ಮುಂಬೈ: 15ನೇ ಆವೃತ್ತಿ ಐಪಿಎಲ್‍ಗೆ ಸೇರ್ಪಡೆಗೊಂಡಿರುವ ನೂತನ ತಂಡ ಲಕ್ನೋ ಫ್ರಾಂಚೈಸ್‍ನ ಮೆಂಟರ್ ಆಗಿ ಭಾರತ ತಂಡದ ಮಾಜಿ ಆಟಗಾರ ಬಿಜೆಪಿ ಸಂಸದ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ.
Advertisement
ಟೀಂ ಇಂಡಿಯಾ ಪರ ಆರಂಭಿಕರಾಗಿ ಆಡುತ್ತಿದ್ದ ಗೌತಮ್ ಗಂಭೀರ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕಾಪಿಟಲ್ಸ್ ತಂಡದ ಪರ ನಾಯಕನಾಗಿ ಆಡಿದ್ದರು. ಕೋಲ್ಕತ್ತಾ ಪರ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದ ನಾಯಕರಾಗಿದ್ದರು. ಇದೀಗ ಮತ್ತೆ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಗಂಭೀರ್‌ಗೆ ಒಲಿದು ಬಂದಿದೆ. ಇದನ್ನೂ ಓದಿ: ಐಪಿಎಲ್‍ನ ನೂತನ ಫ್ರಾಂಚೈಸ್ ಲಕ್ನೋ ತಂಡದ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ
Advertisement
Lucknow IPL team appoints Gautam Gambhir as Team Mentor. Dr. Sanjiv Goenka welcomed Gautam Gambhir to the RPSG family.#IndianPremierLeague #LucknowIPLTeam #Cricket @IPL @GautamGambhir pic.twitter.com/B6zhFIuFb2
— RP Sanjiv Goenka Group (@rpsggroup) December 18, 2021
Advertisement
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಸಂಜೀವ್ ಗೋಯೆಂಕಾ ಗ್ರೂಪ್, ಲಕ್ನೋ ತಂಡ ಗೌತಮ್ ಗಂಭೀರ್ ಅವರನ್ನು ಮೆಂಟರ್ ಆಗಿ ತಂಡಕ್ಕೆ ಸೇರಿಸಿಕೊಂಡಿದೆ. ಆರ್‌ಪಿಎಸ್‌ಜಿ ಕುಟುಂಬಕ್ಕೆ ಸ್ವಾಗತ ಎಂದು ಬರೆದುಕೊಂಡಿದೆ. ನಿನ್ನೆ ಲಕ್ನೋ ಫ್ರಾಂಚೈಸ್ ಕೋಚ್ ಆಗಿ ಜಿಂಬಾಬ್ವೆ ತಂಡದ ಮಾಜಿ ನಾಯಕ ಆ್ಯಂಡಿ ಫ್ಲವರ್‌ರನ್ನು ನೇಮಿಸಿಕೊಂಡಿತ್ತು. ಇದೀಗ ಗಂಭೀರ್ ಕೂಡ ತಂಡ ಸೇರುವ ಮೂಲಕ ಉತ್ತಮವಾದ ತಂಡ ಕಟ್ಟುವ ಯೋಜನೆಯಲ್ಲಿ ಲಕ್ನೋ ತಂಡವಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್
Advertisement