ಕೋಲಾರ: ಐಪಿಎಲ್ ಬೆಟ್ಟಿಂಗ್ ಕೋಲಾರದಲ್ಲಿ ಆಡಿಸುತ್ತಾ ತುಮಕೂರು ಬಳಿ ತಲೆ ಮರೆಸಿಕೊಂಡಿದ್ದ ಇಬ್ಬರು ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್‍ಗಳನ್ನು ಕೋಲಾರ ನಗರ ಪೊಲೀಸರು ಬಂಧಿಸಿದ್ದಾರೆ.
ಮುರುಗೇಶ್ ನಾಯಕ್, ರಾಹುಲ್ ಇಬ್ಬರನ್ನು ತುಮಕೂರಿನ ಕುಣಿಗಲ್ ಬಳಿ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಗಳನ್ನು ಕೋಲಾರ ನಗರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾರ್ ಒಂದರಲ್ಲಿ ಸಪ್ಲೇಯರ್ ಆಗಿರುವ ಕಿಂಗ್‍ಪಿನ್ ಮುರುಗೇಶ್ ಕೋಲಾರ ನಗರ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ಐಪಿಎಲ್ ಬೆಟ್ಟಿಂಗ್ ಆಡಿಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ: ಧ್ರುವನಾರಾಯಣ್
ಮುರುಗೇಶ್ ಜೊತೆ ಮತ್ತೊಬ್ಬ ಕಿಂಗ್‍ಪಿನ್ ರಾಹುಲ್‍ನನ್ನು ಕೂಡ ಬಂಧಿಸಲಾಗಿದ್ದು, ಎಸ್‍ಪಿಡಿ ದೇವರಾಜ್ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.