ಚಿತ್ರರಂಗದಲ್ಲಿ ಬಯೋಪಿಕ್‍ಗಳ ಹಾವಳಿ ಜೋರಾಗಿದೆ. ಈಗಾಗಲೇ ಸಾಕಷ್ಟು ಸಾಧಕರ ಕಥೆ ಸಿನಿಮಾ ರೂಪದಲ್ಲಿ ಬಂದಿದೆ. ಎಂ.ಎಸ್ ಧೋನಿ, ಸಂಜಯ್ ದತ್ ಸೇರಿದಂತೆ ಹಲವರ ಕಥೆ ಸೂಪರ್ ಹಿಟ್ ಆಗಿದೆ. ಈಗ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಯಶೋಗಾಥೆಯನ್ನ ಸಿನಿಮಾ ರೂಪದಲ್ಲಿ ಬೆಳ್ಳಿತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ.
ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟ್ಸ್‌ಮೆನ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಅವರ ಸಾಧನೆಯ ಕಥೆಯನ್ನ ಇದೀಗ ‘ಆರ್‌ಆರ್‌ಆರ್’ (RRR) ಸೂಪರ್ ಸ್ಟಾರ್ ರಾಮ್ ಚರಣ್ (Ram Charan) ಹೇಳಲು ಬರುತ್ತಿದ್ದಾರೆ. ವಿರಾಟ್ ಪಾತ್ರದಲ್ಲಿ ಚರಣ್ ನಟಿಸಲಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಕ್ರೀಡೆ ಆಧರಿಸಿದ ಸಿನಿಮಾದಲ್ಲಿ ನಟಿಸಲು ಇಷ್ಟ ಎಂದು ರಾಮ್ ಚರಣ್ ಹೇಳಿದ್ದರು. ವಿರಾಟ್ ಕೊಹ್ಲಿ ಬಯೋಪಿಕ್ ಆಫರ್ ಬಂದರೆ ನಟಿಸಲು ಸಿದ್ಧ ಎಂದಿದ್ದರು. ಇದನ್ನೂ ಓದಿ:ಅಣ್ಣ ಚಿರು ಸಮಾಧಿ ಬಳಿ ನಿದ್ದೆ ಮಾಡಿದ ಧ್ರುವ ಸರ್ಜಾ
ಅದರಂತೆ ಬಾಲಿವುಡ್‍ನ (Bollywood) ಖ್ಯಾತ ಸಂಸ್ಥೆ ವಿರಾಟ್ ಕೊಹ್ಲಿ (Virat Kohli) ಬಯೋಪಿಕ್ (Biopic) ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರಾಮ್ ಚರಣ್ ಕೂಡ ನೋಡಲು ವಿರಾಟ್ ಅವರಂತೆ ಹೋಲುವ ಕಾರಣ ಅವರೇ ಸೂಕ್ತ ಎಂದೇನಿಸಿ ಸಿನಿಮಾ ಮಾಡುವ ಬಗ್ಗೆ ಮಾತುಕತೆ ಕೂಡ ನಡೆದಿದೆ ಎನ್ನಲಾಗುತ್ತಿದೆ.
ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಕೈಗೆತ್ತಿಕೊಂಡಿರುವ ರಾಮ್ ಚರಣ್, ಇದಾದ ಬಳಿಕ ವಿರಾಟ್ ಕೊಹ್ಲಿ ಬಯೋಪಿಕ್ ಕೈಗೆತ್ತಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ನವೆಂಬರ್ 5ಕ್ಕೆ ವಿರಾಟ್ ಹುಟ್ಟುಹಬ್ಬದಂದು ಅಧಿಕೃತ ಘೋಷಣೆ ಆಗುತ್ತದೆ ಎಂದು ಹೇಳಲಾಗುತ್ತಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]