ಬೆಂಗಳೂರು: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿ ಸೈಲೆಂಟ್ ಆಗಿದ್ದ ಬಿಟ್‍ಕಾಯಿನ್ ಹಗರಣ ಮತ್ತೆ ಸುದ್ದಿಗೆ ಬಂದಿದೆ. ಬಿಜೆಪಿಯ ಧರ್ಮರಾಜಕಾರಣಕ್ಕೆ ಕಾಂಗ್ರೆಸ್ ಮತ್ತೆ ಬಿಟ್‍ಕಾಯಿನ್ ಪ್ರತ್ಯಸ್ತ್ರ ಪ್ರಯೋಗಿಸಿದೆ.
Advertisement
2016ರಲ್ಲಿ ಬಿಟ್‍ಫಿನೆಕ್ಸ್ ಎಕ್ಸ್‌ಚೇಂಚ್ ಹ್ಯಾಕ್ ಪ್ರಕರಣ ಸಂಬಂಧ ಅಮೆರಿಕದ ಗುಪ್ತಚರ ಸಂಸ್ಥೆ (ಎಫ್‍ಬಿಐ) (Federal Bureau Of Investigation) (FBI) ತನಿಖೆ ಚುರುಕು ಮಾಡಿದೆ. ಈ ಪ್ರಕರಣದಲ್ಲಿ ಬಂಧಿತ ದಂಪತಿಗೆ ಭಾರತದ ನಂಟು ಇರೋದು ದೃಢವಾಗಿದೆ. ಹಾಗಾಗಿ, ಕರ್ನಾಟಕ ಹ್ಯಾಕರ್ ಶ್ರೀಕಿಗೂ ಅಮೆರಿಕದ ಬಿಟ್‍ಫಿನೆಕ್ಸ್ ಹ್ಯಾಕ್ ಪ್ರಕರಣಕ್ಕೂ ನಂಟಿನ ಅನುಮಾನ ಮೂಡಿದೆ. ಈ ಸಂಬಂಧ ಎಫ್‍ಬಿಐ ಅಧಿಕಾರಿಗಳು ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರಾ? ಈ ಟೀಮ್ ಕರ್ನಾಟಕಕ್ಕೂ ಬರುತ್ತಾ? ಎಂಬ ಚರ್ಚೆ ಎದ್ದಿದೆ. ಇದನ್ನೂ ಓದಿ: ಬರೋಬ್ಬರಿ 12 ಕಂಪನಿಗಳನ್ನು ಹ್ಯಾಕಿಂಗ್ ಮಾಡಿದ್ದ ಶ್ರೀಕಿ
Advertisement
5/n
Layers of #BitcoinScam
Let HM & CM Bommai answer-
5. Why was Interpol not informed? Why did the BJP Government wait for over five months up till 24th April 2021 to write to Interpol and that also after the release of Sri Krishna on 17th April, 2021? https://t.co/uYsnVUUeG6
— Randeep Singh Surjewala (@rssurjewala) April 8, 2022
Advertisement
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು, ಕೇಂದ್ರ ಗೃಹ ಸಚಿವರು, ಕರ್ನಾಟಕದ ಮುಖ್ಯಮಂತ್ರಿಗಳು ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ. ಕರ್ನಾಟಕದ ಬಿಜೆಪಿ ಸರ್ಕಾರದ ಅಡಿಯಲ್ಲಿ ನಡೆದ ಭಾರತದ ಅತಿದೊಡ್ಡ ಬಿಟ್‍ಕಾಯಿನ್ ಹಗರಣದ ತನಿಖೆ ಮಾಡಲು ಎಫ್‍ಬಿಐ ಭಾರತದಲ್ಲಿದೆಯೇ? ತನಿಖೆಯ ಹಾಗೂ ರಾಜಕೀಯ ವ್ಯಕ್ತಿಗಳು ಸೇರಿದಂತೆ ಶಂಕಿತರ ವಿವರಗಳನ್ನು ಬಿಡುಗಡೆ ಮಾಡ್ತೀರಾ? ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಬಂಧನದಲ್ಲಿದ್ದಿದ್ದು, ಪರಸ್ಪರ ಸಂಬಂಧವಿದೆಯೇ? 17 ಏಪ್ರಿಲ್ 2021ರಂದು ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಶ್ರೀಕಿ ಬಿಡುಗಡೆಗೊಂಡಿದ್ದರು ಕೂಡ 5 ತಿಂಗಳ ಬಳಿಕ ಇಂಟರ್‌ಪೋಲ್‌ಗೆ ಬಿಜೆಪಿ ಸರ್ಕಾರ ಈ ಬಗ್ಗೆ ಮಾಹಿತಿ ನೀಡಿದೆ. ಈ ಪ್ರಕರಣದ ಬಗ್ಗೆ ಕರ್ನಾಟಕ ಸರ್ಕಾರ ಯಾಕೆ ಎನ್‍ಐಎ, ಎಸ್‍ಎಫ್‍ಐಒ, ಇಡಿ ತನಿಖೆಗೆ ವಹಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್
Advertisement