– ಹೋಟೆಲ್‌ಗಳ ಆನ್‌ಲೈನ್ ಫುಡ್ ಪಾರ್ಸೆಲ್ ಸೇವೆ ಇಳಿಕೆ
– 2 ವಾರಗಳಲ್ಲಿ ಶೇ.40 ಆರ್ಡರ್ ಖೋತಾ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಹೋಟೆಲ್ ಉದ್ಯಮವನ್ನೇ ನೆಲಕಚ್ಚುವಂತೆ ಮಾಡಿದೆ. ಇದರ ಎಫೆಕ್ಟ್ ಕೇವಲ ಹೋಟೆಲ್ ಮಾಲೀಕರಿಗೆ ಮಾತ್ರವಲ್ಲ, ಇದನ್ನೇ ನಂಬಿಕೊಂಡಿದ್ದ ಸಾವಿರಾರು ಪುಡ್ ಡೆಲಿವರಿ ಬಾಯ್ಸ್ (Food Delivery Boys) ಮೇಲೂ ತಟ್ಟಿದೆ.
ಇರಾನ್-ಇಸ್ರೇಲ್ ಯುದ್ಧ (Iran-Israel War) ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಯುದ್ಧದಿಂದ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಪರಿಣಾಮ ಬೀರಿದೆ. ಅದರಂತೆ ರಾಜ್ಯದಲ್ಲಿ ಇಂಧನ ಬೆಲೆ ಏರಿಕೆ, ಹೋಟೆಲ್‌ಗಳಿಗೆ ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗಿದೆ. ಇದರಿಂದಾಗಿ ಕೇವಲ ಹೋಟೆಲ್ ಮಾಲೀಕರು ಮಾತ್ರವಲ್ಲ, ಹೋಟೆಲ್ ಉದ್ಯಮವನ್ನೇ ನೆಚ್ಚಿಕೊಂಡಿದ್ದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಇದನ್ನೂ ಓದಿ: ಈಗ 41 ದೇಶಗಳಿಂದ ಇಂಧನ ಅಮದು, ಗಲ್ಫ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮಗೆ ಮುಖ್ಯ: ಮೋದಿ
ಕಳೆದ ಎರಡು ವಾರಗಳಿಂದ ಗ್ಯಾಸ್ ಅಭಾವ ಉಂಟಾದ ಕಾರಣ ಹೋಟೆಲ್‌ಗಳಲ್ಲಿ ಎಲ್ಲಾ ಮೆನುಗಳು ತಯಾರಾಗುತ್ತಿಲ್ಲ. ಜೊತೆಗೆ ಕೆಲ ಹೋಟೆಲ್‌ಗಳಲ್ಲಿ ಆನ್‌ಲೈನ್ ಫುಡ್ ಪಾರ್ಸಲ್ ಸೇವೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಗ್ರಾಹಕರ ವಿವಿಧ ಆ್ಯಪ್ ಆಧಾರಿತವಾಗಿ ಆನ್‌ಲೈನ್ ಫುಡ್ ಆರ್ಡರ್‌ಗಳು ಕಡಿತವಾಗಿವೆ. ಒಂದು ಅಂದಾಜಿನಂತೆ ಕಳೆದ 15 ದಿನಗಳಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಬಾಯ್‌ಗಳಿಗೆ ಶೇ.40 ರಷ್ಟು ಆರ್ಡರ್ಸ್ ಕಡಿಮೆಯಾಗಿವೆ. ಸರ್ಕಾರವೇ ಪರಿಹಾರ ನೀಡಬೇಕು ಅಂತಾ ಕರ್ನಾಟಕ ಆ್ಯಪ್ ಆಧಾರಿತ ವರ್ಕರ್ಸ್ ಯುನಿಯನ್ ಹಾಗೂ ಗಿಗ್ ವರ್ಕರ್ ಯುನಿಯನ್ ತಿಳಿಸಿದೆ.
ಇಡೀ ರಾಜ್ಯದಲ್ಲಿ ಪುಡ್ ಡೆಲಿವರಿ ಬಾಯ್ಸ್ ಸೇರಿದಂತೆ ಒಟ್ಟು ನಾಲ್ಕು ಲಕ್ಷ ಗಿಗ್ ವರ್ಕಸ್‌ಗಳಿದ್ದಾರೆ. ಈ ಯುದ್ಧದಿಂದ ಪೆಟ್ರೋಲ್, ಡೀಸೆಲ್ ಬೆಲೆ ಸಹ ಹೆಚ್ಚಾಗಿದೆ. ಒಂದೆಡೆ ಬೆಲೆ ಏರಿಕೆ ಹೊಡೆತವಾದರೆ, ಮತ್ತೊಂದೆಡೆ ಒಂದು ದಿನಕ್ಕೆ 30-35 ಆರ್ಡರ್ ಮಾಡುತ್ತಿದ್ದ ಡೆಲಿವರಿ ಬಾಯ್ಸ್ ಇದೀಗ 12 ತಾಸು ಕಾದರೂ 20 ಆರ್ಡರ್ ಮಾಡಲು ಹೆಣಗಾಡುವಂತಾಗಿದೆ. ಒಂದು ದಿನಕ್ಕೆ ಒಂದು ಸಾವಿರ ರೂಪಾಯಿ ಸಹ ಸಿಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಇದನ್ನೂ ಓದಿ: LPG ಬಿಕ್ಕಟ್ಟು: 14 ಕೆಜಿ ಬದಲಿಗೆ 10 ಕೆಜಿ ಎಲ್‌ಪಿಜಿ ಪೂರೈಕೆಗೆ ಕೇಂದ್ರ ಚಿಂತನೆ

