ನವದೆಹಲಿ: ಐಆರ್ ಸಿಟಿಸಿ ನಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರ ಜೇಬಿಗೆ ಇನ್ನ್ಮುಂದೆ ಕತ್ತರಿ ಬೀಳಲಿದೆ.
ಸೆಪ್ಟೆಂಬರ್ ನಿಂದ ರೈಲ್ವೇ ಟಿಕೆಟ್ ಮೇಲೆ ಸೇವಾ ಶುಲ್ಕ ಅನ್ವಯವಾಗಲಿದೆ. ಆಗಸ್ಟ್ 30ರಂದು ಭಾರತೀಯ ರೈಲ್ವೇ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಸೆಪ್ಟೆಂಬರ್ ನಿಂದಲೇ ಈ ಆದೇಶ ಅನ್ವಯವಾಗಲಿದೆ. ಎಸಿ ರಹಿತ ಇ-ಟಿಕೆಟ್ ಮೇಲೆ 15 ರೂ ಮತ್ತು ಎಸಿ ಸಹಿತ ಟಿಕೆಟ್ ಮೇಲೆ 30 ರೂ. ಸೇವಾ ಶುಲ್ಕವನ್ನು ಐಆರ್‍ಸಿಟಿಸಿ ವಿಧಿಸಲಿದೆ. ಲಗೇಜ್ ಗಳಿಗೆ ಪ್ರತ್ಯೇಕ ಟಿಕೆಟ್ ಪಡೆದುಕೊಳ್ಳಬೇಕು.
Advertisement
Advertisement
ಮೂರು ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಡಿಜಿಟಲ್ ಪೇಮೆಂಟ್ ಉತ್ತೇಜನಕ್ಕಾಗಿ ಸೇವಾ ಶುಲ್ಕವನ್ನು ರದ್ದುಗೊಳಿಸಿತ್ತು. ಈ ಮೊದಲು ಐಆರ್ ಸಿಟಿಸಿ ಎಸಿ ರಹಿತ ಶ್ರೇಣಿಯ ಪ್ರತಿ ಟಿಕೆಟ್ ಮೇಲೆ 20 ರೂ. ಮತ್ತು ಎಸಿ ಸಹಿತ ಶ್ರೇಣಿಯ ಪ್ರತಿ ಟಿಕೆಟ್ ಮೇಲೆ 40 ರೂ. ಸೇವಾ ಶುಲ್ಕವನ್ನು ಪಡೆಯುತ್ತಿತ್ತು.
Advertisement
Advertisement
ಸೆಪ್ಟೆಂಬರ್ ಆರಂಭದಿಂದ ಐಆರ್ ಸಿಟಿಸಿ ಮೊದಲಿನಂತೆ ಸದ್ಯ ನಿಗದಿಯಾಗಿರುವ ಸೇವಾ ಶುಲ್ಕವನ್ನು ಪಡೆಯಬಹುದು ಎಂದು ರೈಲ್ವೇ ಬೋರ್ಡ್ ತಿಳಿಸಿದೆ. ಸೇವಾ ಶುಲ್ಕ ರದ್ದುಗೊಳಿಸಿದ ಪರಿಣಾಮ 2016-17ರ ಆರ್ಥಿಕ ವರ್ಷದಲ್ಲಿ ಶೇ.26ರಷ್ಟು ಆದಾಯ ಕುಸಿತಗೊಂಡಿತ್ತು.