– 5 ವರ್ಷವೂ ಸರ್ಕಾರ ಸುಭದ್ರ ಎಂದು ಟ್ವೀಟ್
ಬೆಂಗಳೂರು: ಮುಡಾ ಕೇಸಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಾಯಿ ಚಾಮುಂಡಿ ಸನ್ನಿಧಾನದಲ್ಲಿಂದು ಆಡಿರುವ ಮಾತುಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಇನ್ನೊಂದು ವರ್ಷದವರೆಗೂ ತಾಯಿ ಚಾಮುಂಡಿ (Chamundeshwari) ಆಶೀರ್ವಾದ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.
Advertisement
ಹೌದು. ಇದು ಒಂದೂವರೆ ವರ್ಷದ ಹಿಂದಿನ ಮಾತು… ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷ ಬರೋಬ್ಬರಿ 136 ಸ್ಥಾನ ಗೆಲ್ಲುವ ಮೂಲಕ ಅಖಂಡ ಗೆಲುವು ಸಾಧಿಸಿತ್ತು. ಈ ಸಂದರ್ಭದಲ್ಲಿ ಸಿಎಂ ಸ್ಥಾನಕ್ಕಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನಡುವೆ ಪೈಪೋಟಿ ನಡೆದಿತ್ತು. ಹೈಕಮಾಂಡ್ ಸಾಕಷ್ಟು ಸುತ್ತು ಸಂಧಾನ ಸಭೆ ನಡೆಸಿದ ನಂತ್ರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಈ ವೇಳೆ ಪವರ್ ಶೇರಿಂಗ್ ವಿಚಾರ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು.
Advertisement
Advertisement
ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ, ಕೊನೆಯ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಸಿಎಂ ಆಗೋ ರೀತಿ ಒಪ್ಪಂದ ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ, ಈ ಬಗ್ಗೆ ಈವರೆಗೆ ಯಾರೂ ಕೂಡ ಅಧಿಕೃತವಾಗಿ ಮಾತಾಡಿಲ್ಲ. ಆದ್ರೂ, ಆಗೋಮ್ಮೆ ಈಗೊಮ್ಮೆ ಈ ವಿಚಾರ ಸದ್ದು ಮಾಡುತ್ತಲೇ ಇರ್ತಿತ್ತು. ಸಿದ್ದರಾಮಯ್ಯ ಮಾತ್ರ 5 ವರ್ಷ ನಾನೇ ಸಿಎಂ ಎಂದು ಪ್ರತಿಪಾದಿಸುತ್ತಲೇ ಬಂದಿದ್ರು. ಆದ್ರೆ, ಮುಡಾ ಕೇಸಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಈ ಹೊತ್ತಲ್ಲಿ, ತಾಯಿ ಚಾಮುಂಡಿ ಸನ್ನಿಧಾನದಲ್ಲಿಂದು ಮುಖ್ಯಮಂತ್ರಿ ಆಡಿರುವ ಮಾತುಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಇನ್ನೊಂದು ವರ್ಷದವರೆಗೂ ತಾಯಿ ಚಾಮುಂಡಿ ಆಶೀರ್ವಾದ ಇರಲಿ. ಇನ್ನೊಂದು ವರ್ಷ ಒಳ್ಳೆಯ ಕೆಲಸ ಮಾಡಲು ದೇವಿ ಆಶೀರ್ವಾದ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.
Advertisement
ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಇರೋದು ಇನ್ನೊಂದು ವರ್ಷ ಮಾತ್ರನಾ? ಪವರ್ ಶೇರಿಂಗ್ ಮಾತುಕತೆ ಹೈಕಮಾಂಡ್ ಮಟ್ಟದಲ್ಲಿ ನಿಜಕ್ಕೂ ನಡೆದಿತ್ತಾ? ಮುಂದಿನ ವರ್ಷ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಪಲ್ಲಟಗಳು ನಡೆಯಲಿವೆಯಾ ಎನ್ನುವ ಪ್ರಶ್ನೆ ಉದ್ಭವವಾಗುವಂತೆ ಮಾಡಿದೆ. ಇದನ್ನೂ ಓದಿ: ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ – ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆ ಸಹಿತ ಶಾರದಾ ಮಾತೆ ಪ್ರತಿಷ್ಠಾಪನೆ
ಇನ್ನೊಂದು ವರ್ಷದವರೆಗೂ ತಾಯಿ ಚಾಮುಂಡಿ ಆಶೀರ್ವಾದ ಇರಲಿ, ಎಂಬ ಮುಖ್ಯಮಂತ್ರಿಯ ಮಾತು ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದಂತೆ ಕಾಣ್ತಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಬಣದ ಸಚಿವರು, ಶಾಸಕರು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತುರ್ತು ಸಭೆ ನಡೆಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಶರನ್ನವರಾತ್ರಿ ಅದ್ಧೂರಿ ಆಚರಣೆ; ಗೌಳಿ ಸಮಾಜದಿಂದ ಅಂಬಾಭವಾನಿ ಮೆರವಣಿಗೆ
ಸಚಿವರಾದ ಬೈರತಿ ಸುರೇಶ್, ಸಂತೋಷ್ ಲಾಡ್ ನೇತೃತ್ವದಲ್ಲಿ ನಡೆದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ 15ಕ್ಕೂ ಹೆಚ್ಚು ಶಾಸಕರು ಸಿಎಂ ಸಿದ್ದರಾಮಯ್ಯ ಪರವಾಗಿ ಹೋರಾಟಕ್ಕೆ ತೀರ್ಮಾನಿಸಿದ್ದಾರೆ. ಜಾತಿಗಣತಿ ವರದಿ ಅಂಗೀಕಾರ ಮಾಡಿ, ಬಿಡುಗಡೆ ಮಾಡೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅ.9ರವರೆಗೆ ಅತ್ಯಧಿಕ ಮಳೆ – ಯೆಲ್ಲೋ ಅಲರ್ಟ್ ಘೋಷಣೆ
ಅತ್ತ, ತುಮಕೂರು ದಸರಾ ವೇದಿಕೆಯಲ್ಲಿ ಪರಮೇಶ್ವರ್ ಮುಂದಿನ ಸಿಎಂ ಆಗ್ಬೇಕು ಎಂಬ ಕೂಗು ಪರೋಕ್ಷವಾಗಿ ಕೇಳಿಬಂದಿದೆ. ಈ ಮಧ್ಯೆ, ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ, ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. 5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ ಅಂದ್ರು. ಐದು ವರ್ಷವೂ ಸಿದ್ದರಾಮಯ್ಯನವ್ರೇ ಸಿಎಂ ಎಂದು ಸಚಿವ ಜಮೀರ್ ಹೇಳಿದ್ರು.