ಕೋಲ್ಕತ್ತಾ: ಐಪಿಎಲ್ ಹರಾಜಿನಲ್ಲಿ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ನಿಕೋಲಸ್ ಪೂರನ್ 10.75 ಕೋಟಿ ರೂ.ಗೆ ಸೇಲ್ ಆದ ಖುಷಿಗೆ ವಿಂಡೀಸ್ ಆಟಗಾರರಿಗೆ 15,000 ರೂ.ನ ಪಿಜ್ಜಾ ಆರ್ಡರ್ ಮಾಡಿ ಪಾರ್ಟಿ ನೀಡಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಭಾರತದಲ್ಲಿ ಏಕದಿನ ಮತ್ತು ಟಿ20 ಸರಣಿಗಾಗಿ ಭಾರತ ಪ್ರವಾಸದಲ್ಲಿದೆ. ಏಕದಿನ ಸರಣಿ ಬಳಿಕ ಇದೀಗ ಕೋಲ್ಕತ್ತಾದಲ್ಲಿ ಟಿ20 ಸರಣಿಗಾಗಿ ಕಠಿಣ ಬಯೋಬಬಲ್ನಲ್ಲಿದೆ. ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಪೂರನ್ 10.75 ಕೋಟಿ ರೂ. ನೀಡಿ ಸನ್ ರೈಸರ್ಸ್ ಹೈದರಾಬಾದ್ ತಂಡ ಖರೀದಿ ಮಾಡಿತ್ತು. ಇದರಿಂದ ಸಂತಸಗೊಂಡ ವಿಂಡೀಸ್ ಆಟಗಾರರು ಪೂರನ್ ಜೊತೆ ಪಾರ್ಟಿಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಪೂರನ್ ಪಿಜ್ಜಾ ಆರ್ಡರ್ ಮಾಡಿ ಪಾರ್ಟಿ ನೀಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್
ಟಿ20 ಸರಣಿಗಾಗಿ ವಿಂಡೀಸ್ ತಂಡದಲ್ಲಿರುವ ಪೂರನ್ ಮತ್ತು ತಂಡ ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ಬಯೋಬಬಲ್ನಲ್ಲಿದ್ದು, ಅಲ್ಲಿಗೆ ಹೊರಗಿನ ಫುಡ್ ತರುವಂತಿಲ್ಲ. ಹಾಗಾಗಿ ಹೋಟೆಲ್ನ ಚೆಫ್ ಜೊತೆ 15 ಪಿಜ್ಜಾ ಮಾಡಲು ತಿಳಿಸಿದ್ದಾರೆ. ಒಟ್ಟು 15,000 ರೂ. ಪಿಜ್ಜಾಗೆ ಖರ್ಚು ಮಾಡಿದ್ದಾರೆ ಎಂದು ಹೋಟೆಲ್ನ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಶಕೀಬ್ ಐಪಿಎಲ್ನಲ್ಲಿ ಮಾರಾಟವಾಗಲಿಲ್ಲ ಯಾಕೆ – ರಿವಿಲ್ ಮಾಡಿದ ಪತ್ನಿ
ಕಠಿಣ ಬಯೋಬಬಲ್ ನಡುವೆ ಪೂರನ್ ನೀಡಿದ ಪಿಜ್ಜಾ ಪಾರ್ಟಿಯಿಂದ ವಿಂಡೀಸ್ ಆಟಗಾರರು ಸಂತಸಗೊಂಡಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಇಂದು ಕೋಲ್ಕತ್ತಾದಲ್ಲಿ ನಡೆಯಲಿದೆ. ಈಗಾಗಲೇ ಎರಡು ತಂಡಗಳು ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.