– ಕೊಲ್ಕತ್ತಾ ಏರ್‌ಪೋರ್ಟ್‌ನಲ್ಲಿ ವಿಮಾನ ತುರ್ತು ಭೂಸ್ಪರ್ಶ
ಕೋಲ್ಕತ್ತಾ: ಇರಾಕ್‌ನ (Iraq) ಬಾಗ್ದಾದ್‍ನಿಂದ ಚೀನಾದ (China) ಗುವಾಂಗ್‍ಝೌಗೆ ತೆರಳುತ್ತಿದ್ದ ಇರಾಕಿ ಏರ್‌ವೇಸ್ ವಿಮಾನದಲ್ಲಿ 16 ವರ್ಷದ ಬಾಲಕಿಯೊಬ್ಬಳು ಕುಸಿದುಬಿದ್ದ ಮೃತಪಟ್ಟ ಘಟನೆ ನಡೆದಿದೆ.
Advertisement
ವಿಮಾನದಲ್ಲಿದ್ದ ಬಾಲಕಿ ಹಠಾತ್ ಅಸ್ವಸ್ಥಗೊಂಡಿದ್ದಾಳೆ. ಬಳಿಕ ಬಾಲಕಿ ಕುಸಿದು ಬಿದ್ದಿದ್ದಾಳೆ. ಇದರಿಂದಾಗಿ ವಿಮಾನನ್ನು ತಕ್ಷಣ ಕೋಲ್ಕತ್ತಾದ (Kolkata) ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತುರ್ತು ಭೂಸ್ಪರ್ಶ ಮಾಡಲಾಗಿದೆ.
Advertisement
ಬಳಿಕ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ ಬಾಲಕಿಯನ್ನು ಪರೀಕ್ಷಿಸಿದಾಗ ನಾಡಿಮಿಡಿತ ಹಾಗೂ ಹೃದಯ ಬಡಿತ ಕಂಡು ಬರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಹತ್ತಿರದ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ವೇಳೆ ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ರದ್ದು, ಒಪಿಎಸ್ ಜಾರಿ: ನಾಸಿರ್ ಹುಸೇನ್
Advertisement
Advertisement
ವೈದ್ಯರು ನೀಡಿದ ಮಾಹಿತಿಯ ಆಧಾರದ ಮೇಲೆ ಬಾಗುಯಾಟಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬಾಲಕಿ ಇರಾಕ್‍ನ ಬಾಗ್ದಾದ್ ಜಿಲ್ಲೆಯ ಸರ್ ಚಿನಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದಳು. ಬಾಲಕಿಯೊಂದಿಗೆ ಪ್ರಯಾಣಿಸುತ್ತಿದ್ದ ಆಕೆಯ ಸಂಬಂಧಿಕರಿಗೆ ಇಂಗ್ಲಿಷ್‍ನಲ್ಲಿ ಮಾತನಾಡಲು ಸಾಧ್ಯವಾಗದ ಕಾರಣ ಅವರೊಂದಿಗೆ ಸಂವಹನ ನಡೆಸುವುದು ಕಷ್ಟಕರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಇರಾಕಿನ ಬಾಲಕಿಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೆಹಲಿಯಲ್ಲಿರುವ ಇರಾಕ್ ರಾಯಭಾರ ಕಚೇರಿಯನ್ನೂ ಪೊಲೀಸರು ಸಂಪರ್ಕಿಸಲಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ; ಮಗನಿಗಾಗಿ ಆಟಿಕೆ ಖರೀದಿಸಿದ್ದ ಮೃತ ಅರ್ಜುನ್