ಹೈದರಾಬಾದ್: ದಕ್ಷಿಣ ಭಾರತದಲ್ಲಿ ಬಿಜೆಪಿಯ ಅತ್ಯಂತ ದೊಡ್ಡ ಮಿತ್ರಪಕ್ಷವಾಗಿರುವ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಎನ್‍ಡಿ ಮೈತ್ರಿಕೂಟದಿಂದ ಹೊರ ಬರಲು ಚಿಂತನೆ ನಡೆಸಿದ್ದು ಭಾನುವಾರ ನಿರ್ಧಾರ ಪ್ರಕಟವಾಗಲಿದೆ.
ಹಣಕಾಸು ಬಜೆಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡ, ಬಜೆಟ್ ನಲ್ಲಿ ನಮಗೆ ಏನು ಸಿಕ್ಕಿಲ್ಲ, ನಮ್ಮ ರಾಜ್ಯವನ್ನು ನಿರ್ಲಕ್ಷ್ಯಿಸಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
Advertisement
ಭಾನುವಾರ ಪಕ್ಷದ ಮುಖಂಡರ ಜೊತೆ ಮಹತ್ವದ ಸಭೆ ನಡೆಸಲಿದ್ದು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಎನ್‍ಡಿಎಗೆ ಬೆಂಬಲ ನೀಡಬೇಕೇ ಬೇಡವೇ ಎನ್ನುವುದರ ಬಗ್ಗೆ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.
Advertisement
ಈ ಹಿಂದೆ ಬಿಜೆಪಿ ನಾಯಕರು ಪೋಲಾವರಂ ಯೋಜನೆ ಮತ್ತು ಹೊಸ ರಾಜಧಾನಿ ಅಮರಾವತಿ ನಿರ್ಮಾಣ ಪೂರ್ಣಗೊಳ್ಳುವವರೆಗೆ ಆಂಧ್ರ ಪ್ರದೇಶಕ್ಕೆ ಕೇಂದ್ರದ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ವಿಶಾಖಪಟ್ಟಣವನ್ನು ಕೇಂದ್ರವಾಗಿಸಿ ಹೊಸ ರೈಲ್ವೆ ವಲಯ ಸ್ಥಾಪನೆಯಂತಹ ಭರವಸೆಗಳನ್ನು ನೀಡಿದ್ದರೂ ಇದು ಅನುಷ್ಠಾನಕ್ಕೆ ಬಾರದ ಹಿನ್ನೆಲೆಯಲ್ಲಿ ಚಂದ್ರ ಬಾಬು ನಾಯ್ಡು ಅಸಮಾಧಾನಗೊಂಡಿದ್ದಾರೆ.
Advertisement
We are going to declare war, have three options, 1 is to try and continue, 2 is our MPs resign and 3rd is breaking of alliance. Will decide in meeting with CM on Sunday: TG Venkatesh,TDP MP #UnionBudget2018 pic.twitter.com/XbbW9cz7z3
— ANI (@ANI) February 2, 2018
Advertisement
ರಾಜ್ಯದ ಬಿಜೆಪಿ ನಾಯಕರು ಟಿಡಿಪಿಯನ್ನು ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಚಂದ್ರ ಬಾಬು ನಾಯ್ಡು ಮೊದಲೇ ಮುನಿಸಿಕೊಂಡಿದ್ದರು. ಆದರೆ ಈಗ ಬಜೆಟ್ ನಲ್ಲಿ ವಿಶೇಷ ಅನುದಾನ ನೀಡದ ಹಿನ್ನೆಲೆಯಲ್ಲಿ ಈ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ.
ಕೆಲ ದಿನಗಳ ಹಿಂದೆ ಚಂದ್ರಬಾಬು ನಾಯ್ಡ, ಬಿಜೆಪಿಯವರು ಪದೇ ಪದೇ ಟೀಕೆ ಮಾಡುತ್ತಿದ್ದರೂ ನಾನು ನಮ್ಮ ಮುಖಂಡರಿಗೆ ತಿರುಗೇಟು ನೀಡದಂತೆ ತಡೆಯುತ್ತಿದ್ದೇನೆ. ಟಿಡಿಪಿ ಈಗಲೂ ಮಿತ್ರ ಧರ್ಮವನ್ನು ಪಾಲಿಸುತ್ತಿದ್ದರೂ ಸ್ಥಳೀಯ ಬಿಜೆಪಿ ನಾಯಕರು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕೇಂದ್ರದ ಬಿಜೆಪಿ ನಾಐಕರು ಸ್ಥಳೀಯ ನಾಯಕರ ಆರೋಪಗಳ ಬಗ್ಗೆ ಗಮನ ನೀಡುತ್ತಾರೆ ಎನ್ನುವ ಭರವಸೆಯನ್ನು ನಾನು ಹೊಂದಿದ್ದೇನೆ. ಒಂದು ವೇಳೆ ಬಿಜೆಪಿ ಮೈತ್ರಿ ಮುಂದುವರಿಸಲು ಬಯಸದಿದ್ದರೆ ಟಿಡಿಪಿ ತನ್ನದೇ ದಾರಿಯಲ್ಲಿ ಸಾಗಲಿದೆ ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಎನ್‍ಡಿಎ ಒಕ್ಕೂಟದಿಂದ ಹೊರಬಂದ ಶಿವಸೇನೆ
We are maintaining 'Mitra Dharma' with BJP but if it does not want to continue with the alliance, we will go on our own: N Chandrababu Naidu, Andhra Pradesh CM & TDP President (file pic) pic.twitter.com/wZv13mRbg5
— ANI (@ANI) January 27, 2018
We're very disappointed with the budget. One of the major issues was special status. Nothing was said by FM for Andhra Pradesh. If you take states like Telangana, Tamil Nadu they have huge budget but Andhra has deficit budget. People feel cheated: RM Naidu, TDP MP #Budget2018 pic.twitter.com/qsYu09sfZq
— ANI (@ANI) February 1, 2018