ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

Public TV
2 Min Read
Donald Trump 3

ವಾಷಿಂಗ್ಟನ್‌: ಇರಾನ್‌ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್‌ ದಾಳಿ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಇರಾನ್‌ ಪ್ಲ್ಯಾನ್‌ ಮಾಡಿದೆ. ದೇಶದಲ್ಲಿನ ಸಶಸ್ತ್ರ ಪಡೆಗಳು ಉಡಾವಣೆಗಾಗಿ ದೈತ್ಯ ಕ್ಷಿಪಣಿಗಳನ್ನು (Missiles) ಸಿದ್ಧಪಡಿಸಿದೆ ಎಂದು ವರದಿಗಳು ತಿಳಿಸಿವೆ.

donald trump

ಮೂಲಗಳ ಪ್ರಕಾರ, ಅಮೆರಿಕ ವಿರುದ್ಧ ಬೃಹತ್‌ ಮಟ್ಟದಲ್ಲಿ ವಾಯುದಾಳಿ ನಡೆಸಲು ಇರಾನ್‌ (Iran) ಪ್ಲ್ಯಾನ್‌ ಮಾಡಿದೆ. ಅದಕ್ಕಾಗಿ ಸಿದ್ಧಪಡಿಸಲಾದ ದೈತ್ಯ ಕ್ಷಿಪಣಿಗಳನ್ನು ತನ್ನ ದೇಶಾದ್ಯಂತ ಇರುವ ಭೂಗತ ನೆಲೆಗಳಲ್ಲಿ ಅಡಗಿಸಿಟ್ಟಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಅಮೆರಿಕ ಬಾಂಬ್‌ ದಾಳಿಗೆ (Bomb Attack) ಮುಂದಾದ್ರೆ, ಇರಾನ್‌ ಸಹ ಪ್ರತಿದಾಳಿ ನಡೆಸಲು ಸಿದ್ಧವಾಗಿದೆ ಎನ್ನುವ ಸಂದೇಶ ಈ ಮೂಲಕ ರವಾನೆಯಾಗಿದೆ. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

Iran used hypersonic Fattah missiles for the first time during its strikes on Israel
ಸಾಂದರ್ಭಿಕ ಚಿತ್ರ

ಟ್ರಂಪ್‌ ಹೇಳಿದ್ದೇನು?
ಇರಾನ್‌ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್‌ ದಾಳಿ ಮತ್ತು ಎರಡು ಪಟ್ಟು ಸುಂಕಗಳನ್ನು ವಿಧಿಸಲಾಗುವುದು. ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಯುತ್ತದೆ. ಅಲ್ಲದೇ 4 ವರ್ಷಗಳ ಹಿಂದೆ ಮಾಡಿದಂತೆ ನಾನು ಅವರ ಮೇಲೆ ಎರಡು ಪಟ್ಟು ಸುಂಕಗಳನ್ನು ವಿಧಿಸುವ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ – ಟ್ರಂಪ್‌ ಮತ್ತೆ ಹೊಸ ಬಾಂಬ್‌

2017-21ರ ಮೊದಲ ಅವಧಿಯಲ್ಲಿ ಟ್ರಂಪ್ ಅವರು ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಅದು ನಿರ್ಬಂಧಗಳ ಪರಿಹಾರಕ್ಕೆ ಬದಲಾಗಿ ಟೆಹ್ರಾನ್‌ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿತ್ತು. ಟ್ರಂಪ್ ಅಮೆರಿಕದ ನಿರ್ಬಂಧಗಳನ್ನು ಪುನಃ ಹೇರಿದರು. ಅಂದಿನಿಂದ ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ಒಪ್ಪಿದ ಮಿತಿಗಳನ್ನು ಮೀರಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ಟೆಹ್ರಾನ್ ಇಲ್ಲಿಯವರೆಗೆ ನಿರ್ಲಕ್ಷಿಸಿದೆ. ಇದನ್ನೂ ಓದಿ: ಅಮೆರಿಕ ಜೊತೆಗಿನ ಹಳೆಯ ಸಂಬಂಧಗಳು ಮುಗಿದಿವೆ – ಸುಂಕದ ಬರೆ ಬೆನ್ನಲ್ಲೇ ಕೆನಡಾ ಪ್ರಧಾನಿ ಹೇಳಿಕೆ

ಹೊಸ ಪರಮಾಣು ಒಪ್ಪಂದ ಮಾಡಿಕೊಳ್ಳುವಂತೆ ಟೆಹ್ರಾನ್‌ಗೆ ಒತ್ತಾಯಿಸಿ ಟ್ರಂಪ್ ಬರೆದ ಪತ್ರಕ್ಕೆ ಇರಾನ್, ಒಮಾನ್ ಮೂಲಕ ಪ್ರತಿಕ್ರಿಯೆ ಕಳುಹಿಸಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ತಿಳಿಸಿದ್ದಾರೆ. ಇದನ್ನೂ ಓದಿ: Modi Very Smart Man, ಶ್ರೇಷ್ಠ ಪ್ರಧಾನಿ – ಸುಂಕ ಘರ್ಷಣೆ ನಡುವೆ ಮೋದಿ ಗುಣಗಾನ ಮಾಡಿದ ಟ್ರಂಪ್‌

Share This Article