ಟೆಹ್ರಾನ್: ಅಮೆರಿಕ (USA) ತನ್ನ ಸೇತುವೆಯನ್ನು ಗುರಿಯಾಗಿಸಿ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ತಾನು ಮಧ್ಯಪ್ರಾಚ್ಯ ದೇಶಗಳಲ್ಲಿರುವ ಸೇತುವೆಗಳ (Bridge) ಮೇಲೆ ದಾಳಿ ನಡೆಸುವುದಾಗಿ ಇರಾನ್ (Iran) ಎಚ್ಚರಿಕೆ ನೀಡಿದೆ.
ಅಮೆರಿಕ ವಾಯುಪಡೆ ಇರಾನ್ನ ಅತ್ಯಂತ ಎತ್ತರದ ಮತ್ತು ಪ್ರಮುಖ ಬಿ1 (B1) ಹೆದ್ದಾರಿ ಸೇತುವೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಇದಕ್ಕೆ ಸಿಟ್ಟಾಗಿರುವ ಇರಾನ್ ಈಗ ನೆರೆಯ ರಾಷ್ಟ್ರಗಳಾದ ಕುವೈತ್, ಯುಎಇ, ಸೌದಿ ಅರೇಬಿಯಾ ಮತ್ತು ಜೋರ್ಡಾನ್ನಲ್ಲಿರುವ ಎಂಟು ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿಕೊಂಡು ಹಿಟ್ ಲಿಸ್ಟ್ ಬಿಡುಗಡೆ ಮಾಡಿದೆ.
ಹಿಟ್ ಲಿಸ್ಟ್ನಲ್ಲಿರುವ ಸೇತುವೆಗಳು ಯಾವುದು?
ಕುವೈತ್: ಶೇಖ್ ಜಾಬರ್ ಅಲ್-ಅಹ್ಮದ್ ಅಲ್-ಸಬಾ ಸಮುದ್ರ ಸೇತುವೆ
ಯುಎಇ (ಅಬುಧಾಬಿ): ಶೇಖ್ ಜಾಯೆದ್ ಸೇತುವೆ , ಖಲೀಫಾ ಸೇತುವೆ, ಮತ್ತು ಅಲ್ ಮಕ್ತ ಸೇತುವೆ
ಸೌದಿ ಅರೇಬಿಯಾ ಮತ್ತು ಬಹ್ರೇನ್: ಇವೆರಡನ್ನೂ ಸಂಪರ್ಕಿಸುವ ಕಿಂಗ್ ಫಹದ್ ಕಾಸ್ವೇ
ಜೋರ್ಡಾನ್: ಕಿಂಗ್ ಹುಸೇನ್ ಸೇತುವೆ, ದಾಮಿಯಾ ಸೇತುವೆ ಮತ್ತು ಅಮ್ಮನ್ನಲ್ಲಿರುವ ಅಬ್ದೌನ್ ಸೇತುವೆ
ಈ ಸೇತುವೆಗಳು ಆಯಾ ದೇಶಗಳ ಆರ್ಥಿಕತೆ ಮತ್ತು ಸಾರಿಗೆಗೆ ಅತ್ಯಂತ ಪ್ರಮುಖವಾಗಿವೆ. ವಿಶೇಷವಾಗಿ ಕಿಂಗ್ ಫಹದ್ ಕಾಸ್ವೇ ಅಮೆರಿಕದ 5ನೇ ನೌಕಾಪಡೆಗೆ (US Fifth Fleet) ಪೂರೈಕೆ ಮಾರ್ಗವಾಗಿಯೂ ಬಳಕೆಯಾಗುತ್ತದೆ. ಇದನ್ನೂ ಓದಿ: ಯುದ್ಧದಿಂದ ಪಾಕಿಸ್ತಾನಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ – ಪೆಟ್ರೋಲ್ 458 ರೂ., ಡೀಸೆಲ್ 520 ರೂ.ಗಳಿಗೆ ಏರಿಕೆ

ಅಮೆರಿಕದಿಂದ ದಾಳಿ
ಅಮೆರಿಕ ವಾಯುಪಡೆ ಇರಾನ್ನ ಅತ್ಯಂತ ಎತ್ತರದ ಮತ್ತು ಪ್ರಮುಖ ಬಿ1 ಸೇತುವೆಯ ಮೇಲೆ ದಾಳಿ ನಡೆಸಿತ್ತು. ಈ ಸೇತುವೆಯು ಇರಾನ್ನ ರಾಜಧಾನಿ ಟೆಹ್ರಾನ್ ಮತ್ತು ಪಶ್ಚಿಮ ನಗರವಾದ ಕರಾಜ್ ಅನ್ನು ಸಂಪರ್ಕಿಸುತ್ತಿತ್ತು. ದಾಳಿಯಿಂದಾಗಿ ಸೇತುವೆಯು ಎರಡು ಭಾಗವಾಗಿ ತುಂಡಾಗಿದೆ. ಇದನ್ನೂ ಓದಿ: ಸೇನಾ ಮುಖ್ಯಸ್ಥನನ್ನೇ ಕಿತ್ತು ಹಾಕಿದ ಟ್ರಂಪ್ ಸರ್ಕಾರ – ರಾಜೀನಾಮೆಗೆ ಸೂಚನೆ
ಇರಾನ್ ಸರ್ಕಾರದ ಮಾಧ್ಯಮಗಳ ಪ್ರಕಾರ, ಈ ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇರಾನ್ನ ಮಿಲಿಟರಿ ಲಾಜಿಸ್ಟಿಕ್ಸ್ ಮತ್ತು ಸರಬರಾಜು ಮಾರ್ಗಗಳನ್ನು ಅಸ್ತವ್ಯಸ್ತಗೊಳಿಸುವ ತಂತ್ರದ ಭಾಗವಾಗಿ ಈ ಸೇತುವೆಯ ಮೇಲೆ ದಾಳಿ ನಡೆದಿತ್ತು.

