯಿಂದ ಹೇಳಿದ್ದಾರೆ. ಮೋದಿಯವರು (Narendra Modi) ಮಾಡಿದರೆ ಸರಿ ನಾವು ಮಾಡಿದ್ರೆ ತಪ್ಪಾಗುತ್ತಾ? ಅಂತ ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ (Muslim reservation) ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ನಾವು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಟ್ಟಿಲ್ಲ. ಹಿಂದುಳಿದ ವರ್ಗ ಅನ್ನೋ ಕಾರಣಕ್ಕೆ ಕೊಟ್ಟಿದ್ದೇವೆ. ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಮೀಸಲಾತಿ ಕೊಟ್ಟಾಗ ಮುಸ್ಲಿಂ ಧರ್ಮದವರಿಗೂ ಕೊಡಬೇಕಾಗುತ್ತೆ. ಮುಸ್ಲಿಂ ಮೀಸಲಾತಿ ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯದಲ್ಲೂ ಇದೆ. ಆದ್ರೆ ನಾವು ಕೇವಲ ಮುಸ್ಲಿಂರಿಗೆ ಮಾತ್ರ ಮೀಸಲಾತಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

Saugat e Modi Eid Kit

1977 ರಲ್ಲೇ ಹಾವನೂರು ಆಯೋಗ ಮುಸ್ಲಿಮರನ್ನ ಹಿಂದುಳಿದ ವರ್ಗಕ್ಕೆ ಸೇರಿಸಿದೆ. ಹಿಂದುಳಿದ ವರ್ಗಕ್ಕೆ ಕೊಟ್ಟಾಗ ಮುಸ್ಲಿಮರಿಗೂ ಕೊಡಬೇಕಾಗುತ್ತೆ. ಮುಸ್ಲಿಂ ಸಮುದಾಯದ 70 ಜಾತಿಗೆ ಮೀಸಲಾತಿ ಕೊಟ್ಟಿದ್ದೇವೆ ಎಂದು ಪ್ರಧಾನಿ ಮೋದಿಯವರು ಹೆಮ್ಮೆಯಿಂದ ಹೇಳಿದ್ದಾರೆ. ಮೋದಿಯವರು ಮಾಡಿದರೆ ಸರಿ ನಾವು ಮಾಡಿದ್ರೆ ತಪ್ಪಾಗುತ್ತಾ? ಅಂತ ಬಿಜೆಪಿ ನಾಯಕರ ಹೇಳಿಕೆಗೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸಚಿವ ಸ್ಥಾನ ಕೇಳಲ್ಲ:
ಇದೇ ವೇಳೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಮ್ಮ ತಂದೆಯವರು ಎಲ್ಲಿ ತನಕ ಸಿಎಂ ಆಗಿರುತ್ತಾರೆ ಅಲ್ಲಿವರೆಗೆ ಸಚಿವ ಸ್ಥಾನ ಕೇಳಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಅಂತ ಯತೀಂದ್ರ ಅವರು ಸ್ಪಷ್ಟಪಡಿಸಿದ್ದಾರೆ.

Share This Article