ಅಹಮದಾಬಾದ್: ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡದ ಬೌಲರ್ ಚೇತನ್ ಸಕಾರಿಯಾ ರಾಜಸ್ಥಾನ ತಂಡದ ಜೆರ್ಸಿ ತೊಟ್ಟು ಚಿಯರ್ ಅಪ್ ಮಾಡಿದ್ದಾರೆ.
15ನೇ ಆವೃತ್ತಿ ಐಪಿಎಲ್‍ನಲ್ಲಿ ಚೇತನ್ ಸಕಾರಿಯಾ ಡೆಲ್ಲಿ ಕಾಪಿಟಲ್ಸ್ ಪರ ಆಡಿದ್ದರು. ಡೆಲ್ಲಿ ತಂಡ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿ ಲೀಗ್ ಪಂದ್ಯದಿಂದಲೇ ಹೊರಬಿದ್ದಿತು. ಆದರೆ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಸಕಾರಿಯಾ ರಾಜಸ್ಥಾನ ತಂಡದ ಜೆರ್ಸಿ ತೊಟ್ಟು ಸ್ಟೇಡಿಯಂನಲ್ಲಿ ಹಾಜರಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?
ಚೇತನ್ ಸಕಾರಿಯಾ 14ನೇ ಆವೃತ್ತಿ ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ರಾಜಸ್ಥಾನ ತಂಡದ ಪರ ಉತ್ತಮ ಪ್ರದರ್ಶನ ತೋರಿ ತನ್ನ ಬೌಲಿಂಗ್ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದರು. ನಂತರ ಕೊರೊನಾದಿಂದಾಗಿ ಐಪಿಎಲ್ ಅರ್ಧದಲ್ಲಿ ಸ್ಥಗಿತಗೊಂಡು ಮನೆಗೆ ಸಕಾರಿಯಾ ಹಿಂದಿರುಗುತ್ತಿದ್ದಂತೆ ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಸಂದರ್ಭ ತನಗೆ ಐಪಿಎಲ್‍ನಲ್ಲಿ ರಾಜಸ್ಥಾನ ತಂಡ ನೀಡಿದ ಹಣದಿಂದಾಗಿ ತಂದೆಗೆ ಗುಜರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿದ್ದೆ ಎಂದು ಸಕಾರಿಯಾ ರಾಜಸ್ಥಾನ ತಂಡದ ಸಹಾಯವನ್ನು ನೆನಪಿಸಿಕೊಂಡಿದ್ದರು. ಜೊತೆಗೆ ರಾಜಸ್ಥಾನ ತಂಡಕ್ಕೆ ಯಾವತ್ತು ಚಿರಋಣಿಯಾಗಿರುವುದಾಗಿ ಹೇಳಿಕೊಂಡಿದ್ದರು. ಅದರಂತೆ ಈ ಬಾರಿಯ ಫೈನಲ್‍ನಲ್ಲಿ ಸಕಾರಿಯಾ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿ ತಮ್ಮ ಈ ಹಿಂದಿನ ಮಾತಿನಂತೆ ನಡೆದುಕೊಂಡಿದ್ದಾರೆ. ಇದನ್ನೂ ಓದಿ: IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ
https://twitter.com/Joydip30406345/status/1530957263489290241
ಇದೀಗ ಸಕಾರಿಯಾರ ಈ ನಡೆ ಕುರಿತಾಗಿ ಅಭಿಮಾನಿಗಳು ಹೊಗಳಿಕೆ ವ್ಯಕ್ತಪಡಿಸುತ್ತಿದ್ದು, ಸಕಾರಿಯಾ ರಾಜಸ್ಥಾನ ತಂಡಕ್ಕೆ ಇಟ್ಟಿರುವ ನಿಷ್ಠೆ ತುಂಬಾ ಅಮೂಲ್ಯವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.