ಬೆಂಗಳೂರು: ದಿನೇಶ್ ಗುಂಡೂರಾವ್ (Dinesh Gundurao) ಅವರು ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ? ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ? ಅವರು ಯಾವುದನ್ನು ಉತ್ತೇಜನ ಮಾಡುವುದಕ್ಕೆ ಹೊರಟಿದ್ದಾರೆ. ಏನಾದ್ರು ಹೊಸ ದಂಧೆ ಶುರು ಮಾಡುವುದಕ್ಕೆ ಹೊರಟಿದ್ದಾರಾ? ದಂಧೆ ಶುರು ಮಾಡುವುದಕ್ಕೆ ಸಹಕಾರ ಸಿಗಲಿ ಎಂದು ಮಾತಾಡ್ತಿದ್ದಾರಾ? ಎಂದು ಬಿಜೆಪಿ ನಾಯಕ ಸಿಟಿ ರವಿ (C T Ravi) ಕಿಡಿಕಾರಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ದನದ ಮಾಂಸ ತಿನ್ನುತ್ತಿದ್ದರು ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ನಾನು ಅವರ ಹೇಳಿಕೆ ಗಮನಿಸಿದ್ದೇನೆ. ಮೂಲಭೂತ ವಾದ, ರಾಷ್ಟ್ರವಾದದ ನಡುವೆ ಅಗಾಧವಾದ ಅಂತರ ಇದೆ. ಮೂಲಭೂತ ವಾದ ದೇಶ ಒಡೆಯಿತು. ಅಖಂಡ ಭಾರತದ ವಿಭಜನೆಗೆ ಕಾರಣವಾಯ್ತು. ಪಾಕಿಸ್ತಾನ ರಚನೆಗೆ ಕಾರಣವಾಯ್ತು. ಲಕ್ಷಾಂತರ ಜನರ ಮಾರಣ ಹೋಮಕ್ಕೆ ಕಾರಣವಾಯ್ತು. ರಾಷ್ಟ್ರವಾದ ದೇಶಭಕ್ತಿಯಿಂದ ಕೂಡಿರೋದು. ರಾಷ್ಟ್ರವಾದದಿಂದ ದೇಶ ಉಳಿಸಬಹುದು. ಮೂಲಭೂತ ವಾದದಿಂದ ಪಾಕಿಸ್ತಾನ ನಿರ್ಮಾಣ ಆಗುತ್ತದೆ. ದಿನೇಶ್ ಗುಂಡೂರಾವ್ ಮತ್ತು ಪಾರ್ಟಿ ಮೂಲಭೂತ ವಾದವನ್ನು ಸಮರ್ಥನೆ ಮಾಡ್ತಿದೆಯೋ? ಅಥವಾ ರಾಷ್ಟ್ರೀಯ ವಾದವನ್ನೋ? ಮತ್ತಷ್ಟು ಪಾಕಿಸ್ತಾನ ನಿರ್ಮಾಣ ಮಾಡೋದು ನಿಮ್ಮ ಉದ್ದೇಶನಾ? ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿವಮೊಗ್ಗ ದಸರಾಗೆ ವೈಭವದ ಚಾಲನೆ
Advertisement
Advertisement
ಗಾಂಧೀಜಿ (Mahatma Gandhi) ಗೋಹತ್ಯೆ ಪರ ಇದ್ರಾ? ವಿರೋಧ ಇದ್ರಾ? ಗಾಂಧಿ ಒಂದು ದಿನ ಅಧಿಕಾರ ಸಿಕ್ಕರೆ ಸಂಪೂರ್ಣ ಗೋಹತ್ಯೆ ನಿಷೇಧ ಮಾಡ್ತೀನಿ ಎಂದು ಹೇಳಿದ್ರು. ಹಾಗಾದರೆ ದಿನೇಶ್ ಗುಂಡೂರಾವ್ ಮತ್ತು ಪಾರ್ಟಿ ಗಾಂಧಿ ವಿಚಾರಧಾರೆ ಪರವೋ? ವಿರುದ್ದವೋ? ಗಾಂಧಿ ವಿಚಾರಧಾರೆ ಪರ ಇದ್ದರೆ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆ ಎರಡನ್ನೂ ಸಮರ್ಥನೆ ಮಾಡುವುದಿಲ್ಲ. ಜಿನ್ನಾ ವಿಚಾರಧಾರೆ ಪರ ಇದ್ದರೆ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆ ಭಾರತದ ವಿಭಜನೆಯನ್ನು ಸಮರ್ಥನೆ ಮಾಡುತ್ತಾರೆ. ದಿನೇಶ್ ಗುಂಡೂರಾವ್ ಜಿನ್ನಾ ವಿಚಾರಧಾರೆ ಪರವೋ? ಗಾಂಧಿ ವಿಚಾರಧಾರೆ ಪರವೋ? ಸ್ಪಷ್ಟಪಡಿಸಬೇಕು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸಿಎಂ ಕೇಸ್‌ನಲ್ಲಿ ಅವರೇ ಜಡ್ಜ್, ಅವರೇ ಲಾಯರ್- ಸಿ.ಟಿ ರವಿ
Advertisement
Once again, sorry for speaking the truth! pic.twitter.com/OM6tEsK9yU
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 3, 2024
Advertisement
ನಾಗರೀಕ ಸಮಾಜಕ್ಕೆ ಗಾಂಧಿ ಬೇಕು. ರಾಷ್ಟ್ರದ ರಕ್ಷಣೆಗೆ ಸಾವರ್ಕರ್ ವಿಚಾರಧಾರೆ ಮಾತ್ರ ರಾಷ್ಟ್ರ ಉಳಿಸೋದು. ಸಮಾಜದ ನಡುವೆ ಮೌಲ್ಯಗಳು ಇರಬೇಕು. ಸಮಾಜದ ಒಳಗೆ ಅಹಿಂಸೆಬೇಕು ಅದಕ್ಕೆ ಗಾಂಧಿ ಬೇಕು. ರಾಷ್ಟ್ರದ ರಕ್ಷಣೆ ಅಹಿಂಸೆಯಿಂದ ಸಾಧ್ಯವಾಗುವ ಹಾಗಿದ್ದರೆ ಭಾರತ ದೊಡ್ಡ ಸೈನ್ಯ ಕಟ್ಟೋ ಅವಶ್ಯಕತೆ ಇರಲಿಲ್ಲ. ಪರಮಾಣು ಬಾಂಬ್, ಕ್ಷಿಪಣಿ ಇಟ್ಟುಕೊಳ್ಳೋ ಅವಶ್ಯಕತೆ ಇರಲಿಲ್ಲ. ಎಕೆ47 ಅವಶ್ಯಕತೆ ಇರಲಿಲ್ಲ. ಸೈನ್ಯ ಸಮರ್ಥವಾಗಿ ಇರಲಿಲ್ಲ ಅಂದಿದ್ದರೆ 1948ರಲ್ಲೇ ಭಾರತವನ್ನು ಪಾಕಿಸ್ತಾನ ಮುಗಿಸುತ್ತಿತ್ತು. ಭಾರತ ಬಲವಾಗಬೇಕು ಎಂದು ಕನಸು ಕಂಡವರು ಸಾವರ್ಕರ್. ಸಾವರ್ಕರ್ ವಿಚಾರಧಾರೆ ಭಾರತೀಯತೆ ಬಲಗೊಳಿಸೋದು ಆಗಿತ್ತು. ಜಿನ್ನಾನಿಗೆ ಅವನಿಗೆ ಕೇಳಿದ್ದು ಕೊಡೋದು ಸಾವರ್ಕರ್ ವಿಚಾರಧಾರೆ ಆಗಿರಲಿಲ್ಲ. ದುರ್ದೈವದ ಸಂಗತಿ ಅಂದರೆ ಗಾಂಧಿ ಬದುಕಿರುವಾಗಲೇ ಭಾರತ ವಿಭಜನೆ ಆಯಿತು. ಭಾರತ ವಿಭಜನೆಯನ್ನ ಗಾಂಧಿ ವಿಚಾರಧಾರೆ ತಡೆಯಲು ಆಗಲಿಲ್ಲ ಅನ್ನೋದು ವಾಸ್ತವಿಕ ಸತ್ಯ ಎಂದು ಹೇಳಿದರು. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ