ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ಬೀಳಿಸಿದ ರೂವಾರಿ. ಅವರು 819 ಕೋಟಿ ರೂ. ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಅಮಿತ್ ಶಾ, ದೇವೇಂದ್ರ ಫಡ್ನವೀಸ್, ಸಿಎಂ ಬೊಮ್ಮಾಯಿ ಈ ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಇದುವರೆಗೆ ರಮೇಶ್ ಗೆ ಒಂದು ನೊಟೀಸ್ ಸಹ ನೀಡಲಾಗಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
Advertisement
ರಮೇಶ್ ಜಾರಕಿಹೊಳಿ ಮಾಡಿರುವ ಕೋಟಿ ರೂ. ಬ್ಯಾಂಕ್ ಸಾಲದ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್ ನವರು ಹಲವು ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದಾರೆ. ಎಷ್ಟು ಜನರಿಗೆ ಸಾಲ ಕೊಡಬೇಕು ಅಂತ ಅವರೇ ದಾಖಲೆ ಸಲ್ಲಿಸಿದ್ದಾರೆ. ಇದರ ತನಿಖೆಯೂ ನಡೀತಿದೆ. ಅಭಿನಂದನ್ ಪಾಟೀಲ್, ರಮೇಶ್ ಜಾರಕಿಹೊಳಿಯವರ ಬೇನಾಮಿ. ಇವರ ಅರಿಹಂತ್ ಸೊಸೈಟಿಯಿಂದ 48 ಕೋಟಿ ರೂ ಸಾಲ ಪಡೆದಿದ್ದಾರೆ. 578 ಕೋಟಿ ರೂ ಸಾಲವನ್ನು ವಿವಿಧ ಡಿಸಿಸಿ ಬ್ಯಾಂಕ್ ಗಳಿಂದ ರಮೇಶ್ ಪಡೆದಿದ್ದಾರೆ ಎಂದರು. ಇದನ್ನೂ ಓದಿ: ಸರ್ಜರಿಗಾಗಿ ಸುನೀಲ್ ಶೆಟ್ಟಿ ಪುತ್ರಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟಿಗ ಕೆ.ಎಲ್ ರಾಹುಲ್
Advertisement
Advertisement
156 ಕೋಟಿ ರೂ. ಆದಾಯ ತೆರಿಗೆ ಕಟ್ಟದೇ ರಮೇಶ್ ಜಾರಕಿಹೊಳಿ ವಂಚನೆ ಮಾಡಿದ್ದಾರೆ. ಅಪೆಕ್ಸ್ ಬ್ಯಾಂಕ್ ನಿಂದ ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿಗೆ 2021 ರಲ್ಲಿ ನೊಟೀಸ್ ಕೊಟ್ಟಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ನೊಟೀಸ್ ಕೊಟ್ಟಿದ್ದಾರೆ. ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿ ಸಾಲ ಮರುಪಾವತಿಸಿಲ್ಲ. ಕಂಪೆನಿಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಉಲ್ಲೇಖ ಇದೆ ಎಂದು ವಿವರಿಸಿದರು. ಇದನ್ನೂ ಓದಿ: ರೆಬೆಲ್ ಶಾಸಕರಿಗೆ ಕೇಂದ್ರದಿಂದ Y+ ಭದ್ರತೆ
Advertisement
ರಮೇಶ್ ಅವರ ಕಂಪೆನಿಗೆ ಅಪೆಕ್ಸ್ ಬ್ಯಾಂಕ್ ನಿಂದ 2019 ರಲ್ಲಿ ಮತ್ತು 2021 ರಲ್ಲಿ ನೊಟೀಸ್ ಜಾರಿಯಾಗಿದೆ. ಅಪೆಕ್ಸ್ ಬ್ಯಾಂಕ್ ನೋಟೀಸ್ ನ ಮೊದಲ ವಿರುದ್ಧ ಧಾರವಾಡ ಪೀಠದಲ್ಲಿ ರಮೇಶ್ ಪ್ರಶ್ನೆ ಮಾಡ್ತಾರೆ. ಕೋರ್ಟ್ ಆರು ವಾರದೊಳಗೆ ಸಾಲ ತೀರಿಸಬೇಕೆಂದು ಆದೇಶ ಮಾಡುತ್ತೆ. ಆದರೆ ರಮೇಶ್ ಜಾರಕಿಹೊಳಿ ಸಾಲ ಮರುಪಾವತಿ ಮಾಡಿಲ್ಲ ಎಂದು ಹೇಳಿ ಜಾರಕಿಹೊಳಿ ಬ್ಯಾಂಕ್ ವಂಚನೆ ಕುರಿತ ದಾಖಲೆ ಬಿಡುಗಡೆ ಮಾಡಿದರು.
ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿಯನ್ನು ಸರ್ಕಾರ ದಿವಾಳಿ ಸಂಸ್ಥೆ ಅಂತ ಘೋಷಿಸಿದೆ. ಸರ್ಕಾರವೇ ದಿವಾಳಿ ಅಂತ ಘೋಷಿಸಿದ್ರೂ ಆ ಕಂಪೆನಿ ಕಬ್ಬು ಅರೆಯುವ ಕೆಲಸ ಮಾಡ್ತಿದೆ. ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪೆನಿಯಿ 2021 ರಲ್ಲಿ 60 ಕೋಟಿ ಸಂಪಾದನೆ ಮಾಡಿದೆ. ಬೋರ್ಡ್ ಮೆಂಬರ್ ಗಳಾಗಿರುವ ಆರು ಜನರ ಖಾತೆಗೆ ಹಣ ಹೋಗುತ್ತೆ. ಕಂಪೆನಿ ಬೋರ್ಡ್ ನಲ್ಲಿ ರಮೇಶ್, ಅವರ ಮಗ, ಮಗಳು ಇದ್ದಾರೆ. ಇವರೆಲ್ಲರಿಗೂ 60 ಕೋಟಿಯಲ್ಲಿ ಪಾಲು ಕೊಡಲಾಗಿದೆ ಎಂದು ಲಕ್ಷ್ಮಣ್ ಆರೋಪಿಸಿದರು.
ಇಡಿ ಏನು ಮಾಡ್ತಿದೆ?, ಕೇಂದ್ರ ಸರ್ಕಾರ ಏನ್ ಮಾಡ್ತಿದೆ?, ರಮೇಶ್ ಜಾರಕಿಹೊಳಿ ಅವರ ವಂಚನೆ ಇಡಿ ಕಣ್ಣಿಗೆ ಬಿದ್ದಿಲ್ವಾ..?. ನಾನು. ಬೆಂಗಳೂರಿನಲ್ಲಿ ಇರುವ ಇಡಿ ಕಚೇರಿಯಲ್ಲಿ ದೂರು ದಾಖಲು ಮಾಡ್ತೇನೆ. ರಮೇಶ್ ಜಾರಕಿಹೊಳಿ ವಂಚನೆ ವಿರುದ್ಧ ದೂರು ಕೊಡ್ತೇನೆ. ನಂತರ ಹೈಕೋರ್ಟ್ ನಲ್ಲಿ ಐಟಿ ವಿರುದ್ಧ ಪೆಟಿಷನ್ ಹಾಕ್ತೇನೆ. ಐಟಿಯವರು ರಮೇಶ್ ಜಾರಕಿಹೊಳಿಗೆ ಕೇವಲ ಒಂದು ನೊಟೀಸ್ ಕೊಟ್ಟು ಸುಮ್ಮನಾಗಿದೆ. ಐಟಿ ಇಲಾಖೆಯಿಂದ ಮುಂದೆ ಕಾನೂನು ಕ್ರಮ ಯಾಕೆ ಕೈಗೊಳ್ಳಲಿಲ್ಲ?. ಐಟಿ ಸರ್ಕಾರದ ಕೈಗೊಂಬೆಯಾಗಿ ಇದೆಯಾ ಎಂದು ಅವರು ಪ್ರಶ್ನಸಿದರು.