ದುಬೈ: ಯುಎಇಯಲ್ಲಿ ನಡೆಯುತ್ತಿರುವ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಅನುಭವಿ ಆಟಗಾರರನ್ನು ಹಿಂದಿಕ್ಕಿ ಯುವ ಆಟಗಾರರು ಮಿಂಚುಹರಿಸುತ್ತಿದ್ದಾರೆ.
ಐಪಿಎಲ್ ಈಗಾಗಲೇ ಸಾಕಷ್ಟು ಆಟಗಾರರು ಉದಯಿಸಿರುವ ವೇದಿಕೆಯಾಗಿದೆ. ಯುವ ಆಟಗಾರರು ಐಪಿಎಲ್‍ನಲ್ಲಿ ಮಿಂಚಿ ರಾಷ್ಟ್ರೀಯ ತಂಡಕ್ಕೆ ಸೇರಲು ಇರುವಂತಹ ಒಂದು ಟೂರ್ನಿ. ಇಲ್ಲಿ ರನ್ ಹೊಳೆ ಹರಿಸಿದರೆ ತುಂಬಾ ಸುಲಭವಾಗಿ ಟೀಂ ಇಂಡಿಯಾಗೆ ಎಂಟ್ರಿ ಕೊಡಬಹುದು. ಹಾಗಾಗಿ ಐಪಿಎಲ್‍ನಲ್ಲಿ ಆಟಗಾರರು ಅಬ್ಬರಿಸಲು ಹಾತೊರೆಯುತ್ತಾರೆ. 14ನೇ ಆವೃತ್ತಿಯ ಐಪಿಎಲ್‍ನ ಸೆಕೆಂಡ್ ಇನ್ನಿಂಗ್ಸ್‌ನಲ್ಲೂ ಕೂಡ ಯುವ ಆಟಗಾರರು ಬ್ಯಾಟಿಂಗ್‍ನಲ್ಲಿ ಮಿಂಚುತ್ತಿದ್ದಾರೆ. ಈಗಾಗಲೇ ನಡೆದಿರುವ ಕೆಲ ಪಂದ್ಯಗಳನ್ನು ಗಮನಿಸಿದಾಗ ಯುವ ಆಟಗಾರರು ಅನುಭವಿ ಆಟಗಾರಿಂದ ಹೆಚ್ಚು ರನ್ ಬಾರಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 10K ಕಿಂಗ್
ಇದೀಗ ಐಪಿಎಲ್‍ನಲ್ಲಿ ಬ್ಯಾಟಿಂಗ್‍ನಲ್ಲಿ ರನ್ ಚಚ್ಚಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಯುವ ಆಟಗಾರ ಚೆನ್ನೈ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 166 ರನ್ ಸಿಡಿಸಿ ಮಿಂಚುಹರಿಸುತ್ತಿದ್ದರೆ, ಇವರ ಬಳಿಕ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ 156ರನ್ ಬಾರಿಸಿ ಎದುರಾಳಿ ಪಾಳೆಯದಲ್ಲಿ ನಡುಕ ಹುಟ್ಟಿಸಿದ್ದಾರೆ. ಕೋಲ್ಕತ್ತಾ ತಂಡದ ರಾಹುಲ್ ತ್ರಿಪಾಠಿ 128ರನ್ ಮತ್ತು ಯುವ ಡ್ಯಾಶಿಂಗ್ ಓಪನರ್ ವೆಂಕಟೇಶ್ ಅಯ್ಯರ್ 126 ಸಿಡಿಸಿ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಈ ಎಲ್ಲಾ ಆಟಗಾರರು ಕೂಡ ಐಪಿಎಲ್‍ನಲ್ಲಿ ಅಬ್ಬರಿಸಿ ಹೆಚ್ಚಿನ ರನ್ ಬಾರಿಸಿ ಭವಿಷ್ಯದ ಟೀಂಇಂಡಿಯಾ ಆಟಗಾರರಾಗಿ ಗುರುತಿಸಿಕೊಳ್ಳಲು ಹಾತೊರೆಯುತ್ತಿದ್ದರೆ, ಅಭಿಮಾನಿಗಳ ಇವರ ಬ್ಯಾಟಿಂಗ್ ಅಬ್ಬರ ಕಂಡು ಐಪಿಎಲ್‍ನ್ನು ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಆರ್ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್