ನವದೆಹಲಿ: ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ದಾಖಲೆ ಪರಿಶೀಲನೆ ವೇಳೆ ಸಂಸ್ಥೆಯು ತೆರಿಗೆ ಪಾವತಿಸದಿರುವುದು ಹಾಗೂ ಬಹಿರಂಗಪಡಿಸದ ಆದಾಯ ಹೊಂದಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಶುಕ್ರವಾರ ಹೇಳಿದೆ.
ಬಿಬಿಸಿ (BBC) ಹೆಸರನ್ನು ಉಲ್ಲೇಖಿಸದೆ ಹೇಳಿಕೆ ಬಿಡುಗಡೆ ಮಾಡಿದ ಸಿಬಿಡಿಟಿ, ಇಲಾಖೆ ಹಲವಾರು ಸಾಕ್ಷ್ಯಗಳನ್ನು ಕಲೆಹಾಕಿದೆ. ಡಿಜಿಟಲ್ ದಾಖಲೆಗಳು ಹಾಗೂ ಉದ್ಯೋಗಿಗಳ ಹೇಳಿಕೆಗಳನ್ನು ಪಡೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ವಿದೇಶಿ ಸಂಸ್ಥೆಗಳಿಂದ ಭಾರತದ ಶಾಖೆಗೆ ಬಂದಿರುವ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಯಾಗಿಲ್ಲ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತ ಈಗ ಕುಸಿಯುತ್ತಿದೆ: ಮೋದಿಯನ್ನು ಟೀಕಿಸಿದ ಜಾರ್ಜ್ ಸೊರಸ್ ಯಾರು?
Advertisement
Advertisement
ಬಿಬಿಸಿ ಸಿಬ್ಬಂದಿ ತನಿಖೆಗೆ ಸಹಕರಿಸುತ್ತಿಲ್ಲ. ಹಲವು ತಂತ್ರಗಳನ್ನು ಬಳಸಿ ತನಿಖೆ ವಿಳಂಬವಾಗುವಂತೆ ಮಾಡುತ್ತಿದ್ದಾರೆ. ಮಾಧ್ಯಮದ ಪ್ರಸಾರಕ್ಕೆ ಯಾವುದೇ ತೊಂದರೆಯಾಗದಂತೆ ಸಿಬ್ಬಂದಿ ವಿಚಾರಣೆ ಮಾಡುತ್ತಿರುವುದಾಗಿ ತಿಳಿಸಿದೆ.
Advertisement
2002ರಲ್ಲಿ ನಡೆದ ಗುಜರಾತ್ ಹಿಂಸಾಚಾರದ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಬಿಸಿ ಮೇಲೆ ಐಟಿ ಸಮೀಕ್ಷೆ (IT Survey) ನಡೆಸಿತ್ತು. ಅಧಿಕಾರಿಗಳು ಮೂರು ದಿನಗಳ ಕಾಲ ನಿರಂತರ ಸಮೀಕ್ಷೆ ಕಾರ್ಯ ನಡೆಸಿದ್ದರು.
Advertisement
ಬಿಬಿಸಿ ಮೇಲಿನ ಐಟಿ ದಾಳಿ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಮುಜುಗರ ತರುವಂತಹ ಸಾಕ್ಷ್ಯಾಚಿತ್ರ ಬಿಡುಗಡೆಗೊಳಿಸಿದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ವಿಪಕ್ಷಗಳು ದೂರಿದ್ದವು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k