ಬಾಗ್ದಾದ್: ಇರಾಕ್ ಮಹಿಳೆಯೊಬ್ಬರು ಏಳು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆರು ಹೆಣ್ಣು ಮತ್ತು ಓರ್ವ ಪುತ್ರನಿಗೆ ಮಹಿಳೆ ಜನ್ಮ ನೀಡಿದ್ದು, ಶಿಶುಗಳೆಲ್ಲಾ ಆರೋಗ್ಯವಾಗಿವೆ ಎಂದು ವರದಿಯಾಗಿದೆ. ಇರಾಕ್ ನಲ್ಲಿ ಏಳು ಮಕ್ಕಳಿಗೆ ಜನ್ಮ ನೀಡಿದ ಮೊದಲ ಮಹಾತಾಯಿ ಎಂದು ಕರೆಸಿಕೊಂಡಿದ್ದಾರೆ.
ಪಶ್ಮಿಮ ಇರಾಕ್ ನ ದಿಯಾಲಿ ಪ್ರಾಂತ್ಯದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಜಗತ್ತಿನಾದ್ಯಂತ ವೈರಲ್ ಆಗಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ವಕ್ತಾರ ಫಿರಾಸ್ ಅಲಿ ಲಿಝ್ವಿ, 25 ವರ್ಷದ ಮಹಿಳೆಗೆ ಸಹಜ ಹೆರಿಗೆಯಾಗಿದ್ದು, 7 ಮಕ್ಕಳಿಗೆ ಏಕಕಾಲದಲ್ಲಿ ತಾಯಿಯಾಗಿದ್ದಾರೆ. ತಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
Advertisement
ಏಕಕಾಲದಲ್ಲಿ ಏಳು ಮಕ್ಕಳ ತಂದೆಯಾಗಿದ್ದಕ್ಕೆ ಖುಷಿಯಾಗಿದೆ. ನಾನು ಮತ್ತು ಪತ್ನಿ ಇದು ನಮ್ಮ ಕೊನೆಯ ಮಗು ಅಂತಾ ನಿರ್ಧರಿಸಿದ್ದೇವು. ಈ ಏಳು ಮಕ್ಕಳು ಸೇರಿ ನಮಗೆ 10 ಮಕ್ಕಳಾದವು ಎಂದು ತಂದೆ ಯೂಸುಫ್ ಪಾದಲ್ ಸಂತಸ ವ್ಯಕ್ತಪಡಿಸುತ್ತಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv