ಟೆಹ್ರಾನ್: ಅಮೆರಿಕ ಹಾಗೂ ಇಸ್ರೇಲ್ ದಾಳಿಯಲ್ಲಿ ಹತ್ಯೆಯಾದ ಇರಾನ್‌ನ (Iran Israel War) ಸರ್ವೋಚ್ಚ ನಾಯಕ ಅಯತೋಲ್ಲಾ ಖಮೇನಿ (Ayatollah Ali Khamenei) ಸ್ಥಾನಕ್ಕೆ ಅವರ ಮಗ ಮೊಜ್ತಬಾ ಖಮೇನಿ (Mojtaba Khamenei) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಇರಾನ್ ಅಧಿಕೃತವಾಗಿ ಘೊಷಿಸಿದೆ ಎಂದು ವರದಿಯಾಗಿದೆ.
ಅವರ ಹೊಸ ಸ್ಥಾನವು ಇಸ್ಲಾಮಿಕ್ ಗಣರಾಜ್ಯದಲ್ಲಿ ಎಲ್ಲಾ ವಿಷಯಗಳಲ್ಲೂ ಅಧಿಕಾರವನ್ನು ನೀಡುತ್ತದೆ. ಇರಾನ್ ಆಯ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಯಾಕೆಂದರೆ, ನೂತನ ನಾಯಕ ಅಮೆರಿಕದ ಪರ ಅಭಿಪ್ರಾಯ ಹೊಂದಿರಬೇಕು ಎಂದು ಅವರು ಘೋಷಿಸಿದ್ದರು. ಆದರೆ ಅವರ ನಿರೀಕ್ಷೆ ಈಗ ಹುಸಿಯಾಗಿದೆ. ಇದನ್ನೂ ಓದಿ: 9ಕ್ಕೆ ಹಿಜಾಬ್, 13ಕ್ಕೆ ಮದುವೆ – ಖಮೇನಿ ಆಡಳಿತದಲ್ಲಿ ಇರಾನ್ ಮಹಿಳೆಯರ ಸ್ಥಿತಿ ಹೇಗಿತ್ತು?
ನೂತನ ನಾಯಕನ ಆಯ್ಕೆಗೆ ಇರಾನ್ ನಮ್ಮಿಂದ ಅನುಮೋದನೆ ಪಡೆಯದಿದ್ದರೆ ಅವರು ಹೆಚ್ಚು ಕಾಲ ಉಳಿಯುವುದಿಲ್ಲ. ಇಸ್ರೇಲ್ ಪಡೆ ಇರಾನ್‌ನ ಹೊಸ ಸರ್ವೋಚ್ಚ ನಾಯಕನನ್ನು ಗುರಿಯಾಗಿಸಿಕೊಳ್ಳುವುದಾಗಿ ಬೆದರಿಕೆ ಹಾಕಿತ್ತು.
ಇರಾನ್‌ನ ಆಡಳಿತದ ಸಿದ್ಧಾಂತವು ಆನುವಂಶಿಕ ಉತ್ತರಾಧಿಕಾರದ ತತ್ವವನ್ನು ತಿರಸ್ಕರಿಸಿದೆ. ಆದರೂ ಸೇನೆ ಮತ್ತು ಅವರ ಮೃತ ತಂದೆಯ ಪ್ರಬಲ ಅನುಯಾಯಿಗಳು ಇನ್ನೂ ಕಚೇರಿಯಲ್ಲಿ ಇದ್ದಾರೆ. ಇದೇ ಕಾರಣಕ್ಕೆ ಮೊಜ್ತಬಾ ಅವರ ಆಯ್ಕೆಯಾಗಿದೆ.
ಮೊಜ್ತಬಾ ಖಮೇನಿ ಯಾರು?
ಮೊಜ್ತಬಾ 1969 ರಲ್ಲಿ ಇರಾನ್‌ನ ಶಿಯಾ ನಗರವಾದ ಮಶ್ಹಾದ್‌ನಲ್ಲಿ ಜನಿಸಿದರು. ಇರಾನ್‌ನ ಶಿಯಾ ಶಾಸ್ತ್ರದ ಕಲಿಕೆಯ ಕೇಂದ್ರವಾದ ಕೋಮ್‌ನಲ್ಲಿ ಸಂಪ್ರದಾಯವಾದಿಗಳ ಅಡಿಯಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆದರು. ಯುವಕನಾಗಿದ್ದಾಗ, ಅವರು ಇರಾನ್-ಇರಾಕ್ ಯುದ್ಧದಲ್ಲಿ ಸೇವೆ ಸಲ್ಲಿಸಿದರು.
ಇಸ್ಲಾಮಿಕ್ ಗಣರಾಜ್ಯದ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿರಲಿಲ್ಲ. ಆಗಾಗಾ ರ‍್ಯಾಲಿಗಳಲ್ಲಿ ಕಾಣಿಸಿಕೊಂಡಿದ್ದರೂ, ಸಾರ್ವಜನಿಕವಾಗಿ ಕಡಿಮೆ ಮಾತನಾಡಿದ್ದಾರೆ.
ಇಸ್ಲಾಮಿಕ್ ಗಣರಾಜ್ಯದ ಕಟ್ಟುನಿಟ್ಟಾದ ಡ್ರೆಸ್ ಕೋಡ್‌ಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯುವತಿಯೊಬ್ಬಳ ಕಸ್ಟಡಿ ಸಾವಿನ ನಂತರ ಇರಾನ್‌ನಲ್ಲಿ ಉಂಟಾದ ಅಶಾಂತಿಯ ಸಂದರ್ಭದಲ್ಲಿ ಮೊಜ್ತಬಾ ಅವರನ್ನು ಪ್ರತಿಭಟನಾಕಾರರು ಟೀಕಿಸಿದ್ದರು. ಇದನ್ನೂ ಓದಿ: ಇರಾನ್‌ಗೆ ಬಿಗ್ ಶಾಕ್ ಕೊಟ್ಟ ಅಮೆರಿಕ-ಇಸ್ರೇಲ್; ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ದಾಳಿ

