ನವದೆಹಲಿ: IPLನ 2023-27ರ ಅವಧಿಗೆ ಮಾಧ್ಯಮ ಪ್ರಸಾರದ ಹಕ್ಕು ಮಾರಾಟದ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಮೊದಲ ದಿನವೇ 100 ಕೋಟಿ ರೂ.ಗಳ ಗಡಿ ದಾಟಿದೆ. ಇಂದು ಹರಾಜು ಮುಕ್ತಾಯಗೊಳ್ಳಲಿದ್ದು, ಪ್ರಸಾರದ ಮೌಲ್ಯ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
Advertisement
2018-2022ರ ಅವಧಿಗೆ 16,348 ಕೋಟಿ ರೂಪಾಯಿಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್ ಇಂಡಿಯಾ, ಪ್ರತಿ ಪಂದ್ಯದ ಪ್ರಸಾರಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈ ಬಾರಿ 5 ವರ್ಷಗಳ ಅವಧಿಗೆ ಒಟ್ಟು 370 ಪಂದ್ಯಗಳು ನಡೆಯಲಿದ್ದು, BCCI 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿತ್ತು. ಆದರೆ ಹರಾಜಿನ ಮೊದಲ ದಿನ ಎರಡೇ ವಿಭಾಗಗಳಲ್ಲಿ ಪ್ರತಿ ಪಂದ್ಯದ ಪ್ರಸಾರದ ಮೌಲ್ಯ 100 ಕೋಟಿ ರೂಗಳ ಗಡಿ ದಾಟಿದೆ. ಇದನ್ನೂ ಓದಿ: ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಿಂದ ಹಿಂದೆ ಸರಿದ ಅಮೆಜಾನ್
Advertisement
Advertisement
ಇಂದು ಹರಾಜು ಪ್ರಕ್ರಿಯೆ ಮುಂದುವರಿಯುತ್ತಿದ್ದು, ಈ ಮೌಲ್ಯ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಈ ಬಾರಿ ಬಿಸಿಸಿಐ 4 ವಿಭಾಗಗಳಲ್ಲಿ ಹರಾಜು ನಡೆಸುತ್ತಿದೆ. ಈ ಪೈಕಿ ಭಾನುವಾರ ನಡೆದ ಟಿವಿ ಮತ್ತು ಡಿಜಿಟಲ್ ಮಾಧ್ಯಮ ಹಕ್ಕು ಮೌಲ್ಯ ಒಟ್ಟು 42,000 ಕೋಟಿ ರೂ.ಗೆ ಬಿಕರಿಯಾಗಿದೆ. ಈ ಎರಡೂ ವಿಭಾಗದ ಹಕ್ಕುಗಳ ಹರಾಜು ಮುಂದುವರಿದಿದ್ದು, 50,000 ಕೋಟಿ ರೂ. ದಾಟುವ ಸಾಧ್ಯತೆಯಿದೆ. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಕ್ರೀಸ್ ಬಿಟ್ಟು ಕೊಡದ ಪಾಂಡ್ಯ ನಡೆಗೆ ಟೀಕೆ
Advertisement
ಈ ಹರಾಜು ಪ್ರಕ್ರಿಯೆಯಿಂದ ಅಮೆಜಾನ್ ಹಿಂದೆ ಸರಿದಿದ್ದು, ರಿಲಯನ್ಸ್ ಒಡೆತನದ ವಯಾಕಾಂ 18, ಹಾಲಿ ಪ್ರಸಾರದ ಹಕ್ಕು ಹೊಂದಿರುವ ಡಿಸ್ನಿ (ಸ್ಟಾರ್), ಝೀ ಹಾಗೂ ಸೋನಿ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ವಯಾಕಾಮ್ 18 ಟಿವಿ, ಡಿಜಿಟಲ್ ಎರಡನ್ನೂ ತನ್ನದಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ 4 ಸಂಸ್ಥೆಗಳಲ್ಲದೇ ಟೈಮ್ಸ್ ಇಂಟರ್‌ನೆಟ್, ಫ್ಯಾನ್ ಕೋಟ್, ಫನ್‌ಏಷ್ಯಾ. ಡ್ರೀಮ್ ಇಲೆವೆನ್ ಹಾಗೂ ವಿದೇಶಿ ಸಂಸ್ಥೆಗಳು ಕೂಡ ಹರಾಜಿನಲ್ಲಿ ಪಾಲ್ಗೊಂಡಿವೆ.