ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ದೆಹಲಿಯ ಶಹೀನ್ ಬಾಗ್‍ನಲ್ಲಿ ನಡೆದ ಸಿಎಎ ಹಾಗೂ ಎನ್‍ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂಬ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಹಿಂದಿನ ಅಸಲಿ ಸತ್ಯಾಂಶವೇ ಬೇರೆಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ,”ಸಿಎಎ, ಎನ್‍ಆರ್ ಸಿ ವಿರುದ್ಧದ ಪ್ರತಿಭಟನೆಗೆ ಮತ್ತೊಂದು ಸಿಂಹ ಎಂಟ್ರಿಯಾಗಿದೆ. ಆದರ ಹೆಸರು ಇರ್ಫಾನ್ ಪಠಾಣ್” ಎಂಬ ಮಾಹಿತಿ ಇರುವುದನ್ನು ಕಾಣಬಹುದಾಗಿದೆ. ಇರ್ಫಾನ್ ತೆರೆದ ವಾಹನದಲ್ಲಿ ಅಭಿಮಾನಿಗಳತ್ತ ಕೈಬೀಸುತ್ತಾ ಘಟನಾ ಸ್ಥಳಕ್ಕೆ ಆಗಮಿಸುತ್ತಾರೆ. ಕೇವಲ 17 ಸೆಕೆಂಡ್ ಇರುವ ಈ ವಿಡಿಯೋವನ್ನು ‘ಲ್ಯಾಬ್ ಅಜಾದ್ ಹೈ ತೇರೆ’ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಜ.24ರಂದು ಪೋಸ್ಟ್ ಮಾಡಲಾಗಿದೆ. ಅಲ್ಲದೇ ವಿಡಿಯೋದಲ್ಲಿ ಲೊಕೇಶನ್ ಟ್ಯಾಗ್ ಮಾಡಿ ಶಹೀನ್ ಬಾಗ್ ಎಂದು ನೀಡಿದ್ದಾರೆ.
Advertisement
Some beautiful moments with ex-India cricketer par excellence Irfan Pathan for Kamarhati Premier Knock-Out cricket tournament organised by Kamarhati Development Society. Truly a moment to cherish to meet the man who is grace and humbleness personified. pic.twitter.com/PCrGxyH1no
— Citizen Madan Mitra| নাগরিক মদন মিত্র (@madanmitraoff) January 14, 2020
Advertisement
ಇದುವರೆಗೂ ಈ ವಿಡಿಯೋ 80 ಸಾವಿರ ವ್ಯೂ, 300 ಶೇರ್, 666 ಲೈಕ್ ಪಡೆದುಕೊಂಡಿದೆ. ಆದರೆ ವಿಡಿಯೋದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಮದನ್ ಮಿಶ್ರಾರನ್ನು ಕಾಣಬಹುದಾಗಿದೆ. ಈ ಕುರಿತು ಇರ್ಫಾನ್ ಫಠಾಣ್ ಅವರ ಫೇಸ್‍ಬುಕ್, ಇನ್‍ಸ್ಟಾ, ಟಿಕ್‍ಟಾಕ್ ಅಧಿಕೃತ ಖಾತೆ ಪರಿಶೀಲನೆ ನಡೆಸಿದರೆ ಜನವರಿ 14ರಂದು ಪಠಾಣ್ ಈ ವಿಡಿಯೋ ಶೇರ್ ಮಾಡಿರುವುದು ತಿಳಿದು ಬರುತ್ತದೆ.
Advertisement
ಜ.14 ರಂದು ಮದನ್ ಮಿಶ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇರ್ಫಾನ್‍ರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇರ್ಫಾನ್ ಪಠಾಣ್ ಪೋಸ್ಟ್ ಮಾಡಿದ್ದ ವಿಡಿಯೋ ಹಾಗೂ ಮದಾನ್ ಅವರ ಟ್ವೀಟ್ ಪ್ರಕಾರ ಜನವರಿ 14 ರಂದು ಪಶ್ಚಿಮ ಬಂಗಾಳದ ಕಮರ್ಹಟಿ ಪ್ರದೇಶದಲ್ಲಿ ನಡೆದ ಪ್ರೀಮಿಯರ್ ನಾಕೌಟ್ ಕ್ರಿಕೆಟ್ ಟೂರ್ನಿಗೆ ಇರ್ಫಾನ್ ಆಗಮಿಸಿದ್ದರು. ಆ ಸಂದರ್ಭದಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.