ಬೆಂಗಳೂರು/ಬೆಳಗಾವಿ: ಮಧ್ಯಪ್ರಾಚ್ಯ ಯುದ್ಧದಿಂದ ತೈಲ ಬಿಕ್ಕಟ್ಟು ಆತಂಕ ಎದುರಾಗಿದೆ. ಹೀಗಾಗಲೇ ಗ್ಯಾಸ್ ಸಿಲಿಂಡರ್ ಅಭಾವ ಎದುರಿಸಿರೋ ರಾಜ್ಯದ ಜನ ಇದೀಗ ಮತ್ತೊಂದು ಆತಂಕಕ್ಕೆ ಒಳಗಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತೈಲ ಅಭಾವ ವದಂತಿ ಹಿನ್ನೆಲೆ ಆತಂಕದಲ್ಲಿ ಜನ ಪೆಟ್ರೋಲ್, ಡೀಸೆಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ. 4-5 ದಿನಗಳ ಕಾಲ ಪೆಟ್ರೋಲ್ ಸಿಗೊದಿಲ್ಲ ಎಂಬ ವದಂತಿ ನಂಬಿ ಆತಂಕಕ್ಕೆ ಒಳಗಾದ ಜನ ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದಿದ್ರು. ರಾಜ್ಯದ ಬಹುತೇಕ ಕಡೆ ವಾಟರ್ ಕ್ಯಾನ್, ಡ್ರಮ್ ಹಿಡಿದು ಬಂಕ್‌ಗಳಿಗೆ ಮುಗಿ ಬೀಳ್ತಿದ್ದಾರೆ. ಎಷ್ಟರ ಮಟ್ಟಿಗೆ ಡೀಸೆಲ್ ಖರೀದಿಸುತ್ತಿದ್ದಾರೆ ಅಂದ್ರೆ 220 ಲೀಟರ್ ಡ್ರಮ್‌ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ.

ಬೆಳಗಾವಿ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳು ಫುಲ್ ರಷ್ ಆದ ದೃಶ್ಯ ಕಂಡುಬಂದ್ವು. ನಾಲ್ಕೈದು ದಿನಗಳ ಕಾಲ ಪೆಟ್ರೋಲ್ ಸಿಗೋದಿಲ್ಲ ಎಂಬ ವದಂತಿ ನಂಬಿ ಆತಂಕಕ್ಕೆ ಒಳಗಾದ ಜನ ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದಿದ್ರು. ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್ ತುಂಬಿಸಿಕೊಳ್ತಿದ್ರು. ಗ್ರಾಹಕರ ಮುಗಿ ನೋಡಿ ಪೆಟ್ರೋಲ್ ಬಂಕ್ ಸಿಬ್ಬಂದಿ ಕಕ್ಕಾಬಿಕ್ಕಿ ಆಗಿದ್ರು. ಇದನ್ನೂ ಓದಿ: ಅಮೆರಿಕ ವಿನಾಯ್ತಿ ಬೆನ್ನಲ್ಲೇ ಇರಾನ್‌ನಿಂದ 50 ಲಕ್ಷ ಬ್ಯಾರಲ್ ಕಚ್ಚಾ ತೈಲ ಖರೀದಿಸಿದ ರಿಲಯನ್ಸ್

ಚಿಕ್ಕೋಡಿಯ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಜನವೋ ಜನ ಕಂಡುಬಂದ್ರು. ಜನರ ಕ್ರೌಡ್ ಕಂಡು ಪರಿಸ್ಥಿತಿ ನಿಯಂತ್ರಣಕ್ಕೆ ಬಂಕ್ ಸಿಬ್ಬಂದಿ ಪರದಾಡಿದ್ರು. ಬೆಳಗಾವಿಯಲ್ಲಿ ಪೆಟ್ರೋಲ್‌ಗಾಗಿ ಯುವಕರು ಹೊಡೆದಾಡಿಕೊಂಡಿದ್ದಾರೆ. ಬೆಳಗಾವಿ ನಗರದ ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ರು. ಈ ವೇಳೆ ಪೆಟ್ರೋಲ್ ಹಾಕಿಸಿಕೊಳ್ಳುವ ವಿಚಾರಕ್ಕೆ ಗಲಾಟೆ ಆಗಿದೆ. ಪೆಟ್ರೋಲ್‌ಗಾಗಿ ಯುವಕರು & ವ್ಯಕ್ತಿಯ ನಡುವೆ ಹೊಡೆದಾಟ ಆಗಿದೆ.
ರಾಯಚೂರು ಜಿಲ್ಲೆಯ ಕಲ್ಮಲಾ, ಸಿರವಾರ ಸೇರಿ ಗ್ರಾಮೀಣ ಭಾಗದ ಜನ ಪೆಟ್ರೋಲ್ ಸಿಗಲ್ಲ ಎಂಬ ವದಂತಿಗೆ ಆತಂಕಕ್ಕೆ ಒಳಗಾಗಿದ್ದಾರೆ. ಪೆಟ್ರೋಲ್, ಡೀಸೆಲ್‌ಗಾಗಿ ಪೆಟ್ರೋಲ್ ಬಂಕ್ ಮುಂದೆ ಮಧ್ಯರಾತ್ರಿಯೇ ಕ್ಯೂ ನಿಂತಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಟ್ರಂಪ್ ಕಾಲ್ – ಮಧ್ಯಪ್ರಾಚ್ಯ, ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನ ಬಗ್ಗೆ ಮಹತ್ವದ ಮಾತುಕತೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಪೆಟ್ರೋಲ್ ಕಳ್ಳತನ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ರಾತ್ರಿ ವೇಳೆ ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳ ಬಳಿಗೆ ಬಂದು ಪೆಟ್ರೋಲ್ ಕಳ್ಳತನ ಮಾಡುತ್ತಿದ್ದಾರೆ. ಪೆಟ್ರೋಲ್ ಅಭಾವ ಆತಂಕ ಮಧ್ಯೆ ಕಿಡಿಗೇಡಿಗಳ ಕೃತ್ಯ ಜನರ ನಿದ್ದೆಗೆಡಿಸಿದೆ. ಇನ್ನೂ, ಬೆಳಗಾವಿಯಲ್ಲಿ ಪೆಟ್ರೋಲ್ ಸಮಸ್ಯೆ ಇಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಪೆಟ್ರೋಲ್, ಡೀಸೆಲ್ ಇದೆ. ಯಾರೂ ಪ್ಯಾನಿಕ್ ಆಗಬೇಡಿ ಅಂತ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಮನವಿ ಮಾಡಿಕೊಂಡಿದ್ದಾರೆ.

